ರಾಜ್ಯಸರ್ಕಾರದ ವಿರುದ್ಧ ಕೆರಳಿದ ಕೇರಳಿಗರು : ಗಡಿಯಲ್ಲಿ ಟೆಸ್ಟ್ ಮಾಡದಂತೆ ಪ್ರೊಟೆಸ್ಟ್….!

ರಾಜ್ಯಸರ್ಕಾರದ ವಿರುದ್ಧ ಕೆರಳಿದ ಕೇರಳಿಗರು ಕೇರಳ ಗಡಿ ಭಾಗದಲ್ಲಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡದಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಹೌದು… ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯಕ್ಕೆ ಕೇರಳಿಗರು ಬರಬೇಕು ಅಂದ್ರೆ 72 ಗಂಟೆಗಳ ಹಿಂದೆ ಕೊರೊನಾ ಪರೀಕ್ಷೆ ವರದಿ ತೋರಿಸಬೇಕು. ತಾವು ಪ್ರತೀ ಬಾರಿ ಪರೀಕ್ಷಾ ವರದಿಯಾಗಲಿ ಅಥವಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಪರೀಕ್ಷೆ ಮಾಡಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಸರಗೋಡ ಭಾಗದವರು ಮಂಗಳೂರಿಗೆ ಬರುವ ಅವಕಾಶನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೇರಳದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಿದರೆ ನಾವೂ ಕೂಡ ಕರ್ನಾಟಕದಿಂದ ಬರುವ ವಾಹನಗಳನ್ನೂ ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಮಂಗಳೂರು ಕಾಸರಗೋಡು ಹಾಗೂ ಮಂಗಳೂರು ಎರಡೂ ಕಡೆ ವ್ಯವಹರಿಸುವ ಜನ ಅಧಿಕವಾಗಿದ್ದಾರೆ. ಹೀಗಾಗಿ ಪ್ರತೀ ಬಾರಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಥವಾ ವರದಿ ಕೇಳುವುದು ವ್ಯವಹಾರಕ್ಕೆ ತೊಂದರೆಯಾಗುತ್ತಿದೆ.

ಗಡಿ ಭಾಗದಲ್ಲಿ ಕಿ.ಮೀ ಗಟ್ಟಲೆ ವಾಹನಗಳು ನಿಲ್ಲುವ ಪರಿಸ್ಥಿಇತಿ ಇದೆ. ಹೀಗಾದರೆ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜೀವನ ಮತ್ತೆ ಪಾತಾಳಕ್ಕಚ್ಚುತ್ತದೆ ಎಂದು ಆರೋಪಿಸಿದ್ದಾರೆ.

ಇನ್ನೂ ಹೆದ್ದಾರಿಗಳಲ್ಲಿ ಮೂರು ನಾಲ್ಕು ದಿನ ಪ್ರಯಾಣ ಮಾಡುವವರು ಇರುತ್ತಾರೆ ಅಂಥವರು ಪ್ರತಿನಿತ್ಯ ಟೆಸ್ಟ್ ಮಾಡಲು ಸಾಧ್ಯವಿಲ್ಲ. ಹೈವೇಗಳಲ್ಲಿ ಓಡಾಡುವವರು ಪ್ರತೀ ನಿತ್ಯ ನೀವು ಟೆಸ್ಟ್ ಮಾಡಿಸಿಕೊಂಡೇ ಬರಬೇಕು ಎಂದು ಕಡ್ಡಾಯ ಎಂದರೆ ಹೇಗೆ ಸಾಧ್ಯ? ಕೆಲಸ ಕಾರ್ಯ ಬಿಟ್ಟು ನಾವು ಟೆಸ್ಟ್ ಮಾಡಿಸಿಕೊಂಡು ಓಡಾಡುವುದುದೇ ಆಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕೂಡಲೇ ಸರ್ಕಾರ ಈ ಆದೇಶವನ್ನು ವಾಪಸ್ ಪಡೆಯುವುಂತೆ ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights