ದೇಶಾದ್ಯಂತ ರೈಲ್‌ ರೋಕೋ ಚಳುವಳಿ; ರೈಲು ನಿಲ್ದಾಣಗಳಲ್ಲಿ RPSF ಪಡೆಗಳನ್ನು ನಿಯೋಜನೆ!

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು (ಗುರುವಾರ) ದೇಶಾದ್ಯಂತ ರೈಲ್‌ ರೋಕೋ ಚಳುವಳಿ ನಡೆಸಲು ಕರೆ ನೀಡಿದ್ದಾರೆ. ರೈತ ಕರೆಗೆ ಕೇಂದ್ರ ಸರ್ಕಾರ ಬೆಚ್ಚಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 20 ಹೆಚ್ಚುವರಿ ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್‌ಪಿಎಸ್‌ಎಫ್)ಗಳನ್ನು ರೈಲ್ವೇ ಇಲಾಖೆ ನಿಯೋಜಿಸಿದೆ.

ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿರುವ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ), ಗುರುವಾರ ಮಧ್ಯಾಹ 12 ರಿಂದ ಸಂಜೆ 4 ರವರೆಗೆ ದೇಶಾದ್ಯಂತ ರೈಲು ತಡೆ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದೆ.

ಪಂಜಾಬಿನಲ್ಲಿ ಕಳೆದ ಸೆಪ್ಟಂಬರ್ 25 ರಿಂದ ರೈಲ್‌ ರೋಕೋ ಚಳುವಳಿ ಆರಂಭವಾಗಿತ್ತು. ನಂತರ ಪಂಜಾಬ್‌ ಮುಖ್ಯಮಂತ್ರಿಗಳ ಮನವಿಯ ಮೇರೆಗೆ ರೈಲ್ ರೋಕೋ ನಿಲ್ಲಿಸಲಾಗಿತ್ತು. ಆದರೆ ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯು ಇನ್ನು ರೈಲ್ ರೋಕೋವನ್ನು ಮುಂದುವರೆಸಿದೆ. ಈಗ ಮತ್ತೆ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಫೆ.18) ದೇಶಾದ್ಯಂತ ರೈಲ್ ರೋಕೋಗೆ ಕರೆ ನೀಡಿದೆ.

“ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಮತ್ತು ಇತರ ಕೆಲವು ಪ್ರದೇಶಗಳು ನಮ್ಮ ಕೇಂದ್ರಬಿಂದುವಾಗಿರುತ್ತವೆ. ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್‌ಪಿಎಸ್‌ಎಫ್)ಯ 20 ಪಡೆಗಳನ್ನು (ಸುಮಾರು 20,000 ಸಿಬ್ಬಂದಿ) ಈ ಪ್ರದೇಶಗಳಲ್ಲಿ ನಿಯೋಜಿಸಿದ್ದೇವೆ” ಎಂದು ರೈಲ್ವೆ ಸಂರಕ್ಷಣಾ ಪಡೆ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.

“ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ನಾವು ಪ್ರತಿಭಟನಾಕಾರರ ಮನವೊಲಿಸಲು ಬಯಸುತ್ತೇವೆ. ನಮಗೆ ನಾಲ್ಕು ಗಂಟೆಗಳ ಅವಕಾಶ ಇದೆ ಮತ್ತು (ರೈಲ್ ರೋಕೋ) ಶಾಂತಿಯುತವಾಗಿ ನಡೆಯಬೇಕೆಂದು ನಾವು ಬಯಸುತ್ತೇವೆ” ಎಂದು ರೈಲ್ವೆ ಸಂರಕ್ಷಣಾ ಪಡೆ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲೂ ರೈಲ್‌ ರೋಕೋ ಚಳುವಳಿ:

ದೇಶಾದ್ಯಂತ ರೈಲ್‌ ರೋಕೋ ನಡೆಯುತ್ತಿರುವಂತೆಯೇ, ರಾಜ್ಯದಲ್ಲೂ ರೈಲು ತಡೆ ಹೋರಾಟ ನಡೆಯಲಿದೆ. ರೈಲುಗಳನ್ನು ತಡೆದು ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ ರೈತ ಸಂಘಟನೆಗಳ ಸಂಯುಕ್ತ ಹೋರಾಟದ ಸಂಯೋಜಕರಾದ ಬಯ್ಯಾರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ್ ಕೆರೆಗೋಡು, ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ದಿಶಾ ಬಂಧನ: ನಮ್ಮ ಶಕ್ತಿಯನ್ನು ಮರೆತಿದ್ದೇವೆ; ಈಗಲಾದರೂ ಸದ್ದು ಮಾಡೋಣ: ದಿಶಾ ಬೆಂಬಲಕ್ಕೆ ನಟಿ ರಮ್ಯಾ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights