ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ : ಟ್ರಂಪ್ ಮತ್ತು ಬಿಡನ್ ನಡುವೆ ತೀವ್ರ ಪೈಪೋಟಿ!

ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಕೋವಿಡ್ ಕಪ್ಪು ಕಾರ್ಮೋಡದ ನಡುವೆಯೂ ನಡೆಯುತ್ತಿರುವ ಚುನಾವಣೆಯಲ್ಲಿ ಜನ ತಮ್ಮ ಅಧ್ಯಕ್ಷರ ಆಯ್ಕೆಗೆ ಉತ್ಸಾಹಕರಾಗಿದ್ದಾರೆ. ಡೆಮೊಕ್ರಾಟ್ ಜೋ ಬಿಡನ್ ಹಾಗೂ ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಇವರಲ್ಲಿ ಯಾರನ್ನ ಶ್ವೇತಭವನಕ್ಕೆ ಕಳುಹಿಸಬೇಕು ಎಂದು ಅಮೇರಿಕನ್ನರು ನಿರ್ಧರಿಸಲಿದ್ದಾರೆ.

ಈಗಾಲೇ ಮತದಾನ ಆರಂಭವಾಗಿದ್ದು, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ವರ್ಜೀನಿಯಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ರಿಂದ ಮತದಾನ ಆರಂಭವಾಗಿದೆ. 100 ಮಿಲಿಯನ್ ಮತಚಲಾವಣೆಯಾಗಿದೆ.ಕೆಲ ಗಂಟೆಯಲ್ಲಿ ಫಲಿತಾಂಶ ಸಿಗಲಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯೋಮಿಂಗ್, ಕನ್ಸಾಸ್, ಮಿಸೌರಿ, ಮಿಸ್ಸಿಸ್ಸಿಪ್ಪಿ, ಕೆಂಟುಕಿ, ಇಂಡಿಯಾನಾ, ಸೌಥ್ ಕರೋಲಿನಾ ದಲ್ಲಿ ಜಯಗಳಿಸಿದ್ದಾರೆ. ಇನ್ನು ಜೋ ಬೈಡನ್ ಅವರು ವಾಷಿಂಗ್ಟನ್, ಟೆಕ್ಸಾಸ್, ಜಾರ್ಜಿಯಾ, ಫ್ಲೋರಿಡಾ, ಹ್ಯಾಂಪ್ ಶೈರ್, ವರ್ಮೊಂಟ್, ಒರೆಗಾನ್, ಕ್ಯಾಲಿಫೋರ್ನಿಯಾ ಮತ್ತು ಇಲಿನಾಯ್ಸ್ ವಶಪಡಿಸಿಕೊಂಡಿದ್ದಾರೆ.

ಇವರಿಬ್ಬರ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ  ಡೊನಾಲ್ಡ್ ಟ್ರಂಪ್ (74) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ  ಮೈಕ್ ಪೆನ್ಸ್ (61) ಸ್ಪರ್ಧಿಸಿದ್ದಾರೆ. 239 ಮಿಲಿಯನ್ ಜನರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 538 ಎಲೆಕ್ಟೋರಾಲ್ ಮತಗಳಲ್ಲಿ 270 ಮ್ಯಾಜಿಕ್ ನಂಬರ್ ನ್ನು ಬಿಡೆನ್ ಹಾಗೂ ಟ್ರಂಪ್ ಪಡೆಯಬೇಕಾಗಿದೆ. ಫಲಿತಾಂಶ ಈ ಬಾರಿ ವಿಳಂಬವಾಗುವ ಸಾಧ್ಯತೆಯಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights