ಮಕ್ಕಳೇ ರೆಡಿಯಾಗಿ.. ಫೆ.22ಕ್ಕೆ ರಾಜ್ಯದಲ್ಲಿ 6-8ನೇ ತರಗತಿ ಶಾಲೆಗಳು ಆರಂಭ..!

ಕೊರೊನಾ ಕಾರಣ ಬಂದ್ ಮಾಡಲಾಗಿದ್ದ ಶಾಲೆಗಳು ನಿಧಾನವಾಗಿ ಪುನರಾರಂಭಿಸಲಾಗುತ್ತಿದೆ. ಫೆಬ್ರವರಿ 22ಕ್ಕೆ 6-8ನೇ ತರಗತಿ ಶಾಲೆಗಳು ಆರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಹೌದು.. ಈಗಾಗಲೇ ರಾಜ್ಯದಲ್ಲಿ ಫೆಬ್ರವರಿ 1ರಿಂದ ದ್ವಿತೀಯ ಪಿಯುಸಿ, ಪ್ರಥಮ ಪಿಯುಸಿ, 10, 9ನೇ ತರಗತಿಗಳನ್ನು ಆರಂಭಿಸಲಾಗಿದೆ. ಶಾಲೆಗಳಿಗೆ ಮಕ್ಕಳು ಹಾಜರಾಗುತ್ತಿದ್ದಾರೆ.  1-5ನೇ ತರಗತಿ ಮಕ್ಕಳಿಗೆ ವಿದ್ಯಾಗಮನ ಆರಂಭಿಸಲು ನಿರ್ಧರಿಸಿದ್ದಾರೆ.

ವಾಯ್ಸ್ ಆಫ್ ಪೇರೆಂಟ್ಸ್ ರಾಜ್ಯ ಕಾರ್ಯದರ್ಶಿ ರಾಜ್ಯ ಕಾರ್ಯದರ್ಶಿ, ” ಇಷ್ಟು ತುರ್ತಾಗಿ 6-8ನೇ ತರಗತಿ ಶಾಲೆಗಳನ್ನು ಆರಂಭಮಾಡುವುದು ಸರಿಯಾದ ನಿರ್ಧಾರ ಅಲ್ಲ. 6ನೇ 8ನೇ ತರಗತಿ ಮಕ್ಕಳು ಚಿಕ್ಕವರು ಅವರಿಗೆ ಮುಖಕ್ಕೆ ಮುಖವಾಡ ಹಾಕಿಕೊಂಡೇ ಇರುವುದು ಅರೋಗ್ಯಕ್ಕೆ ತೊಂದರೆ ಮಾಡುತ್ತದೆ. ಸರ್ಕಾರ ಪೋಷಕರ ಮೇಲೆ ಗೂಬಿ ಕೂಡಿಸಿ ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದೆ. ಖಾಸಗಿ ಶಾಲೆಗಳ ಲಾಭಕ್ಕೆ ಸರ್ಕಾರ ಕೈ ಜೋಡಿಸುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿಲ್ಲ. ಪೋಷಕರ ಮೇಲೆ ಹಾಕಿ ನುಣುಚಿಕೊಳ್ಳುತ್ತಿದೆ. ಪೋಷಕರಿಗೆ ಇನ್ನೂ ಭಯ ಇದೆ. ಇನ್ನೂ ಕೆಲ ತಿಂಗಳು ಕಾಯಬಹುದು” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights