ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ನಿಧನ!

ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಮಧ್ಯರಾತ್ರಿ 1 ಗಂಟೆಗೆ ವಿಧಿವಶರಾಗಿದ್ದಾರೆ.  62 ವರ್ಷದ ರವಿ ಬೆಳಗೆರೆ ಬೆಂಗಳೂರಿನ ಹಾಯ್​ ಬೆಂಗಳೂರು ಪತ್ರಿಕೆಯ ಕಚೇರಿಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.

ಕನಕಪುರ ಮುಖ್ಯ ರಸ್ತೆಯ ಗುಬ್ಳಾಳದ ಕರಿಶ್ಮಾ ಹಿಲ್ಸ್​ನ ರವಿ ಬೆಳಗೆರೆಯವರ ನಿವಾಸದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ರವಿ ಬೆಳಗೆರೆಯವರ ಕನಸಿನ ಕೂಸಾಗಿದ್ದ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಅವರಣಕ್ಕೆ ಮೃತದೇಹವನ್ನು ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ.

ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

1958ರ ಮಾರ್ಚ್ 15ರಂದು ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಲಂಕೇಶ್​ ಪತ್ರಿಕೆ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಬಳಿಕ ಹಾಯ್ ಬೆಂಗಳೂರು ಪತ್ರಿಕೆ, ಓ ಮನಸೇ ಮ್ಯಾಗಜಿನ್ ಪ್ರಕಟಿಸಿದ್ದರು. ಅನೇಕ ಪ್ರಸಿದ್ಧ ಕಾದಂಬರಿಗಳು, ಕತೆಗಳು, ಅನುವಾದಿಗಳು, ಜೀವನಚರಿತ್ರೆಗಳನ್ನು ರವಿ ಬೆಳಗೆರೆ ಬರೆದಿದ್ದರು. ತಮ್ಮ ವಿಶೇಷವಾದ ಬರಹ ಶೈಲಿಯ ಮೂಲಕ ವಿಶೇಷವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.


ಇದನ್ನೂ ಓದಿ: ಮುಗಿಯದ ಸಿಎಂ ಗೋಳು: ಬಿಎಸ್‌ವೈ ಮುಂದೆ ಸಂಪುಟದ ಕಗ್ಗಂಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights