ಲೋಕಸಭಾ ಚುನಾವಣೆಗೂ ಮುನ್ನ 2023ರ ಅಂತ್ಯದಲ್ಲಿ ತೆರೆಯಲಿದೆ ರಾಮ ಮಂದಿರ! 

ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಗರ್ಭಗುಡಿಯನ್ನು 2023 ರ ಡಿಸೆಂಬರ್ ಅಂತ್ಯದ ವೇಳೆಗೆ ಭಕ್ತರಿಗಾಗಿ ತೆರೆಯಲಾಗುವುದು. ರಾಮ್ ಲಲ್ಲಾ ಮತ್ತು ಸಹೋದರರ ವಿಗ್ರಹಗಳನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ ನಂತರ ಗರ್ಭಗುಡಿಯ ಉದ್ಘಾಟನೆ ನಡೆಯಲಿದೆ ಎಂದು ರಾಮ ಮಂದಿರದ ಟ್ರಸ್ಟ್‌ನ ಮೂಲಗಳು ಬುಧವಾರ ತಿಳಿಸಿವೆ.

ಆದಾಗ್ಯೂ, ಇಡೀ ದೇವಾಲಯ ಸಂಕೀರ್ಣದ ನಿರ್ಮಾಣವು 2025 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ, ವಿಗ್ರಹಗಳು ರಾಮ ಜನ್ಮಭೂಮಿ ಆವರಣದೊಳಗೆ ಬುಲೆಟ್ ಪ್ರೂಫ್ ಆಪ್ಟಿಕಲ್ ಫೈಬರ್‌ನಿಂದ ಮಾಡಿದ ತಾತ್ಕಾಲಿಕ ದೇವಾಲಯದಲ್ಲಿ ಇರಿಸಲಾಗಿದೆ.

ದೇವಾಲಯ ಟ್ರಸ್ಟ್‌ನ ಮೂಲಗಳ ಪ್ರಕಾರ, ದೇವಾಲಯದ ಅಡಿಪಾಯ ಕೆಲಸವು ಈ ವರ್ಷದ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅದರ ನಂತರ, ಎರಡನೇ ಹಂತದ ಕೆಲಸವು ದೀಪಾವಳಿಯ ವೇಳೆಗೆ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. 2024 ರ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮುನ್ನ ಡಿಸೆಂಬರ್ 2023 ರಲ್ಲಿ ದೇವಾಲಯವನ್ನು ತೆರೆಯುವುದು ಮಹತ್ವದ್ದಾಗಿದೆ.

ಇದನ್ನೂ ಓದಿ: Fact Check: ವಿಡಿಯೋದಲ್ಲಿ ಹಂಚಿಕೊಳ್ಳಲಾದ ಶಿಲ್ಪಕಲೆಗಳು ಅಯೋಧ್ಯೆ ರಾಮ ಮಂದಿರದ್ದವೇ?

“ದೇವಾಲಯದ ಕೆಲಸದಲ್ಲಿ ತೊಡಗಿರುವ ಎಲ್ಲಾ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ತಿಂಗಳು ಟ್ವೀಟ್ ಮಾಡಿತ್ತು.

ದೇವಾಲಯ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಾತನಾಡಿ, ದೇವಸ್ಥಾನವನ್ನು ಬೇಗನೆ ನಿರ್ಮಿಸಲಾತ್ತಿದೆ. ಕೊರೊನಾ ಸೋಂಕು ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ಕೆಲಸವು ಎರಡು ಪಾಳಿಯಲ್ಲಿ ಪ್ರಗತಿಯಲ್ಲಿದೆ. ದೇಣಿಗೆ ಮೂಲಕ ಸಂಗ್ರಹಿಸಿದ ಹಣದಿಂದ ದೇವಸ್ಥಾನವನ್ನು ಟ್ರಸ್ಟ್ ನಿರ್ಮಿಸುತ್ತಿದೆ. ಸ್ವಯಂಸೇವಕರು 11 ಕೋಟಿ ಜನರಿಂದ 2,100 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕಿಂತಲೂ ಭವ್ಯ ಸೀತಾಮಂದಿರ ಕಟ್ಟುತ್ತೇನೆ: ಚಿರಾಗ್‌ ಪಾಸ್ವಾನ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights