ಪಡಿತರಿಗೆ ಸಿಗಲಿದೆ ಜೋಳ-ರಾಗಿ; ನೂತನ ಸಚಿವ ಉಮೇಶ್ ಕತ್ತಿ ಭರವಸೆ!

ಸಚಿವ ಸಂಪುಟಕ್ಕೆ ಹೊಸದಾಗಿ ಆಯ್ಕೆಯಾದವರಿಗೆ ಖಾತೆಗಳ ಹಂಚಿಕೆ ಮಾಡಲಾಗಿದ್ದು, ಉಮೇಶ್‌ ಕತ್ತಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ. ಖಾತೆಯ ಜವಾಬ್ದಾರಿ ತೆರೆದುಕೊಂಡ ನಂತರ ಮಾತಾಡಿರುವ ಸಚಿವ ಪಡಿತರ ಚೀಟಿದಾರರಿಗೆ ಜೋಳ, ರಾಗಿ ದೊರೆಯುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮಂತ್ರಿಯಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ಬಿಪಿಎಲ್ ಪಡಿತರದಾರರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತೇನೆ. ಪಡಿತರ ಚೀಟಿ ದಾರರಿಗೆ ಜೋಳ, ರಾಗಿ ದೊರೆಯುವಂತೆಯೂ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆಯೂ 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ನನಗೆ ಮಂತ್ರಿ ಸ್ಥಾನ ಹೊಸದೇನು ಅಲ್ಲ. ಜನರಿಗೆ ಒಳಿತಾಗುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸದ್ಯ, ಪಡಿತರದಾರರಿಗೆ ಅಕ್ಕಿ ಮತ್ತು ಗೋಧಿಯನ್ನು ನೀಡಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ತಲಾ 10 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಅಲ್ಲದೆ, ಒಂದು ಪಡಿತರ ಚೀಟಿಗೆ ಒಂದು ಲೀ. ಅಡುಗೆ ಎಣ್ಣೆ ಮತ್ತು ಸಕ್ಕರೆಯನ್ನೂ ನೀಡಲಾಗುತ್ತಿತ್ತು. ಅದೆಲ್ಲದಕ್ಕೂ ಬ್ರೇಕ್‌ ಹಾಕಲಾಗಿದ್ದು, ಈಗ ತಲಾ 05 ಕೆಜೆ ಅಕ್ಕಿ ಮತ್ತು ಒಂದು ಪಡಿತರ ಚೀಟಿಗೆ 2 ಕೆ.ಜಿ ಗೋಧಿಯನ್ನಷ್ಟೇ ನೀಡಲಾಗುತ್ತಿದೆ.

ಇದನ್ನೂ ಓದಿ: ಸಚಿವರಿಗೆ ಖಾತೆ ಹಂಚಿಕೆ; ಹಲವು ಸಚಿವರ ಖಾತೆ ಬಲದಲಾವಣೆ! ಅಧಿಕೃತ ಪಟ್ಟಿ ಇಲ್ಲಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights