ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ರೈತ ಮಹಿಳೆ ಸುಮಂಗಲಮ್ಮ ವಿಧಿವಶ!

ಕೃಷಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಚಿತ್ರದುರ್ಗ ಮೂಲಕ ರೈತ ಮಹಿಳೆ ಎಸ್.ವಿ.ಸುಮಂಗಲಮ್ಮ ಅವರು ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.

ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಸುಮಂಗಲಮ್ಮ ಮತ್ತು ವೀರಭದ್ರಪ್ಪ ದಂಪತಿ ಕೃಷಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರು. ಸುಮಂಗಲಮ್ಮ ಅವರು ಟ್ರ್ಯಾಕ್ಟರ್ ಚಾಲನಾ ಪರವಾನಗಿ ಪಡೆದು ಜಮೀನು ಉಳುಮೆ ಮಾಡಿದ ರಾಜ್ಯದ ಮೊದಲ ಮಹಿಳೆ ಎಂದು ಹೆಗ್ಗಳಿಕೆ ಪಡೆದುಕೊಂಡಿದ್ದರು.

ಸುಮಾರು 70 ಎಕರೆ ಒಣ ಭೂಮಿಯಲ್ಲಿ ತೆಂಗಿನ ತೋಟ ನಿರ್ಮಿಸಿದ್ದ ಅವರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಅವರ ಸಾಧನೆಯನ್ನು ಗುರುತಿಸಿದ್ದ ರಾಜ್ಯ ಸರ್ಕಾರ, 2020-21ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ತೆಂಗಿನ ಮರದಿಂದ ನೀರಾ ಇಳಿಸಿ ಇದಕ್ಕೆ ಬ್ರಾಂಡ್ ಸ್ವರೂಪ ನೀಡಿದ್ದರು. ರೇಷ್ಮೆ ಕೃಷಿಯ ಮಾದರಿಗಳನ್ನು ರೈತರ ಮುಂದೆ ಇಟ್ಟಿದ್ದಾರೆ. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡ ಪರಿ ಅಪರೂಪ. ರಾಜ್ಯದ ಹಲವು ಜಿಲ್ಲೆಗಳಿಂದ ಜನರು ವೀಕ್ಷಿಸಲು ತೋಟಕ್ಕೆ ಬರುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಹೊರಗಿಟ್ಟು NCP ನೇತೃತ್ವದಲ್ಲಿ 8 ಪಕ್ಷಗಳ ಸಭೆ; ಸಜ್ಜಾಗುತ್ತಿದೆಯೇ ತೃತೀಯ ರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights