ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ!

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಐಪಿಎಲ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಐಪಿಎಲ್‌ನ 12 ಸರಣಿಗಳಲ್ಲಿ ಉತ್ತಮ ಆಟ ಆಡಿರುವ ರವೀಂದ್ರ ಜಡೇಜಾ  2 ಸಾವಿರ ರನ್ ಮತ್ತು 110 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಶುಕ್ರವಾರ ನಡೆದ ಸನ್ ರೈಸರ್ಸ್ ವಿರುದ್ಧದ ಪಂದ್ಯದ ಮೂಲಕ ಜಡೇಜಾ ಈ ಸಾಧನೆ ಮಾಡಿದ್ದಾರೆ. 165 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ಪರ ಅರ್ಜುನ ಪ್ರಶಸ್ತಿ ವಿಜೇತ ಜಡೇಜಾ ಕೇವಲ 35 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಇದರಲ್ಲಿ 2 ಸಿಕ್ಸರ್ ಐದು ಬೌಂಡರಿಗಳು ಸೇರಿದ್ದವು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 2000 ರನ್ ಮತ್ತು 110 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಶ್ರೇಯಕ್ಕೆ ರೌಂಡರ್ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.

ಐಪಿಎಲ್ ನಲ್ಲಿ ರವೀಂದ್ರ ಜಡೇಜಾ ಒಟ್ಟು 174 ಪಂದ್ಯಗಳನ್ನಾಡಿದ್ದು, ಈ ಪೈಕಿ ಚೆನ್ನೈ ತಂಡದ ಮೂಲಕ 106 ಪಂದ್ಯವನ್ನು ಮತ್ತು ಗುಜರಾತ್ ಲಯನ್ಸ್ ಮೂಲಕ 27 ಪಂದ್ಯಗಳನ್ನು, ಕೊಚ್ಚಿ ಟಸ್ಕರ್ಸ್ ನಲ್ಲಿ 14 ಮತ್ತು 27 ಪಂದ್ಯವನ್ನು ರಾಜಸ್ತಾನ ರಾಯಲ್ಸ್ ತಂಡದಪರವಾಗಿ ಆಡಿದ್ದಾರೆ.


ಇದನ್ನೂ ಓದಿ: ಪ್ರಿಯಾಂಕ-ರಾಹುಲ್‌ ಮೇಲೆ ಮ್ಯಾನ್‌ ಹ್ಯಾಂಡಲಿಂಗ್‌: 24 ಗಂಟೆ ಬಳಿಕ ಕ್ಷಮೆ ಕೋರಿದ ಯುಪಿ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights