ಕಾರ್ಪೋರೇಷನ್‌ ಚುನಾವಣಾ ಪ್ರಚಾರಕ್ಕೂ ಪ್ರಧಾನಿ; ಮೋದಿ ಇಲ್ಲದೆ ಚುನಾವಣೆ ಗೆಲ್ಲುವುದಿಲ್ಲವಾ ಬಿಜೆಪಿ?

ಡಿಸೆಂಬರ್‌ 01 ರಂದು ಹೈದರಾಬಾದ್‌ನ ಗ್ರೇಟರ್ ಹೈದ್ರಾಬಾದ್​ ಕಾರ್ಪೋರೇಷನ್ ಚುನಾವಣೆ ನಡೆಯಲಿದೆ. ಈಗಾಗಲೇ ಬಿಹಾರ ಮತ್ತು ಉಪಚುನಾವಣೆಗಳನ್ನು ಗೆದ್ದಿರುವ ಬಿಜೆಪಿ ಹೈದರಾಬಾದ್‌ ಕಾರ್ಪೋರೇಷನ್‌ ಚುನಾವಣೆಯನ್ನು ಗೆಲ್ಲಲು ಭಾರೀ ಕಸರತ್ತು ನಡೆಸುತ್ತಿದೆ. ಹೈದರಾಬಾದ್‌ನ ಈ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಬಿಜೆಪಿ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರನ್ನು ಪ್ರಚಾರಕ್ಕೆ ಇಳಿಸುತ್ತಿದೆ.

ಚುನಾವಣೆಗೆ ಇನ್ನು 04 ದಿನಗಳಷ್ಟೇ ಬಾಕಿ ಇದ್ದು, ಪ್ರಚಾರ ಬಿರುಸು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೇರಿದಂತೆ ಹಲವು ನಾಯಕರು​ ಚುನಾವಣಾ ಪ್ರಚಾರಕ್ಕೆ ಇಳಿಯಲಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ 28 ರಂದು ಹೈದರಾಬಾದ್‌ನಲ್ಲಿ ರೋಡ್ ಶೋ ನಡೆಸಲಿದ್ದು, ಮರುದಿನವೇ ಗೃಹ ಸಚಿವ ಅಮಿತ್​ ಶಾ ಸಹ ರೋಡ್​ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. ನವೆಂಬರ್​ 28 ರಂದು ಪ್ರಧಾನಿ ಮೋದಿ ಸಹ ಭಾರತ್ ಬಯೋಟೆಕ್​ ಭೇಟಿಗಾಗಿ ಹೈದ್ರಾಬಾದ್​ಗೆ ಆಗಮಿಸಲಿದ್ದು, ಅವರೂ ಸಹ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಿವಾರ್ ಚಂಡಮಾರುತ : 22 ಎನ್​ಡಿಆರ್​ಎಫ್​ ಸೇರಿದಂತೆ 800 ರಕ್ಷಣಾ ಸಿಬ್ಬಂದಿಯಿಂದ ಮುನ್ನೆಚ್ಚರಿಕೆ ಕ್ರಮ!

ಈಗಾಗಲೇ ಹೈದ್ರಾಬಾದ್​ ಕಾರ್ಪೊರೇಷನ್ ಚುನಾವಣೆ ಪ್ರಚಾರದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ಯುವ ವಿಭಾಗದ ಮುಖ್ಯಸ್ಥ ತೇಜಸ್ವಿ ಸೂರ್ಯ ಹಾಗೂ ಮತ್ತೊಬ್ಬ ಕೇಂದ್ರ ಸಚಿವ ಸ್ಮೃತಿ ಇರಾನಿ ಭಾಗವಹಿಸಿದ್ದಾರೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಸ್ತುತ ನಡೆಯುತ್ತಿರುವ ಹೈದ್ರಾಬಾದ್ ಕಾರ್ಪೋರೇಷನ್​ ಚುನಾವಣೆಯನ್ನು ಬಿಜೆಪಿ ನಾಯಕರು ಸೆಮಿ ಫೈನಲ್ ಎಂದು ಪರಿಗಣಿಸಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ತಮ್ಮ ಅಸ್ಥಿತ್ವವನ್ನು ವಿಸ್ತರಿಸಲು ಮುಂದಾಗಿರುವ ಬಿಜೆಪಿಗೆ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣೆ ಗೆಲುವು ಬಹುಮುಖ್ಯವಾಗಿದೆ ಎಂದು ಹೇಳಲಾಗುತ್ತಿದೆ.

2016 ರ ಚುನಾವಣೆಯಲ್ಲಿ 150 ಸದಸ್ಯರ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿತ್ತು. 2018 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿದೆ.  ಆದರೆ, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 17 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದು ಅದ್ಭುತ ಪ್ರದರ್ಶನ ನೀಡಿತ್ತು. ಹೀಗಾಗಿ ಈ ಚುನಾವಣೆ ಮೇಲೆ ಬಿಜೆಪಿ ಮಹತ್ವಾಕಾಂಕ್ಷೆ ಹೊಂದಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಏಷ್ಯಾದಲ್ಲೇ ಅತ್ಯಂತ ಭ್ರಷ್ಟ ರಾಷ್ಟ್ರ ಭಾರತ: ಸಮೀಕ್ಷಾ ವರದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights