ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಮೋದಿ ಫೋಟೋ ತೆಗೆದುಹಾಕಿ: ಕೇಂದ್ರ ಇಸಿ ಸೂಚನೆ

ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಕೊರೊನಾ ಲಸಿಕೆ ನೀಡುವು ಪ್ರಮಾಣಪತ್ರದಲ್ಲಿ ಮೋದಿ ಅವರ ಫೋಟೋವನ್ನು ಬಳಸುವುದು ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಟಿಎಂಸಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದರನ್ನು ಪರಿಗಣಿಸಿರುವ ಆಯೋಗವು ನೀತಿ ಸಂಹಿತೆಯ ನಿಬಂಧನೆಗಳನ್ನು ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದು, ಮೋದಿ ಅವರ ಫೋಟೋಗಳನ್ನು ತೆಗೆದುಹಾಕುವಂತೆ ತಿಳಿಸಿದೆ.

ಆಯೋಗವು ಆರೋಗ್ಯ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ನೀತಿ ಸಂಹಿತೆಯ ಕೆಲವು ನಿಬಂಧನೆಗಳನ್ನು ಉಲ್ಲೇಖಿಸಿದೆ. ಅದು ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಜಾಹೀರಾತಿನ ಬಳಕೆಯನ್ನು ನಿರ್ಬಂಧಿಸುತ್ತದೆ ಎಂದು ಹೇಳಿದೆ.

ಚುನಾವಣೆಗಳು ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಮತ್ತು ಪುದುಚೇರಿಯಲ್ಲಿ ಕೋವಿಡ್ -19 ಲಸಿಕೆ ಪಡೆಯುವವರಿಗೆ ನೀಡಿದ ಪ್ರಮಾಣಪತ್ರಗಳಲ್ಲಿ ಪ್ರಧಾನ ಮಂತ್ರಿಯ ಚಿತ್ರವನ್ನು ಮುದ್ರಿಸದಂತೆ ಆರೋಗ್ಯ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಕೋ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಉತ್ಪತ್ತಿಯಾಗುವ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರಗಳನ್ನು ಬಳಸುತ್ತಿರುವ ಬಗ್ಗೆ ಟಿಎಂಸಿ ನಾಯಕರು ಮಂಗಳವಾರ ಮತದಾನ ಸಮಿತಿಯನ್ನು ಸಂಪರ್ಕಿಸಿದ್ದರು. ಮೋದಿಯವರ ಚಿತ್ರಗಳನ್ನು ಬಳಸುವುದು ಬಂಗಾಳ ಮತ್ತು ಚುನಾವಣೆಯ ನಡೆಯುತ್ತಿರುವ ಇತರ ರಾಜ್ಯಗಳಲ್ಲಿನ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಮಾದರಿ ಸಂಹಿತೆಯ ಏಳನೇ ಷರತ್ತು “ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಜಾಹೀರಾತಿನ ನೀಡುವುದು ಮತ್ತು ಅಧಿಕಾರದಲ್ಲಿರುವ ಪಕ್ಷದ ಭವಿಷ್ಯದ ವರ್ಚಸ್ಸನ್ನು ಹೆಚ್ಚಿಸುವ ಉದ್ದೇಶದಿಂದ ಸಾಧನೆಗಳ ಬಗ್ಗೆ ಪ್ರಚಾರವನ್ನು ಮಾಡುವುವಂತಿಲ್ಲ” ಎಂದು ಹೇಳುತ್ತದೆ.

ಈ ಐದು ರಾಜ್ಯಗಳಲ್ಲಿ ಇಸಿ ಚುನಾವಣೆ ಘೋಷಿಸಿದ ದಿನವಾದ ಫೆಬ್ರವರಿ 26 ರಿಂದ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮಾದರಿ ಸಂಹಿತೆ ಜಾರಿಗೆಯಾಗಿದೆ.

ಇದನ್ನೂ ಓದಿ: ಒಂದು ದೇಶ- ಒಂದು ಚುನಾವಣೆಯೋ? ಒಂದು ಪಕ್ಷದ ಸರ್ವಾಧಿಕಾರವೋ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights