ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಯಾಸ್ ಚಂಡಮಾರುತ ಬಗ್ಗೆ ವ್ಯಕ್ತಿಯೋರ್ವ ವರದಿಗಾರನಿಗೆ ನೀಡಿದ ಉತ್ತರ!

ಯಾಸ್ ಚಂಡಮಾರುತ ಒಡಿಶಾದಲ್ಲಿ ಭಾರೀ ಹಾನಿಯನ್ನುಂಟು ಮಾಡಿದ್ದು ಸ್ಥಳೀಯ ಭಯನಾಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ನಡುವೆ ಯಾಸ್ ಚಂಡಮಾರುತ ಬಗ್ಗೆ ವ್ಯಕ್ತಿಯೋರ್ವ ವರದಿಗಾರನಿಗೆ ನೀಡಿದ ಫಿನ್ನಿ ಆನ್ಸರ್ ವೈರಲ್ ಆಗಿದೆ.

ನಕ್ಸತ್ರಾ ನ್ಯೂಸ್‌ನ ನ್ಯೂಸ್ ಕ್ಲಿಪಿಂಗ್ ಆಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ನಕ್ಸತ್ರ ನ್ಯೂಸ್ ವರದಿಗಾರ, ಒಡಿಶಾದಲ್ಲಿ ಅತಿ ವೇಗದ ಗಾಳಿ ಮತ್ತು ಭಾರಿ ಮಳೆಯ ಮಧ್ಯೆಯೂ ಆ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಗೆ “ತೇಜ್ ಹವಾ ಚಲ್ ರಾಹಿ ಹೈ. ಟೂಫಾನ್ ಆನೆ ವಾಲಾ ಹೈ, ತೋಹ್ ಆಪ್ ಘರ್ ಸೆ ಕ್ಯುನ್ ನಿಕ್ಲೆ ಹೈ (ಚಂಡಮಾರುತ ಸಮೀಪಿಸುತ್ತಿರುವುದರಿಂದ ಬಲವಾದ ಗಾಳಿ ಬೀಸುತ್ತಿದೆ. ನೀವು ಮನೆಯಿಂದ ಏಕೆ ಹೊರಬಂದಿದ್ದೀರಿ)? ” ವರದಿಗಾರ ಆ ವ್ಯಕ್ತಿಯನ್ನು ಕೇಳಿದ.

ಆ ವ್ಯಕ್ತಿ ಪ್ರತಿಕ್ರಿಯೆ ಉಲ್ಲಾಸದಾಯಕವಾಗಿತ್ತು, “ಅರೆ ಆಪ್ ತೋಹ್ ನಿಕ್ಲೆ ಹೈನ್ ನಾ. ಆಪ್ ನಿಕಲ್ ಹೈನ್, ಇಸ್ಲಿಯೆ ಹಮ್ ನಿಕಲ್ (ನೀವು ಕೂಡ ಹೊರಬಂದಿದ್ದೀರಿ. ನೀವು ಹೊರಬಂದ ಕಾರಣ ನಾನು ಹೊರಬಂದೆ). ” ಇದಕ್ಕೆ ವರದಿಗಾರ, “ಹಮ್ಲಾಗ್ ತೋ ಖಬರ್ ದಿಖಾ ರಹೇ ಹೈನ್ ನಾ (ನಾವು ಸುದ್ದಿಗಳನ್ನು ಮಾಡುತ್ತಿದ್ದೇವೆ)” ಎಂದು ಹೇಳಿದರು.

ಆ ವ್ಯಕ್ತಿ ಮುಂದೆ ಹೇಳುತ್ತಾ: “ಹಮ್ ನಹಿ ನಿಕ್ಲೆ, ತೋಹ್ ಆಪ್ ಕಿಸ್ಕೊ ​​ಡಿಖಾಯೆಂಗೆ (ನಾವು ಹೊರಗುಳಿಯದಿದ್ದರೆ ನೀವು ಯಾರನ್ನು ತೋರಿಸುತ್ತೀರಿ)?” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮಾತಿಗೆ ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ಈ ವೀಡಿಯೊವನ್ನು ಇಲ್ಲಿಯವರೆಗೆ 77,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಆಲೋಚನೆಗಳನ್ನು ಕಾಮೆಂಟ್ ವಿಭಾಗದಲ್ಲಿ ಪೋಸ್ಟ್ ಮಾಡಿದ್ದರಿಂದ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights