ಕಲಬುರಗಿಗೆ ಭೇಟಿ ನೀಡಿದ ಪವರ್ ಸ್ಟಾರ್ ನೋಡಲು ಮುಗಿಬಿದ್ದ ಜನ!

ಪುನೀತ್ ರಾಜಕುಮಾರ್ ಅವರನ್ನು ನೋಡಲು ಸೇರಿದ ನೂರಾರು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಜ ಮಾಡಿದ ಘಟನೆ ಇಂದು ಕಲಬುರಗಿಯಲ್ಲಿ ನಡೆದಿದೆ.

ಮುಂಬರುವ ಚಿತ್ರ ‘ನವರತ್ನಿ’ ಸಿನಿಮಾ ಪ್ರಚಾರಕ್ಕಾಗಿ ಇಂದು ಕಲಬುರಗಿಗೆ ಭೇಟಿ ನೀಡಿದ ಪುನೀತ್ ಮತ್ತು ಚಿತ್ರ ತಂಡವನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.

ಧನಂಜಯ್, ರವಿಶಂಕರ್ ಹಾಗೂ ಚಿತ್ರದ ನಿರ್ದೇಶಕ ಸಂತೋಷ ಾನಂದರಾಮ್ ಜೊಒತೆ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ದೇವಸ್ಥನಕ್ಕೆ ಆಗಮಿಸುತ್ತಿದ್ದಂತೆ ಪವರ್ ಸ್ಟಾರ್ ಗೆ ಪವರ್ ಫುಲ್ಲಾಗಿ ಸ್ವಾಗತಿಸಲಾಯಿತು. ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ತಮ್ಮ ನೆಚ್ಚಿನ ನಟನನ್ನು ನಗರದ ಜನತೆ ಬರಮಾಡಿಕೊಂಡಿದ್ದಾರೆ. ನವರತ್ನ ಅಪ್ಪು ಎಂದು ಕೂಗುತ್ತಾ ಮೆರವಣಿಗೆ ಮೂಲಕ ದೇವಸ್ಥಾನದವರೆಗೂ ಜೈಕಾರ ಹಾಕುತ್ತಾ ಸ್ವಾಗತಿಸಿದ್ದಾರೆ.

ಕೆಲವೊಂದಿಷ್ಟು ಮಂದಿ ಪುನೀತ್ ಅವರೊಂದಿಗೆ ವೀಡಿಯೋ ಮಾಡಿಕೊಳ್ಳಲು ಮುಗಿಬಿದ್ದರೆ, ಕೆಲವರು ದೂರದಿಂದಲೇ ನೋಡಿ ಖುಷಿ ಪಟ್ಟರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights