ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಮಧ್ಯಪ್ರದೇಶ ಸರ್ಕಾರ, ಡಿಜಿಪಿಗೆ ಎನ್‌ಎಚ್‌ಆರ್‌ಸಿ ನೋಟಿಸ್

ಮಧ್ಯಪ್ರದೇಶದ ಉಮರಿಯಾ ನಗರದಲ್ಲಿ ನಡೆದಿದ್ದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಧ್ಯಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಎನ್‌ಎಚ್‌ಆರ್‌ಸಿ ನೋಟಿಸ್ ಕಳುಹಿಸಿದೆ. ಅಲ್ಲದೆ, ನಾಲ್ಕು ವಾರಗಳಲ್ಲಿ ವಿವರವಾದ ವರದಿಯನ್ನು ನೀಡಬೇಕು ಎಂದು ಕೋರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

“ಭೀಕರ ಘಟನೆ”ಯು ಈ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗೆ “ಪ್ರಶ್ನಾರ್ಥಕ ಚಿಹ್ನೆ” ಯನ್ನು ನೀಡುತ್ತದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ಹೇಳಿದೆ.

“ಮಧ್ಯಪ್ರದೇಶದ ಉಮರಿಯಾ ನಗರದಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆಯೋಗವು ಸುಯೋ ಮೋಟು ಕಾಗ್ನಿಜೆನ್ಸ್ ತೆಗೆದುಕೊಂಡಿದೆ.

ಇದನ್ನೂ ಓದಿ: ಮದುವೆಯ ನೆಪದಲ್ಲಿ ಅತ್ಯಾಚಾರ : ಪೈಲಟ್ ವಿರುದ್ಧ ಟಿವಿ ನಟಿ ಆರೋಪ…!

ನಾಲ್ಕುವಾರಗಳಲ್ಲಿ ವರದಿ ನೀಡಬೇಕು. ವರದಿಯಲ್ಲಿ ಉಳಿದ ಆರೋಪಿಗಳ ಬಂಧನ, ಸಂತ್ರಸ್ತರಿಗೆ ನೀಡಲಾದ ಸಮಾಲೋಚನೆ, ಪರಿಹಾರ ಮತ್ತು ಪುನರ್ವಸತಿ ಬಗ್ಗೆ ವಿವರಗಳನ್ನು ಒದಗಿಸನಬೇಕು ನೋಟಿಸ್‌ನಲ್ಲಿ ತಿಳಿಸಲಾಗಿದೆ.

“ಈ ಘಟನೆಯು ಸಂತ್ರಸ್ತೆಯ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ನಾಗರಿಕರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವ ನಿರೀಕ್ಷೆಯಿರುವ ಕಾನೂನು ಜಾರಿ ಸಂಸ್ಥೆಗಳು ತಮ್ಮ ಕಾನೂನುಬದ್ಧ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ” ಎಂಬುದು ಸ್ಪಷ್ಟವಾಗಿದೆ ಎಂದು ಆಯೋಗ ಹೇಳಿದೆ.

ಸುದ್ದಿ ವರದಿಯಲ್ಲಿ ಉಲ್ಲೇಖಿಸಿರುವಂತೆ, ಬಾಲಕಿಯನ್ನು ಜನವರಿ 4 ರಂದು ಉಮರಿಯಾದ ಮಾರುಕಟ್ಟೆಯಿಂದ
ಆಕೆಗೆ ಪರಿಚಯವಿದ್ದ ವ್ಯಕ್ತಿ ಅಪಹರಿಸಿದ್ದ. ನಂತರ ಆಕೆಯನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ನಂತರದಲ್ಲಿ ಡಾಬಾವೊಂದರಲ್ಲಿ ಎರಡು ದಿನಗಳ ಕಾಲ ಕೂಡಿಟ್ಟು, ಒಂಬತ್ತು ಜನರಿಂದ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.

ಜನವರಿ 11 ರಂದು ಬಾಲಕಿಯನ್ನು ಮತ್ತೆ ಒಬ್ಬ ಆರೋಪಿ ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ತು ಮತ್ತೆ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೆ, ಘಟನೆಯ ಬಗ್ಗೆ ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ವರದಿಗಳು ಹೇಳಿಸಿವೆ.

ಬಾಲಕಿಯ ತಾಯಿ ಜನವರಿ 14 ರಂದು ಪೊಲೀಸರಿಗೆ ದೂರು ನೀಡಿದ್ದು, ಹಿನ್ನೆಲೆಯಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: 05 ದಿನದಲ್ಲಿ 13 ಬಾರಿ ಸಾಮೂಹಿಕ ಅತ್ಯಾಚಾರ; 09 ಕಾಮುಕರಿಂದ ಬಾಲಕಿಗೆ ನರಕಯಾತನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights