ಕರ್ನಾಟಕದ ಈ ಹಳ್ಳಿಯಲ್ಲಿ ಕೋಳಿನೇ ಸಾಕೋದಿಲ್ಲ: ಶಾಕಿಂಗ್ ಕಾರಣ ಕೊಟ್ಟ ಗ್ರಾಮಸ್ಥರು!

ಅದೊಂದು ಪುಟ್ಟ ಹಳ್ಳಿ. ಅಲ್ಲಿ ಎಲ್ಲವೂ ಸೌಖ್ಯ… ಜನನೂ ಸಹ ಅಷ್ಟೇ ಸಂಪ್ರದಾಯಸ್ಥರು. ದನ, ಕರು, ಕುರಿ ಎಮ್ಮೆ ಎಲ್ಲವನ್ನೂ ಸಾಕ್ತಾರೆ. ಆದ್ರೆ ಹೇಳಿ ಕೇಳಿ ಕೋಳಿ ಮಾತ್ರ ಸಾಕೋದಿಲ್ಲ… ಕಾರಣ ಕೇಳಿದ್ರೆ ನಿಜಕ್ಕೂ ಶಾಖ್ ಆಗ್ತೀರಾ…!

ಗದಗ ತಾಲೂಕಿನ ಪಾಪನಾಶಿ ಅನ್ನೋ ತಾಂಡದಲ್ಲಿ ಅಪ್ಪಿತಪ್ಪಿ ನೀವು ಅಲ್ಲಿಗೆ ಹೋದರೆ ಅಲ್ಲಿ ಒಂದೇ ಒಂದು ಕೋಳಿ ಕಾಣೋದಿಲ್ಲ… ಹಿಂದಿನ ಕಾಲದಲ್ಲಿ ಕೋಳಿ ಕೂಗಿದ ಮೇಲೆ‌ ನಮ್ಮ‌ ರೈತರು ದಿನದ ಬೆಳಗಿನ ಜಾವ ಆಯ್ತು ಅಂತ ಎದ್ದು ತಮ್ಮ ದಿನನಿತ್ಯದ ಕೆಲಸಕ್ಕೆ ಅಣಿಯಾಗ್ತಿದ್ರು. ಈಗಲೂ ಸಹ ಕೋಳಿ ಸಾಕುವುದು ಅಂದ್ರೆ ಅದೊಂದು ದೊಡ್ಡ ಬ್ಯುಜಿನೆಸ್. ಆದ್ರೆ ಈ ಗ್ರಾಮದಲ್ಲಿ ಮಾತ್ರ ಕೋಳಿ ಕಾಣೋದಿಲ್ಲ ಯಾರೊಬ್ಬರೂ ಕೋಳಿ ಸಾಕೋದಿಲ್ಲ. ಇಡೀ ಊರಿಗೇ ಊರೇ ಹುಡುಕಿದರೂ ಕೋಳಿ ಮರಿಯೂ ಕಾಣೋದಿಲ್ಲ… ಯಾಕೆಂದರೆ ಒಂದು ಕಾರಣ ಹಿಂದೆ ಪ್ಲೇಗ್ ಎಂಬ ಮಹಾಮಾರಿ ಕಾಯಿಲೆ ಬಂದಾಗ ಕೋಳಿ ಸಾಕೋದು ಬಿಟ್ಟಿದ್ದಾರಂತೆ. ಅಪ್ಪಿತಪ್ಪಿ ಕೋಳಿ ಸಾಕಿದರೆ ಆ ಗ್ರಾಮಕ್ಕೆ. ಕೋಳಿ ಸಾಕಿದ ಮನೆತನಕ್ಕೆ ಅಪಾಯ ತಪ್ಪಿದ್ದಲ್ಲ ಅಂತಾರೆ ಈ ಗ್ರಾಮಸ್ಥರು.

ಕೋಳಿ ಅಷ್ಟೇ ಅಲ್ಲ. ಇಲ್ಲಿ ಹೆಂಡ, ಸರಾಯಿ ಯಾವುದನ್ನೂ ಮಾರೋದಿಲ್ಲ. ಮತ್ತು ಕುಡಿಯೋದಿಲ್ಲ. ಕಳ್ಳತನ ಮಾಡೋದಿಲ್ಲ ಅನ್ನೋದು ಪ್ರತಿಯೊಂದು ಮನೆಯ ಶಪತ ಇದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಮುಖ್ಯವಾಗಿ ಇದಕ್ಕೆ ಕಾರಣ ಇಲ್ಲಿನ ದೇವರಗಳು. ಮತ್ತು ಈ ಸಮುದಾಯದ ಗುರುಗಳ ಕಡೆ ಬೆಟ್ಟು ಮಾಡ್ತಾರೆ. ಕುಬಸಾದ್ ಮಹರಾಜರು, ಡಾಕುಸಾದ್ ಮಹರಾಜರ ಕಾಲದಿಂದಲೂ ಈ ಪದ್ದತಿ ಅಳವಡಿಸಿಕೊಂಡು ಬಂದಿದ್ದೇವೆ ಎಂದು ಗ್ರಾಮದ ಹಿರಿಯರಾದ ಮನ್ನಪ್ಪ ಹೇಳಿದ್ದಾರೆ.

ಗ್ರಾಮದ ಹಿರಿಯರು ಕೈಗೊಂಡ ಪ್ರತಿಯೊಂದು ತೀರ್ಮಾನಕ್ಕೆ ಇವರೆಲ್ಲ ಬದ್ಧರಾಗಿರ್ತಾರಂತೆ. ಒಂದೇ ವಿಚಾರಕ್ಕೆ ಅಂಟಿಕೊಂಡಿರ್ತಾರಂತೆ. ಒಟ್ಟಿನಲ್ಲಿ ಸುಮಾರು 80 ವರ್ಷಗಳಿಂದ ಕೋಳಿ ಸಾಕದೆ ಬದುಕುತ್ತಿದ್ದಾರೆ ಎಂದು ಸ್ಥಳೀಯ ಯುವಕ ಮಹಾಂತೇಶ್ ತಿಳಿಸಿದ್ದಾರೆ.


ಇದನ್ನೂ ಓದಿ: ಮೇಲ್ಜಾತಿಯವರ ಜೋಳವನ್ನು ತುಳಿದ ಹಸು: ದಲಿತ ತಾಯಿ-ಮಗನ ಮೇಲೆ ಮಾರಣಾಂತಿಕ ಹಲ್ಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights