ಪುಲ್ವಾಮ ದಾಳಿ: ಎನ್ಐಎಯಿಂದ ಚಾರ್ಜ್ ಶೀಟ್, ಮಸೂದ್ ಅಜರ್ ಎ1 ಆರೋಪಿ!

2019ರ ಫೆಬ್ರವರಿಯಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಎ1 ಆರೋಪಿ ಎಂದು ಹೇಳಲಾಗಿದೆ.

40 ಸಿಆರ್‌ಪಿಎಫ್ ಯೋಧರು ಸಾವಿನಪ್ಪಿದ್ದ ಈ ಘಟನೆಯ ಬಗ್ಗೆ 18 ತಿಂಗಳ ಕಾಲ ತೀವ್ರವಾಗಿ ತನಿಖೆ ನಡೆಸಿ ವೈಜ್ಞಾನಿಕ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಆಧರಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ ವಿಶೇಷ ಕೋರ್ಟ್‌ನಲ್ಲಿ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

ದಾಳಿಯ ಪ್ರಮುಖ ಸಂಚುಕೋರ ಉಮರ್ ಫಾರೂಕ್ 2018ರ ಏಪ್ರಿಲ್ನಲ್ಲಿ ಪಾಕಿಸ್ತಾನದಿಂದ ಭಾರತವನ್ನ ಪ್ರವೇಶ ಮಾಡಿದ್ದ. 2020, ಮಾರ್ಚ್ 29ರಂದು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಈತ ಹಾಗೂ ಮತ್ತೊಬ್ಬ ಐಇಡಿ ತಜ್ಞ ಕಮ್ರಾನ್ ಹತ್ಯೆಯಾಗಿದ್ದರು. ಆಗ ಫಾರೂಖ್ನ ಫೋನ್ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದರು.

ಫಾರೂಕ್‌ನ ಫೋನ್ನಲ್ಲಿರುವ ವಾಟ್ಸಾಪ್ ಸಂದೇಶಗಳಿಂದ ಒಂದಷ್ಟು ಸುಳಿವು ಸಿಕ್ಕಿವೆ. ಪಾಕಿಸ್ತಾನದಲ್ಲಿ ಜೈಷ್ ಸಂಘಟನೆಯ ನಿರ್ವಾಹಕರಿಗೆ ಈತ ತಾನು ಸ್ಫೋಟಕಗಳೊಂದಿಗೆ ಭಾರತಕ್ಕೆ ಸುರಕ್ಷಿತವಾಗಿ ಬಂದಿದ್ದಾಗಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳಿಸಿದ್ದ ಎಂದು ಹೇಳಲಾಗಿದೆ.


ಇದನ್ನೂ ಓದಿ:  ಬಿಜೆಪಿ ಬೌದ್ದಿಕ ದಾರಿದ್ರ್ಯದಿಂದ ನಕಲಿ ಶ್ಯಾಮ ನಳಿನ್‌ಕುಮಾರ್‌’ರನ್ನು ಅಧ್ಯಕ್ಷರನ್ನಾಗಿಸಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights