ಆಸ್ತಿ ವಿವಾದ: ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಅಮಾನುಷ ಹತ್ಯೆ!

ಆಸ್ತಿ ವಿವಾದದ ಗಲಾಟೆಗೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.

ಅಯೋಧ್ಯೆ ಜಿಲ್ಲೆಯ ಇನಾಯತ್‌ನಗರ ಪ್ರದೇಶದ ಖಾನ್ಪುರ್ ಮಜ್ರೆ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರ ಐವರನ್ನು ಅವರ ಸಂಬಂಧಿಕರೇ ಶನಿವಾರ ರಾತ್ರಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಆಸ್ತಿ ವಿವಾದದ ಕಾರಣಕ್ಕಾಗಿ ಕೊಲೆ ನಡೆದಿದ್ದು, ಕೊಲೆ ಮಾಡಿರುವ ಆರೋಪಿಯನ್ನು ಪವನ್‌ ಎಂದು ಹೇಳಲಾಗಿದೆ.

ಆತ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮರನ್ನು ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ಅಲ್ಲದೆ, ಅವರ ಮೂವರು ಚಿಕ್ಕ ವಯಸ್ಸಿನ ಅಪ್ರಾಪ್ತ ಮಕ್ಕಳನ್ನೂ ಹತ್ಯೆಗೈದಿದ್ದಾನೆ ಎಂದು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ಹೇಳಿದ್ದಾರೆ.

ಮೃತರನ್ನು ರಾಕೇಶ್ ಕಹಾರ್, ಅವರ ಪತ್ನಿ ಜ್ಯೋತಿ ಮತ್ತು ಅವರ ಮೂವರು ಗಂಡು ಮಕ್ಕಳು 4, 6 ಮತ್ತು 8 ವರ್ಷದ ವಯಸ್ಸಿನವರು ಎಂದು ಗುರುತಿಸಲಾಗಿದೆ.

ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಈ ಹತ್ಯೆಗಳು ನಡೆದಿವೆ ಎಂದು ಡಿಎಂ (ಜಿಲ್ಲಾಧಿಕಾರಿ) ಅನಿಜ್ ಕುಮಾರ್ ಅವರು ತಿಳಿಸಿದ್ದು, ಪರಾರಿಯಾಗಿರುವ ಪವನ್ ನನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದರು.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಕಪಾಳಮೋಕ್ಷ: ಜಿಲ್ಲಾಧಿಕಾರಿ ಅಮಾನತು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights