ಭಬನಿಪುರದಲ್ಲಿ ಮತದಾನ ಆರಂಭ : ಬೂತ್ ನಲ್ಲಿ ಪೊಲೀಸ್ ಬಿಗಿ ಭದ್ರತೆ..!

ಬಹುನಿರೀಕ್ಷಿತ ದಕ್ಷಿಣ ಕೊಲ್ಕತ್ತಾದ ಭಬನಿಪುರ ವಿಧಾನಸಭಾ ಸ್ಥಾನಕ್ಕೆ ಇಂದು ಮತದಾನ ಆರಂಭಗೊಂಡಿದೆ. ಭಬನಿಪುರದಲ್ಲಿ ಮತದಾನ ಆರಂಭವಾಗಿದ್ದು ವಾರ್ಡ್ ನಂ .71 ರ ಬೂತ್ ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದಕ್ಷಿಣ ಕೊಲ್ಕತ್ತಾದ ಭಬನಿಪುರ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಪ್ರದೇಶದಲ್ಲಿ 15 ಕಂಪನಿಗಳ ಕೇಂದ್ರ ಪಡೆಗಳ ನಿಯೋಜನೆಯೊಂದಿಗೆ ಕಠಿಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅತ್ಯಂತ ಮುಖ್ಯವಾಗಿ ಭಬನಿಪುರ ಉಪಚುನಾವಣೆಯಲ್ಲಿ ಬಿಜೆಪಿಯ ಪ್ರಿಯಾಂಕಾ ತಬ್ರಿವಾಲ್ ಮತ್ತು ಸಿಪಿಐ (ಎಂ) ನ ಶ್ರೀಜಿಬ್ ಬಿಸ್ವಾಸ್ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರತಿಸ್ಪರ್ಧಿಸಲಿದ್ದಾರೆ.

ಮಮತಾ ಬ್ಯಾನರ್ಜಿ ಅವರಿಗೆ ಭಬನಿಪುರ ಕ್ಷೇತ್ರದಲ್ಲಿ ಗೆಲುವು ಪಡೆಯುವುದು ಮಹತ್ವದಾಗಿದ್ದು, ಒಂದೊಮ್ಮೆ ಚುನಾವಣೆ ಸೋತರೆ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯಬೇಕಾಗುತ್ತದೆ. ಈ ಹಿನ್ನಲೆ ಉಪಚುನಾವಣೆ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಭಬನಿಪುರದ ಜೊತೆಗೆ ಸಂಸರ್‌ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಲಲ್ಇ ಗುರುವಾರ ಉಪಚುನಾವಣೆ ನಡೆಯಲಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights