ಚಿಕಿತ್ಸೆ ನೀಡಲು ಬಂದ್ಲು ಜೀವನ ಸಂಗಾತಿಯಾದ್ಲು: ಪ್ರಭುದೇವ ಸೆಕೆಂಡ್ ಮ್ಯಾರೇಜ್!

ಚಲನಚಿತ್ರ ನಿರ್ಮಾಪಕ ನೃತ್ಯ ಸಂಯೋಜಕ ಪ್ರಭುದೇವ ಈ ವರ್ಷದ ಆರಂಭದಲ್ಲಿ ಮುಂಬೈ ಮೂಲದ ವೈದ್ಯರನ್ನು ವಿವಾಹವಾಗಿದ್ದಾರೆ. ಈ ಮಾತನ್ನ ನಾವು ಹೇಳ್ತಾಯಿಲ್ಲ. ಅವರ ಸಹೋದರ ರಾಜು ಸುಂದರಂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. 47 ವರ್ಷದ ನೃತ್ಯ ಸಂಯೋಜಕ ಲಾಕ್‌ಡೌನ್ ಸಮಯದ ಮೇ ತಿಂಗಳಲ್ಲಿ ಹಿಮಾನಿ ಎಂಬ ಭೌತಚಿಕಿತ್ಸಕಳನ್ನು ವಿವಾಹವಾದರು ಎಂದಿದ್ದಾರೆ.

ಪ್ರಭುದೇವ ಅವರು ಡಾ ಹಿಮಾನಿ ಅವರ ಬಳಿ ಬೆನ್ನು ಮತ್ತು ಕಾಲುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ತಿಂಗಳ ಬಳಿಕ ಇಬ್ಬರೂ ಪರಸ್ಪರ ಪ್ರೀತಿ ಮಾಡಿದ್ದಾರೆ. ಮದುವೆಯಾಗುವ ಮೊದಲು ದಂಪತಿಗಳು ಸುಮಾರು ಎರಡು ತಿಂಗಳ ಕಾಲ ಲೈವ್-ಇನ್ ಸಂಬಂಧದಲ್ಲಿದ್ದರು. ಲಾಕ್ ಡೌನ್ ನಿಯಮಗಳಿಂದಾಗಿ ಪ್ರಭುದೇವ ಅವರ ಮದುವೆಯನ್ನು ಚೆನ್ನೈನಲ್ಲಿನ ಅವರ ಕುಟುಂಬದವರ ಸಮ್ಮುಖದಲ್ಲಿ ಮಾಡಿಕೊಂಡಿದ್ದಾರೆ.

ಪ್ರಭುದೇವ ಈ ಹಿಂದೆ ರಾಮಲತಾಳನ್ನು ಮದುವೆಯಾಗಿದ್ದರು. ದಕ್ಷಿಣ ನಟಿ ನಯನತಾರಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನುವ ವದಂತಿಗಳು ಇವೆ. ನಯನತಾರಾ ಅವರೊಂದಿಗಿನ ಸಂಬಂಧದಿಂದಾಗಿನೇ ರಾಮಲತಾಳೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದರು ಪ್ರಭುದೇವ ಎನ್ನಲಾಗುತ್ತದೆ. ಆದರೆ ಈ ನಟಿ ಪ್ರಸ್ತುತ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

ಚಿಕಿತ್ಸೆಗಾಗಿ ಪರಿಚಯವಾದ ಡಾ ಹಿಮಾನಿ ಅವರು ಪ್ರಭುದೇವ ಅವರ ಕುಟುಂಬವನ್ನು ಎರಡು ಬಾರಿ ಮಾತ್ರ ಭೇಟಿಯಾಗಿ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು ಎನ್ನಲಾಗುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights