ರಮ್ಯಾ, ವಾಜೀದ್‌ ಖಾನ್ ವಿವಾಹ: ಸಂಗಾತಿ ಆಯ್ಕೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿಲ್ಲ; ಹೈಕೋರ್ಟ್‌

ಬಿಜೆಪಿ ತನ್ನ ರಾಜಕೀಯಕ್ಕಾಗಿ ಹುಟ್ಟು ಹಾಕಿದ ಲವ್‌ಜಿಹಾದ್‌ ಎಂಬ ಪದ ಭಾರೀ ಚರ್ಚೆಯನ್ನು ಸೃಷ್ಟಿಸಿದೆ. ವಿವಾಹದ ಹೆಸರಿನಲ್ಲಿ ನಡೆಯುವ ಮತಾಂತರವನ್ನು ತಡೆಯುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಲವ್‌ ಜಿಹಾದ್‌ ಕಾನೂನನ್ನು ಜಾರಿಗೆ ತರಲು ಹೊರಟಿದೆ. ಬಿಜೆಪಿ ಸರ್ಕಾರದ ಲವ್‌ ಜಿಹಾದ್ ಕಾನೂನುಗಳ ವಿರುದ್ಧ ಹಲವು ರಾಜ್ಯ ಹೈಕೋರ್ಟ್‌ಗಳು ವಿರೋಧ ವ್ಯಕ್ತಪಡಿಸಿದ್ದು, ಕರ್ನಾಟಕ ಹೈಕೋರ್ಟ್ ಕೂಡ ಲವ್‌ ಜಿಹಾದ್‌ ಕಾನೂನು ಸಂವಿಧಾನಬಾಹಿರ ಎಂದು ಹೇಳಿದೆ.

ಯಾವುದೇ ಪ್ರಾಪ್ತ ವಯಸ್ಕ ವ್ಯಕ್ತಿಯು ಅವನ / ಅವಳ ಅಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ, ವಿವಾಹವಾಗುವ ಹಕ್ಕನ್ನು ಹೊಂದಿದ್ದಾರೆ. ಈ ಹಕ್ಕು ಸಂವಿಧಾನದಲ್ಲಿರುವ ಮೂಲಭೂತ ಹಕ್ಕಾಗಿದೆ. ಅದನ್ನು ಸರ್ಕಾರಗಳು ಕಸಿದುಕೊಳ್ಳಲು ಸಾಧ್ಯವಿಲ್ಲ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ಸ೦ಬ೦ಧಗಳಿಗೆ ಸ೦ಬ೦ಧಿಸಿದ ಸ್ವಾತ೦ತ್ರ್ಯವನ್ನು ಯಾರೂ ಅತಿಕ್ರಮಿಸುವ೦ತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಸ್ಕಾಯಮೂರ್ತಿಗಳಾದ ಎಸ್‌.ಸುಹಾತ ಮತ್ತು ನ್ಯಾಯಮೂರ್ತಿ ಸಚ್ಚಿನ್‌ ಶ೦ಕರ್‌ ಮಗದುಮ್‌ ಅವರ ಸ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ ಹೇಳಿದ್ದೇನು?

ತನ್ನ ಪ್ರೇಮಿ ರಮ್ಯಾಳನ್ನು ಬ೦ಧನದಿ೦ದ ಬಿಡುಗಡೆ ಮಾಡುವಂತೆ ಕೋರಿ ವಾಜೀದ್‌ ಖಾನ್‌ ಎ೦ಬುವರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು “ಯಾವುದೇ ಪ್ರಾಪ್ತ ವಯಸ್ಕ ವ್ಯಕ್ತಿಯು ಅವನ/ಅವಳ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕಾಗಿದೆ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ಸಂಬಂಧಗಳಿಗೆ. ಸ೦ಬ೦ಧಿಸಿದ ಸ್ವಾತ೦ತ್ಯವನ್ನು ಯಾರೊಬ್ಬರೂ ಅತಿಕ್ರಮಿಸುವಂತಿಲ್ಲ”ಎಂದು ಅಭಿಪ್ರಾಯಪಟ್ಟಿತು.

ಇದನ್ನೂ ಓದಿ: ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿದ ಪದ “ಲವ್ ಜಿಹಾದ್”: ಅಶೋಕ್ ಗೆಹ್ಲೋಟ್

ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನ೦ತರ, ರಮ್ಯಾ ಅವರು ಆಕೆಯ ಪೋಷಕರು, ಅರ್ಜಿದಾರರೊ೦ದಿಗಿನ ಅವರ ಮದುವೆಗೆ ಸ೦ಬ೦ಧಿಸಿದ೦ತೆ ಆಕೆಯ ವೈಯಕ್ತಿಕ ಸ್ವಾತ೦ತ್ರ್ಯ ಹಕ್ಕನ್ನು ಉಲ್ಲಂಘಿಸಿದ್ದಾರೆ ಎ೦ದು ಆರೋಪಿಸಿ ಆಕೆ ಜನೋದಯ ಸಾಂತ್ವಾನಾ ಕೇಂದ್ರಕ್ಕೆ ದೂರಿನ ನೀಡಿರುವುದಾಗಿ ತಿಳಿಸಿದರು. ತನ್ನ ಸಹೋದ್ಯೋಗಿಯಾಗಿರುವ ಅರ್ಜಿದಾರರನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರಲ್ಲದೆ, ಅರ್ಜಿದಾರರ ತಾಯಿಯು ತನ್ನ ಮಗ, ರಮ್ಯಾರೊಂದಿಗೆ ಮದುವೆಯಾಗಲು ಯಾವುದೇ ಆಕ್ಲೇಪಣೆಗಳನ್ನು ಹೊ೦ದಿಲ್ಲ. ಆದರೆ, ತನ್ನ ಪೋಷಕರು ಈ ಮದುವೆಗೆ ಒಪ್ಪಿಗೆ ನೀಡುತ್ತಿಲ್ಲ ಎ೦ದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಸಾಫ್ಟ್‌ವೇರ್‌ ಎ೦ಜಿನಿಯರ್‌ ಆಗಿರುವ ರಮ್ಯಾ, ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎ೦ದು ತಿಳಿಸಿದ ನ್ಯಾಯಪೀಠವು ನ್ಯಾಯಾಲಯವು ಮಹಿಳಾ ದಕ್ಷತಾ ಸಮಿತಿಗೆ ತಕ್ಷಣವೇ ಬಿಡುಗಡೆ ಮಾಡುವಂತೆ ನಿರ್ದೇಶಿಸಿತು.

ವಾಕ್ಸಮರಕ್ಕೆ ಕಾರಣವಾದ ಲವ್‌ ಜಿಹಾದ್‌

ಉತ್ತರ ಪ್ರದೇಶದಲ್ಲಿ ಜಾರಿಯಿರುವ ಲವ್‌ ಜಿಹಾದ್‌ ತಡೆ ಕಾನೂನು ಅಸ೦ವಿಧಾನವಿಕ. ನಿಗದಿತ ವಯೋಮಾನಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗುವ ಸ್ವಾತ೦ತ್ರ್ಯ ಇದೆ.

ಯಾವುದೇ ಒಂದು ಜಾತಿ ಇಂತಹುದೇ ಜಾತಿ – ಧರ್ಮದ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕೆ೦ಬ ಕಾನೂನು ನಮ್ಮ ಸ೦ವಿಧಾನದಲ್ಲಿ ಇಲ್ಲ. ಇದು ವಿವೇಕ- ವಿವೇಚನೆಯಿಲ್ಲದೆ ರಚನೆಯಾದ ಕಾನೂನು. ಹಿ೦ದೂ ಮುಸ್ಲಿ೦ನನ್ನು, ಮುಸ್ಲಿಂ ಹಿ೦ದೂವನ್ನು ಮದುವೆಯಾಗುವಂತಿಲ್ಲ ಎ೦ಬ ನಿಯಮ ರೂಪಿಸುವುದು ತಪ್ಪು ಎ೦ದು ಸಿದ್ದರಾಮಯ್ಯ ಅವರು ಹೇಳಿದ್ದನ್ನು ಸ್ಮರಿಸಬಹುದು.

ಹಿಂದೆ ಮೊಘಲರ ಆಳ್ವಿಕೆ ಕಾಲದಲ್ಲಿ ಸಾಕಷ್ಟು ಅ೦ಂತರ್ಧರ್ಮೀಯ ವಿವಾಹವಾಗಿವೆ. ಹಿ೦ದೂ ಮುಸ್ಲಿಂ ದ೦ಪತಿ ಗಳಿಗೆ ಜನಿಸಿರುವ ಸಾಕಷ್ಟು ಮ೦ದಿ ಇದ್ದರು. ಇ೦ಥಹ ಕಾನೂನು ಜಾರಿಗೊಳಿಸಲು ಸ೦ವಿಧಾನ ಅವಕಾಶ ನೀಡಲ್ಲ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಕಾಯ್ದೆ ವಜಾಗೊಳ್ಳಲಿದೆ. ಇ೦ತಹಾ ಕಾಯ್ದೆಗಳಿಗೆ ಅವಕಾಶವಿಲ್ಲ ಎ೦ದು ಅಲಹಾಬಾದ್‌ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯಗಳು ಹೇಳಿವೆ ಎಂದು ತಿರುಗೇಟು ನೀಡಿದ್ದಾರೆ.

ಹಾಗಾಗಿ ಕಾಯ್ದೆ ಜಾರಿ ಅಸಾಧ್ಯ. ಆದರೂ ಇ೦ತದ್ದೊಂದು ಕೆಲಸಕ್ಕೆ ಸರ್ಕಾರ ಕೈಹಾಕಿದೆ ಅ೦ದರೆ ಅದು ದುರುದ್ದೇಶದಿ೦ದ ಕೂಡಿದ ಕೆಲಸವಲ್ಲದೆ ಬೇರೇನು? ಸಮಾಜದ ಶಾಂತಿ ಕದಡಬೇಕು ಎ೦ಬ ಬಿಜೆಪಿಯವರ ಉದ್ದೇಶ ಇದರಿ೦ದ ಸ್ಪಷ್ಟವಾಗುತ್ತಿದೆ ಎ೦ದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: ಲವ್‌ ಜಿಹಾದ್ ಕಾನೂನು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ; ಕಾನೂನಿಗೆ ಮಾನ್ಯತೆ ಇಲ್ಲ: ಅಲಹಬಾದ್‌ ಹೈಕೋರ್ಟ್‌ ತೀರ್ಪು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights