ಅಮೇರಿಕದ ಯೋಧರ ಮೇಲೆ ದಾಳಿ ಮಾಡಿದರೆ ಹುಷಾರ್ : ತಾಲಿಬಾನ್‌ಗೆ ಜೋ ಬಿಡೆನ್ ಎಚ್ಚರಿಕೆ!

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಅಧ್ಯಕ್ಷ ಜೋ ಬಿಡೆನ್ ತಾಲಿಬಾನ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಅಫ್ಘಾನಿಸ್ತಾನದಿಂದ ಅಮೆರಿಕನ್ನರನ್ನು ಸ್ಥಳಾಂತರಿಸುವ ಬಗ್ಗೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ತಾಲಿಬಾನ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಭಯೋತ್ಪಾದಕ ಗುಂಪು ಯುಎಸ್ ಸೈನ್ಯದ ಮೇಲೆ ದಾಳಿ ಮಾಡಿದರೆ ಪ್ರತಿಕ್ರಿಯೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಜೊತೆಗೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆಲೆಸಿರುವ ಸಾವಿರಾರು ಅಮೆರಿಕನ್ ರಾಜತಾಂತ್ರಿಕರು ಮತ್ತು ಅಫ್ಘಾನ್ ಭಾಷಾಂತರಕಾರರನ್ನು ಸ್ಥಳಾಂತರಿಸಲು ಅಡ್ಡಿಪಡಿಸಬೇಡಿ ಅಥವಾ ಬೆದರಿಕೆ ಹಾಕಬೇಡಿ ಎಂದು ತಾಲಿಬಾನಿಗರಿಗೆ ಬಿಡನ್ ಹೇಳಿದ್ದಾರೆ. ಒಂದು ಯುಎಸ್ ಸೈನ್ಯದ ಮೇಲೆ ದಾಳಿ ಮಾಡಿದರೆ ಪ್ರತಿಕ್ರಿಯೆ ತ್ವರಿತ ಮತ್ತು ಬಲಶಾಲಿಯಾಗಿರುತ್ತದೆ ಎಂದು ಬಿಡೆನ್ ಶ್ವೇತಭವನದ ದೂರದರ್ಶನದ ಭಾಷಣದಲ್ಲಿ ಹೇಳಿದರು.

ನಾವು ನಮ್ಮ ಜನರನ್ನು ಅಪಾಯದಿಂದ ರಕ್ಷಿಸುತ್ತೇವೆ ಎಂದು ಬಿಡನ್ ಭರವಸೆ ನೀಡಿದ್ದಾರೆ. ಜೊತೆಗೆ ಆಫ್ಘಾನಿಸ್ತಾನದಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಬೂಲ್ ನಲ್ಲಿ ಸಿಕ್ಕಿಬಿದ್ದ ಅಫ್ಘಾನ್ ನಾಗರಿಕರ ನೋವು ಕರುಳು ಹಿಂಡುವಂತಿದೆ ಎಂದು ಬಿಡನ್ ಹೇಳಿದ್ದಾರೆ. ತಾಲಿಬಾನಿಗಳು ತಮ್ಮ ಆಡಳಿತವನ್ನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೇಗವಾಗಿ ದೇಶವನ್ನು ಸ್ವಾಧೀನಪಡಿಸಿಕೊಂಡು ನಡೆಸುತ್ತಿದೆ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights