ಗುತ್ತಿಗೆ ಕೃಷಿ ಮಾಡುವ ಉದ್ದೇಶವಿಲ್ಲ: ರಿಲಯನ್ಸ್‌ ಕಂಪನಿ ಹೇಳಿದ ಮಹಾನ್ ಸುಳ್ಳು!

ಇಂದು ರಿಲಾಯನ್ಸ್ ಸಂಸ್ಥೆ ಮುದ್ದಾಂ ಆಗಿ ಬಹಳ ಎಚ್ಚರಿಕೆಯಿಂದ ಡ್ರಾಫ್ಟ್ ಮಾಡಿದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ತಾನು ಈ ಹಿಂದೆಯಾಗಲೀ ಇನ್ನು ಮುಂದೆಯಾಗಲೀ “ಕಾಂಟ್ರಾಕ್ಟ್” ಮತ್ತು “ಕಾರ್ಪೋರೇಟ್” ಫಾರ್ಮಿಂಗ್ ನಲ್ಲಿ ತೊಡಗಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ಹೇಳಿದೆ. ಪತ್ರಿಕಾ ಹೇಳಿಕೆಗೆ ಇಲ್ಲಿ ಕ್ಲಿಕ್ ಮಾಡಿ.

6700 ಕ್ಕೂ ಹೆಚ್ಚು ನಗರಗಳಲ್ಲಿ ವರ್ಷಕ್ಕೆ 1,30,566 ಕೋಟಿ ರೂ.ಗಳ ವ್ಯವಹಾರ (2018-19) ನಡೆಸುವ ರಿಲಾಯನ್ಸ್ ರಿಟೇಲ್ ಲಿಮಿಟೆಡ್ ತನ್ನ ಕಚ್ಛಾಮಾಲುಗಳನ್ನು ಹೇಗೆ ಸಂಗ್ರಹಿಸುತ್ತದೆ, ಅದರ ಗುಣಮಟ್ಟವನ್ನು ಹೇಗೆ ಪರಿಶೀಲಿಸಿ ನಿಯಂತ್ರಿಸುತ್ತದೆ ಎಂಬ ಕುತೂಹಲದಿಂದ, ಅವರ ವೆಬ್ ಸೈಟ್ ಗಳನ್ನು ತಡಕಾಡಿದಾಗ ಸಿಕ್ಕಿದ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

  • ರಿಲಾಯನ್ಸ್ ಫ್ರೆಶ್ ತನ್ನ ವೆಬ್ ಸೈಟಿನಲ್ಲಿ Continuing Reliance’s hallowed tradition of backward integration, Reliance Retail directly partners with a large number of farmers and small vendors in a farm-to-fork model ಎಂದು ಹೇಳುತ್ತದೆ. ಇಲ್ಲಿ ಫಾರ್ಮ್ ಟು ಫೋರ್ಕ್ (ಗದ್ದೆಯಿಂದ ಊಟದ ಬಟ್ಟಲ ತನಕ) ರೈತರ ಜೊತೆ ಪಾಲುದಾರಿಕೆ ಎಂಬ ಬಹಳ ಅಸ್ಪಷ್ಟವಾದ ಮಾಹಿತಿ ಸಿಗುತ್ತದೆ.
  • ಗಮನಾರ್ಹವಾದ ಮಾಹಿತಿ ಸಿಕ್ಕಿದ್ದು, ರಿಲಾಯನ್ಸ್‌ನ ಸ್ವಯಂಸೇವಾ ವಿಂಗ್ ಆಗಿರುವ ರಿಲಾಯನ್ಸ್ ಫೌಂಡೇಷನ್ ವೆಬ್ ಸೈಟಿನಲ್ಲಿ. ಅಲ್ಲಿ, ಅವರ “Reliance Foundation Bharat India Jodo (RF BIJ) ಕಾರ್ಯಕ್ರಮದಡಿ, ಅವರು ಬಹಳ ಸ್ಪಷ್ಟವಾಗಿ ತಮ್ಮ ಸಂಸ್ಥೆಯು ಸೆಪ್ಟಂಬರ್ 2020ರ ಹೊತ್ತಿಗೆ ದೇಶದ 12 ರಾಜ್ಯಗಳಲ್ಲಿ 26 FPO (ರೈತ ಉತ್ಪಾದಕ ಸಂಸ್ಥೆಯ)ಗಳಿಗೆ MENTOR ಆಗಿ ಕೆಲಸ ಮಾಡಿರುವ ಬಗ್ಗೆ ಮತ್ತು ಅವು ಒಟ್ಟಾಗಿ 50 ಕೋಟಿ ರೂಗಳ ವ್ಯವಹಾರ ಮಾಡಿರುವ ಬಗ್ಗೆ ಹೇಳುತ್ತಾರೆ. (ಅದರ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ). ಅಲ್ಲಿ ನೀಡಲಾಗಿರುವ ವಿವರಗಳೆಲ್ಲ, ಈಗ ಸರ್ಕಾರ ತಂದಿರುವ ಹೊಸ ಕೃಷಿ ನೀತಿಗೆ ಅನುಗುಣವಾಗಿಯೇ ಇರುವುದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ.
  • ಈ ನಡುವೆ, ಒರಿಸ್ಸಾದಲ್ಲಿ ರಿಲಾಯನ್ಸ್ ಫ್ರೆಷ್ ವ್ಯವಹಾರಗಳ ಮಾಡೆಲ್ ಬಗ್ಗೆ ಅಧ್ಯಯನ ನಡೆಸಿರುವ ಉತ್ಕಲ ವಿವಿಯ ವ್ಯವಹಾರ ಆಡಳಿತ ವಿಭಾಗದ ಅಧ್ಯಯನ ತಂಡದ ಅಂತಾರಾಷ್ಟ್ರೀಯ ಸೆಮಿನಾರ್ ಪೇಪರ್ ಒಂದು, ರಿಲಾಯನ್ಸ್ ಫ್ರೆಷ್‌ನ SWOT ವಿಶ್ಲೇಷಣೆ ಮಾಡಿದೆ. ಅದರಲ್ಲಿ “ಕಾಂಟ್ರಾಕ್ಟ್ ಫಾರ್ಮಿಂಗ್” ಸಂಸ್ಥೆಯ ತಾಕತ್ತುಗಳಲ್ಲಿ ಒಂದು ಎಂದು ದಾಖಲಿಸಲಾಗಿದೆ. (ಆ ಸೆಮಿನಾರ್ ಪೇಪರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ)
  • ರಿಲಾಯನ್ಸ್ ಅಂಬಾನಿ ಬಳಗ ಈ ತನಕ ಕಾಂಟ್ರಾಕ್ಟ್/ಕಾರ್ಪೋರೇಟ್ ಫಾರ್ಮಿಂಗಿಗೆ ಇಳಿದಿದೆಯೋ ಇಲ್ಲವೇ ಎಂಬುದಕ್ಕಿಂತಲೂ, ಸರ್ಕಾರದ ಈಗಷ್ಟೇ ಹೊರಬರುತ್ತಿರುವ “ಹೊಸ ಕೃಷಿ” ನೀತಿಗೆ ಈ ಸಂಸ್ಥೆಯ ಬಹಳ ಹಿಂದೆಯೇ ಸೂಕ್ತ ತಯಾರಿ ನಡೆಸಿದೆ, ರಂಗ ಸಜ್ಜುಮಾಡಿಟ್ಟುಕೊಂಡಿದೆ ಎಂಬುದು ಸ್ಪಷ್ಟ. ಇಲ್ಲಿ ಕಾನೂನು ಬಾಹಿರ ಏನೂ ಇಲ್ಲದಿರಬಹುದು. ಆದರೆ, ಅನೈತಿಕ ಅನ್ನಿಸಬಹುದಾದದ್ದು ಬಹಳ ಇದೆ ಎಂಬುದರಲ್ಲಿ ಏನೂ ಸಂಶಯ ಇಲ್ಲ.

ಈಗ ದಿಲ್ಲಿಯಲ್ಲಿ ಸೇರಿರುವ ರೈತರು ಚೆನ್ನಾಗಿಯೇ ಬಿಸಿ ಮುಟ್ಟಿಸಿರುವುದರಿಂದ, ಮೂಗು ಒತ್ತಿಹೋಗಿರುವುದರಿಂದ ಅಂಬಾನಿ ಬಳಗಕ್ಕೆ ಬಾಯಿ ಕಳೆಯದೇ ಬೇರೆ ದಾರಿ ಇಲ್ಲವಾಗಿದೆ.


ಇದನ್ನೂ ಓದಿ: ಹೆಣ್ಣುಮಕ್ಕಳ ವಿದ್ಯಾಭ್ಯಾಸ: ವಿದ್ಯಾರ್ಥಿನಿಯರಿಗೆ ಪ್ರತಿದಿನ 100 ರೂ. ಪ್ರೋತ್ಸಾಹಧನ ನೀಡುವುದಾಗಿ ಅಸ್ಸಾಂ ಸರ್ಕಾರ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights