Police: ಶತಕದ ಗಡಿಯತ್ತ ಪೊಲೀಸ್‌ ಸಿಬ್ಬಂದಿಗೆ ಕೊರೊನಾ; ಪೊಲೀಸ್‌ ಠಾಣೆಗಳೇ ಸೀಲ್‌ಡೌನ್‌!

ಇದೀಗ ಸಚಿವರು ಹಾಗೂ ಅವರ ಕುಟುಂಬದ ಎಲ್ಲಾ ಸದಸ್ಯರು ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದು, ಖುದ್ದು ಸಚಿವರೇ ಕ್ವಾರಂಟೈನ್‌ನಲ್ಲಿದ್ದಾರೆ. ಸಚಿವ ಸುಧಾಕರ್ ಅವರ ತಂದೆ, ಮಡದಿ ಹಾಗೂ ಮಗಳಿಗೆ ಕೋವಿಡ್ -19 ಸೋಂಕು ದೃಢಪಟ್ಟಿತ್ತು.

ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಟ್ಟು 24 ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಜತೆಗೆ ಅಲಸೂರು ಪೊಲೀಸ್ ಮುಖ್ಯಸ್ಥರಿಗೂ ಕೊರೊನಾ ಸೋಂಕು ತಗುಲಿದೆ. ಆದ್ದರಿಂದ ಎರಡೂ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಅದೇ ರೀತಿ, ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಪಾಸಿಟಿವ್ ಧೃಢಪಟ್ಟ ಕಾರಣ ಸಂಪೂರ್ಣ ಪ್ರದೇಶವನ್ನು ಮುಚ್ಚಲಾಗಿದೆ ( ಸೀಲ್ ಡೌನ್ ). ತಿಲಕ್ ನಗರ ಪೊಲೀಸ್ ಠಾಣೆ, ಕೆಂಗೇರಿ ಪೊಲೀಸ್ ಠಾಣೆ, ಎಡಿಜಿಪಿ ಕಚೇರಿಯ ಆಪ್ತ ಸಹಾಯಕಗೆ ಕರೋನಾ ಸೋಂಕು ಪತ್ತೆಯಾದ ಕಾರಣ ಪೋಲಿಸ್ ಠಾಣೆಯನ್ನೇ ಸೀಲ್ ಡೌನ್ ಮಾಡಲಾಗಿದೆ.

ಈ ತನಕ ಬೆಂಗಳೂರು ನಗರದಲ್ಲಿ ಒಟ್ಟು 7 ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. 72 ಮಂದಿ ಪೊಲೀಸ್ ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ.

ಜೈನ ದೇವಸ್ಥಾನದಲ್ಲಿ ಕೋವಿಡ್ -19 ಪಾಸಿಟಿವ್ ಬಂದ ಕಾರಣ, ಚಿಕ್ಕಪೇಟೆ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಅದೇ ರೀತಿ ವಿ ವಿ ಪುರಂ, ಸಿದ್ದಾಪುರ, ವಿದ್ಯಾನಾರ್ಯನಪುರ ಸಹ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಕರ್ನಾಟಕ ಇದೀಗ ಅಪಾಯದ ಸ್ಥಿತಿಯಲ್ಲಿದೆ. ಬೆಂಗಳೂರು ನಗರದಲ್ಲಿ ಕೋವಿಡ್ -19 ನಿಯಂತ್ರಿಸಲು ಪರಿಸ್ಥಿತಿ ಸರ್ಕಾರದ ಕೈಮೀರಿದೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights