ಫೆ.23ಕ್ಕೆ ಶಾಲಾ ಶುಲ್ಕ ಕಡಿತದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ..!

ಶಾಲಾ ಶುಲ್ಕ 30% ರಷ್ಟು ಕಡಿತ ಮಾಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಫೆ.23ಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬೃಹತ್ ಪ್ರತಿಭಟನೆಗೆ ಮುಂದಾಗಿದೆ.

ಕೊರೊನಾ ಆರ್ಥಿಕ ಸಂಕಷ್ಟು ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿವೆ. ಪೋಷಕರಿಗೆ ಶಾಲಾ ಶುಲ್ಕ ಕಡಿತ ಮಾಡುವುದಾದರೇ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಸಂಬಳ ಹೇಗೆ ಪಾವತಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಈ ಆದೇಶವನ್ನು ಪರುಪರಶೀಲನೆ ಮಾಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಿವೆ.

ರಾಜ್ಯ ಸರ್ಕಾರ ಶೇ 30 ರಷ್ಟು ಕಡಿತ ಎಂದು ಹೇಳಿದೆ. ಆದರೆ ಆದೇಶದಲ್ಲಿ ಶೇ. 55 ರಿಂದ 65 ರಷ್ಟು ಶುಲ್ಕ ಕಡಿತವಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅನುದಾನ, 1 ರಿಂದ 5 ನೇ ತರಗತಿಗಳನ್ನ ಆರಂಭ, ಮತ್ತು ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಸೇರಿದಂತೆ ಕಟ್ಟಡ ಸುರಕ್ಷಿತ ಪ್ರಮಾಣ ಪತ್ರ ಹಿಂದಿನ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಶಿಕ್ಷಕರಿಗೂ ಸಹಾಯ ಮಾಡಿಲ್ಲ. ಹೀಗಿರುವಾಗ ಶುಲ್ಕ ಕಡಿತ ಮಾಡಿದರೆ ಹೇಗೆ..? ಇಂಥಹ ಆದೇಶಗಳ ಬದಲು ಶಿಕ್ಷಕರಿಗೆ ಸಂಬಳ ಕೊಡಲಿ ಎಂದು ಆಗ್ರಹಿಸಿವೆ.

ಸರ್ಕಾರದ ಆದೇಶವೇನು..?

ಪೋಷಕರಿಂದ ಶಾಲಾ ಶುಲ್ಕವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು 70%ರಷ್ಟು ಮಾತ್ರ ಪಡೆಯಬೇಕು. ಯಾವುದೇ ಕಾರಣಕ್ಕೂ ಶಾಲೆಗಳು ಅಭಿವೃದ್ಧಿ ಶುಲ್ಕವನ್ನು ಪಡಿಯೋಹಾಗಿಲ್ಲ. ರಾಜ್ಯದ ಎಲ್ಲಾ ಮಾದರಿಯ ಶಾಲೆಗಳಿಗೂ ಇದು ಅನ್ವಯವಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಶಾಲೆಗಳು 1,2 ಮತ್ತು 3 ಕಂತುಗಳಲ್ಲಿ ಫೀಸ್ ಪಡೆದುಕೊಳ್ಳಬಹುದು. ಈಗಾಗಲೇ ಹೆಚ್ಚುವರಿ ಪೀಸ್ ಕಟ್ಟಿದ್ದರೆ ಮುಂದಿನ ವರ್ಷಕ್ಕೆ ಸರಿದೂಗಿಸಿಕೊಳ್ಳಬೇಕು.

ಸರ್ಕಾರ ಶುಲ್ಕ ನಿರ್ಧಾರ ಮಾಡದೇ ಹೋದಲ್ಲಿ  ಉಗ್ರ ಹೋರಾಟ ಮಾಡುವುದಾಗಿ ಪೋಷಕರು ಎಚ್ಚರಿಕೆ ಕೊಟ್ಟಿದ್ದರಿಂದ ಸರ್ಕಾರ ಶುಲ್ಕ ಮಾಡಿ ಆದೇಶ ಹೊರಡಿಸಿತ್ತು. ಸದ್ಯ ಇದೇ ಮಾರ್ಗವನ್ನು ಪೋಷಕರು ಹಿಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights