ತಿಹಾರ್ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ 3,000 ಕ್ಕೂ ಹೆಚ್ಚು ಕೈದಿಗಳು ಕಾಣೆ..!

ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಜನದಟ್ಟಣೆ ತಪ್ಪಿಸಲು ತಿಹಾರ್ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ 3,000 ಕ್ಕೂ ಹೆಚ್ಚು ಕೈದಿಗಳು ಕಾಣೆಯಾಗಿದ್ದಾರೆ.

ಹೌದು.. ಕೊರೊನಾ ಎಂಬ ಮಹಾಮಾರಿಯಿಂದಾಗಿ ಜನ ಸಾಮಾನ್ಯರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ನೈಟ್ ಕರ್ಫ್ಯೂ ಲಾಕ್ ಡೌನ್ ಹೀಗೆ ನಾನಾ ನಿಯಮಗಳಿಂದ ಜನರ ಶೈಲಿಯೆ ಬದಲಾಗಿದೆ. ಮಹಾಮಾರಿಯಿಂದಾಗಿ ಅನೇಕ ಮಂದಿ ತಮ್ಮ ಆಪ್ತರನ್ನು ಕಳೆದುಕೊಂಡರೆ, ಇನ್ನು ಕೆಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ಮಹಾಮಾರಿಯ ಭಯ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಸದ್ಯ ಈ ಕೊರೊನಾದಿಂದಾಗಿ ದಕ್ಷಿಣ ಏಷ್ಯಾದ ತಿಹಾರ್ ಜೈಲಿನ ಕೈದಿಗಳು ನಾಪತ್ತೆಯಾಗಿದ್ದಾರೆ. ಕೊರೊನಾದಿಂದಾಗಿ ಪೆರೋಲ್ ಮೇಲೆ ಹೊರಗೆ ಕಳುಹಿಸಿದ್ದ ಕೈದಿಗಳು ಮರಳಿ ಬಂದೇ ಇಲ್ಲ.

ಕೊರೊನಾದಿಂದ ಪಾತರಾಗಲು ಗುಂಪು ಸೇರದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಿರುವಾಗ 2020ರಲ್ಲಿ ಎಚ್ಐವಿ, ಕ್ಯಾನ್ಸರ್, ಕಿಡ್ನಿ ಕಸಿ, ಅಸ್ತಮಾ,ಟಿಬಿ ಇಂಥ ರೋಗಗಳಿಂದ ಬಳಲುತ್ತಿದ್ದ ತಿಹಾರ್ ಜೈಲಿನ 6,740 ಮಂದಿ ಕೈದಿಗಳನ್ನು ಪೆರೊಲ್ ಮೇಲೆ ಹೊರ ಕಳುಹಿಸಲಾಗಿತ್ತು. ಆದರೆ ಇವರಲ್ಲಿ 3,468 ಕೈದಿಗಳು ವಾಪಸ್ಸು ಬಂದಿಲ್ಲ.

ಕೊರೊನಾತಂಕದ ನಡುವೆ ಕೈದಿಗಳು ಹಿಂತಿರುಗದಿರುವುದು ತಿಹಾರ್ ಜೈಲು ಅಧಿಕಾರಿಗಳಿಗೆ ಮತ್ತೊಂದು ತಲೆ ನೋವಾಗಿದೆ. ಕೈದಿಗಳನ್ನು ಮರಳಿ ಹೇಗೆ ಜೈಲಿಗೆ ಕರೆತರುವುದು ಎಂದು ತಿಳಿಯದ ಜೈಲು ಅಧಿಕಾರಿಗಳು ಸಹಾಯಕ್ಕಾಗಿ ದೆಹಲಿ ಪೊಲೀಸರ ಮೊರೆ ಹೋಗಿದ್ದಾರೆ.

ಇನ್ನು ಸದ್ಯ ದೇಶದಲ್ಲಿ ಕೊರೊನಾ 2ನೇ ಅಲೆ ಎಂಟ್ರಿ ಕೊಟ್ಟಿದ್ದು ಇಂದು 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights