RBI : ಬ್ಯಾಂಕುಗಳಿಗೆ ಮತ್ತಷ್ಟು ಹಣ – ಸಾಲಕ್ಕೆ ಇಲ್ಲ ಬೇಡಿಕೆ, ಕರಗಿಸೋದು ಹೇಗೆಂಬುದೇ ಚಿಂತೆ..

ಲಾಕ್‌ಡೌನಿನಿಂದಾಗಿ ದೇಶದ ವಿತ್ತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳೇ ಉಂಟಾಗಿವೆ. ಬೇಡಿಕೆ ಎಂಬುದು ಹಿಂದೆಂದೂ ಇಲ್ಲದ ಮಟ್ಟಕ್ಕೆ ಕುಸಿದಿದೆ. ಬೇಡಿಕೆ ಕುಸಿತದಿಂದ ಪೂರೈಕೆಗೆ ಬಾರಿ ಪೆಟ್ಟು ಬಿದ್ದಿದೆ… ಬೇಡಿಕೆಯನ್ನು ಹೆಚ್ಚಿಸಿಸ ಇಕಾನಮಿಗೆ ಕಾಯಕಲ್ಪ ನೀಡಲು RBI ಏನೆಲ್ಲೆ ಕಸರತ್ತು ಮಾಡುತ್ತಲೇ ಇದೆ. RBI ಕ್ರಮಗಳಿಂದಾಗಿ ಈಗ ಬ್ಯಾಂಕುಗಳ ಭಂಡಾರ ತುಂಬಿದೆ.

ಆದರೆ ಈ ಕಾಸನ್ನು ಕರಗಿಸುವುದು ಹೇಗೆ ಎಂಬುದೇ ಬ್ಯಾಂಕುಗಳಿಗೆ ಚಿಂತೆಯಾಗಿದೆ. ಲಾಕ್‌ಡೌನ್ ಲಾಗಾಯ್ತು ಸಾಲಕ್ಕೆ ಬೇಡಿಕೆ ಅಲ್ಪ ಮಟ್ಟಕ್ಕೆ ಕುಸಿದಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎಂದರೇ ಬ್ಯಾಂಕುಗಳು ಸಾಲ ಕೊಡ್ತೀವಿ ಬನ್ನಿ ಎಂದರೂ ಜನ ಸಾಲ ಕೇಳಲು ಮುಂದಾಗುತ್ತಿಲ್ಲ. ಉದ್ಯಮಗಳದ್ದೂ ಇದೇ ನಿಲುವಾಗಿದೆ.

ಪರಿಸ್ಥಿತಿ ಸಂಫೂರ್ಣವಾಗಿ ಸ್ಥಿತವಾಗುವ ತನಕ ಹೊರೆ ಹೆಚ್ಚಸಿಕೊಳ್ಳದೇ ಇರುವ ಕಾಸನ್ನು ಹಿಡಿದಿಟ್ಟುಕೊಳ್ಳಲು ಜನ ಮುಂದಾಗಿರುವುದು ಸಾಲದ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ. ಇನ್ನೂ ಕೆಲವರು ಸಾಲ ಮಂಜೂರಾಗಿದ್ದರೂ ಅದನ್ನು ಇನ್ನಷ್ಟು ದಿನ ಬ್ಯಾಂಕಿನಲ್ಲಿಯೇ ಉಳಿಸಿಕೊಳ್ಳುವಂತೆ ಮೊರೆ ಇಡುತ್ತಿದ್ದಾರೆಂದು ಬ್ಯಾಂಕ್‌ ಮೂಲಗಳು ಹೇಳಿವೆ.

ಈ ಮಧ್ಯೆRBI ಬಡ್ಡಿ ದರಗಳಲ್ಲಿ ಮಹತ್ವದ ಕಡಿತ ಮಾಡಿರುವುದೇ ಅಲ್ಲದೇ EMI ಪಾವತಿ ಮೇಲಿನ ತಡೆಯನ್ನು ಮತ್ತೆ ಮೂರು ತಿಂಗಳು ಮುಂದುವರಿಸಿದೆ. RBI ರೆಪೋ ದರವನ್ನು ಶೇ.4ರಷ್ಟು ಇಳಿಸಿದೆ. ಇದರಿಂದ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ಕಡಿಮೆಯಾಗಲಿದೆ.

ಇದರ ಜೊತೆಗೇ ರಿವರ್ಸ್ ರೆಪೋ ದರವನ್ನು ಶೇ.3.75ರಿಂದ ಶೇ.3.35ಕ್ಕೆ ಇಳಿಸಿದ್ದು ಇದರಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಗೂ ಹಣ ತುಂಬಲಿದೆ. ಇದೇ ರೀತಿ ಮುಂದಿನ ಮೂರು ತಿಂಗಳವರೆಗೂ ಇಎಂಐ ಕಟ್ಟುವಂತಿಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಕ್ರೆಡಿಟ್ ಕಾರ್ಡ್ ಸಾಲಕ್ಕೂ ಇಎಂಐ ವಿನಾಯಿತಿಯನ್ನು ನೀಡಲಾಗಿದೆ.

ಲಾಕ್‌ಡೌನ್ ಜಾರಿಗೆ ಬಂದಾಗಿನಿಂದಲೂ ರಿಸರ್ವ್‌ ಬ್ಯಾಮಕು ಕ್ರಿಯಾಶೀಲವಾಗಿದ್ದು ಬ್ಯಾಂಕಿಂಗ್ ವ್ಯವಸ್ಥೆಗೆ ಹಣ ತುಂಬುವ ಕೆಲಸದಲ್ಲಿ ನಿರತವಾಗಿದೆ. ಕಳೆದ ತಿಂಗಳು ಅದು ಮಾಡಿದ ಘೋಷಣೆಗಳಿಂದಾಗಿ ಆರ್ಥಿಕತೆಗೆ ಎಂಟು ಲಕ್ಷ ಕೀಟಿ ರೂಗಳಷ್ಟು ಹಣದ ಹರಿವು ಸಾಧ್ಯವಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights