ಹೂಚ್ ದುರಂತದ ಕಿಂಗ್‌ಪಿನ್ ಬಿಜೆಪಿ ಮುಖಂಡ; ರಿಷಿ ಶರ್ಮಾ ಬಂಧನ!

ಹೂಚ್ ದುರಂತ ಪ್ರಕರಣದ ಕಿಂಗ್‌ಪಿನ್ ಎಂದು ಹೇಳಲಾದ ರಿಷಿ ಶರ್ಮಾ ಅವರನ್ನು ಸೋಮವಾರ ಪಕ್ಷದಿಂದ ಬಿಜೆಪಿ ಹೊರಹಾಕಿದೆ.

ಬಿಜೆಪಿಯ ಜಿಲ್ಲಾಧ್ಯಕ್ಷ ರಿಷಿಪಾಲ್ ಪಾಲ್ ಸಿಂಗ್ ಅವರು ರಿಷಿ ಶರ್ಮಾ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಶರ್ಮಾ ಸೇರಿದಂತೆ ಎಲ್ಲಾ ಐದು ಪ್ರಮುಖ ಆರೋಪಿಗಳನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ದರೋಡೆಕೋರ ಕಾಯ್ದೆಯಡಿ ಅಲಿಗಡ್ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮದ್ಯ ಮಾಫಿಯಾದ ಸಂಪೂರ್ಣ ಜಾಲವನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಿಷಿ ಶರ್ಮಾ ಮಾರುವೇಷದಲ್ಲಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಹಾಪುರದ ಬಳಿಯ ಗರ್ಮುಖ್ತೇಶ್ವರದಲ್ಲಿರುವ ಆಶ್ರಮದಲ್ಲಿ ಸಾಧುಗಳ ಗುಂಪಿನ ನಡುವೆ ಅಡಗಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಮೇ 27 ರ ರಾತ್ರಿ ನಡೆದ ಹೂಜ್‌ ದುರಂತದಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದರು. ಘಟನೆಯ ವಿಡಿಯೋ ತುಣುಕೊಂದು ಪೊಲೀಸರಿಗೆ ದೊರೆತಿದ್ದು, ಅದರಲ್ಲಿ ರಿಷಿ ಶರ್ಮಾ ಕಾಣಿಸಿಕೊಂಡಿದ್ದರು.

ಕಳೆದ ವಾರದಲ್ಲಿ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಶರ್ಮಾ ಅವರ ಸಹಚರ ವಲಯದಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಶನಿವಾರ ಸಂಜೆ ಗರ್ಮುಖ್ತೇಶ್ವರ ಆಶ್ರಮದಲ್ಲಿ ಶರ್ಮಾ ಇರುವ ಸುಳಿದು ಪಡೆದ ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ.

Read Also: ಪಾಲಿಕೆ ಆಯುಕ್ತರ ಮೇಲೆ ಹಲ್ಲೆ; ಮೇಯರ್‌ ಸೇರಿ ಬಿಜೆಪಿ ಕೌನ್ಸಿಲರ್‌ಗಳ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights