ಬಲವಂತ ಮತಾಂತರದ ಆರೋಪ : ಪೊಲೀಸ್ ಠಾಣೆಯಲ್ಲಿ ಪಾದ್ರಿಗೆ ಥಳಿಸಿದ ಜನ..!

ಬಲವಂತವಾಗಿ ಮತಾಂತರ ಮಾಡಿದ ಆರೋಪದ ಮೇಲೆ ಪಾದ್ರಿಗೆ ಠಾಣೆಯಲ್ಲಿ ಥಳಿಸಿದ ಘಟನೆ ಭೋಪಾಲ್ ನ ರಾಯ್‌ಪುರ್ ದಲ್ಲಿ ನಡೆದಿದೆ.

ಬಲವಂತವಾಗಿ ಮತಾಂತರ ಮಾಡಿದ್ದಾರೆಂದು ಆರೋಪಿಸಿ ವಾದ -ವಿವಾದಗಳಿಂದ ಕೋಪಗೊಂಡ ಜನ ಪೊಲೀಸ್ ಠಾಣೆಯಲ್ಲೇ ಪಾದ್ರಿಗೆ ಥಳಿಸಿದ್ದಾರೆ. ರಾಯ್ಪುರದ ಪುರಾಣಿ ಬಸ್ತಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಭಟಗಾಂವ್ ಪ್ರದೇಶದಲ್ಲಿ ಬಲವಂತವಾಗಿ ಧಾರ್ಮಿಕ ಮತಾಂತರ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಇದರ ಆಧಾರದ ಮೇಲೆ ಪಾದ್ರಿಯನ್ನು ಠಾಣೆಗೆ ಕರಿಸಿ ವಿಚಾರಣೆ ಕೂಡ ಮಾಡಲಾಗುತ್ತಿತ್ತು. ಈ ವೇಳೆ ಕೆಲವು ಸ್ಥಳೀಯ ಬಲಪಂಥೀಯ ಹಿಂದುತ್ವ ನಾಯಕರು ಕೂಡ ಪೊಲೀಸ್ ಠಾಣೆಯಲ್ಲಿದ್ದರು.

ವಾದ-ವಿವಾದದ ಬಳಿಕ ದೂರುದಾರರು ಕೋಪಗೊಂಡು ಅಂತಹ ಮತಾಂತರವನ್ನು ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಟ್ಟಡವನ್ನು ಘೇರಾವ್ ಮಾಡಿದ್ದಾರೆ. ಭಟಗಾಂವ್ ಪ್ರದೇಶದ ಕ್ರಿಶ್ಚಿಯನ್ ಸಮುದಾಯದ ಇತರ ಕೆಲವು ಸದಸ್ಯರೊಂದಿಗೆ ಮಾತಿಗಿಳಿದ ಸ್ಥಳೀಯ ಗುಂಪು ಕೋಪಗೊಂಡು ಜಗಳ ಉದ್ವಿಗ್ನ ಪರಿಸ್ಥಿತಿಗೆ ಹೋಗಿದೆ. ಘಟನೆಯ ವಿಡಿಯೋದಲ್ಲಿ ಕೆಲವು ಸದಸ್ಯರು ಪಾದ್ರಿಗೆ ಚಪ್ಪಲಿ ಮತ್ತು ಶೂಗಳಿಂದ ಹೊಡೆದಿದ್ದಾರೆ.

“ನಾವು ಈ ಮೊದಲು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಎರಡು ಗುಂಪುಗಳ ನಡುವಿನ ಜಗಳದ ಸಮಯದಲ್ಲಿ ಪೊಲೀಸ್ ಠಾಣೆಗೆ ಯಾವುದೇ ಹಾನಿಯಾಗಿಲ್ಲ. ನಾವು ಈಗ (ಮತಾಂತರದ) ದೂರನ್ನು ತೆಗೆದುಕೊಂಡಿದ್ದೇವೆ. ನಾವು ಕಂಡುಕೊಂಡದ್ದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ನಗರ) ತಾರಕೇಶ್ವರ ಪಟೇಲ್ ಹೇಳಿದರು.

ಪಾದ್ರಿಯ ಮೇಲಿನ ದಾಳಿಯಿಂದ ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights