ಹುದ್ದೆ ಇರಲಿ, ಇಲ್ಲದಿರಲಿ; ರಾಹುಲ್‌ – ಪ್ರಿಯಾಂಕ ಜೊತೆಗೆ ನಿಲ್ಲುತ್ತೇನೆ: ನವಜೋತ್‌ ಸಿಂಗ್ ಸಿಧು

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್‌ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದರು. ಇದು ಕಾಂಗ್ರೆಸ್ ವರಿಷ್ಟರಲ್ಲಿ ದೊಡ್ಡ ತಲೆನೋವಿಗೆ ಕಾರಣವಾಗಿತ್ತು. ಈ ಕುರಿತು ಇಂದು ಮತ್ತೆ ಪ್ರತಿಕ್ರಿಯಿಸಿರುವ ಸಿಧು, ಹುದ್ದೆ ಇರಲಿ, ಇಲ್ಲದಿರಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಜೊತೆಗಿರುವೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆಶಯಗಳನ್ನು ಎತ್ತಿ ಹಿಡಿಯುತ್ತೇವೆ. ಹುದ್ದೆ ಇರಲಿ, ಇಲ್ಲದಿರಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಜೊತೆಗಿರುವೆ. ನಕರಾತ್ಮಕ ಶಕ್ತಿಗಳು ನಮ್ಮನ್ನು ಸೋಲಿಸಲು ಎಷ್ಟೇ ಪ್ರಯತ್ನಿಸಲಿ.. ಆದರೆ ಸಕರಾತ್ಮಕ ಧೋರಣೆಯಿಂದ ಪ್ರತಿ ಹಂತದಲ್ಲಿಯೂ ನಾವು ಮೇಲೆದ್ದು ಬರುತ್ತೇವೆ. ಅದು ಪಂಜಾಬ್ ಅನ್ನು ಗೆಲ್ಲಿಸುತ್ತದೆ, ನಮ್ಮ ಭಾತೃತ್ವ ಪ್ರತಿ ಪಂಜಾಬಿಯನ್ನು ಗೆಲ್ಲಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ಅಮರಿಂದರ್ ಸಿಂಗ್ ಬಿಜೆಪಿ ಪಕ್ಷ ಸೇರುವುದಿಲ್ಲ ಎಂದು ಹೇಳೀದ್ದು, ಸ್ವಂತ ಪಕ್ಷ ಕಟ್ಟುವ ಆಲೋಚನೆಯಲ್ಲಿದ್ದಾರೆ. ಎಲ್ಲಾ ಪಕ್ಷಗಳಲ್ಲಿರುವ ಅತೃಪ್ತರನ್ನು ಸೆಳೆಯುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

Read Also: 1,000 ಕೆಜಿ ತೂಕದ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ ಲೇಹ್‌ನಲ್ಲಿ ಅನಾವರಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights