PM caresಗೆ ಚೀನಾದಿಂದ ಹಣ ಪಡೆಯುತ್ತಿದ್ದಾರೆ ಪ್ರಧಾನಿ ಮೋದಿ: ಕಾಂಗ್ರೆಸ್‌ ವಿರೋಧ!

ಕಾಂಗ್ರೆಸ್‌ನ ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾದಿಂದ ಹಣ ಪೂರೈಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದ್ದ ಬೆನ್ನಲ್ಲೇ, ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿ ಪಿಎಂ ಕೇರ್ಸ್‌ಗೆ ಚೀನಾದ ಸಂಸ್ಥೆಗಳು ದೇಣಿಗೆ ನೀಡುತ್ತಿವೆ. ಭಾರತ ಮತ್ತು ಚೀನಾ ನಡುವೆ ಗಡಿ ಸಂಬಂಧ ಬಿರುಕು ಬಿಟ್ಟಿರುವ ಸಂದರ್ಭದಲ್ಲಿ ಮೋದಿ ಸರ್ಕಾರ ಚೀನಾದಿಂದ ಹಣ ಪಡೆದುಕೊಳ್ಳುವುದು ಎಂಥ ವಿಪರ್ಯಾಸ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಳೆದ 6 ವರ್ಷಗಳಲ್ಲಿ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ 18 ಸಭೆಗಳನ್ನು ನಡೆಸಿದ್ದಾರೆ. ಆದರೆ ಇದರಿಂದ ದೇಶಕ್ಕೆ ಏನು ಲಾಭವಾಗಿದೆ. ನಿನ್ನೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಏಕೆ ಚೀನಾದ ಹೆಸರು ಹೇಳಿ ಅದನ್ನು ಆಕ್ರಮಣಕಾರಿ ಎಂದು ಪ್ರಸ್ತಾಪಿಸಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಪ್ರಶ್ನಿಸಿದ್ದಾರೆ.

ಚೀನಾ ಸರ್ಕಾರವನ್ನು ಆಕ್ರಮಣಕಾರಿ ಎಂದು ಪ್ರಧಾನಿ ಹೇಳಬೇಕು ಎಂದು ನಾನು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ. ದೇಶದ ಭದ್ರತೆ ವಿಚಾರದಲ್ಲಿ ಹೆಚ್ಚು ಆತಂಕಪಡುವ ಮತ್ತು ಎಚ್ಚರಿಕೆ ವಿಷಯ ಏನೆಂದರೆ ಚೀನಾದ ಕಂಪೆನಿಗಳಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ಪಡೆಯುತ್ತಿರುವುದು ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಗಳು ಚೀನಾದ ಕಂಪೆನಿಗಳಿಂದ ಪರಿಹಾರ ನಿಧಿಗೆ ಲಕ್ಷಾಂತರ, ಕೋಟ್ಯಂತರ ಹಣ ಪಡೆಯುತ್ತಿದ್ದಾರೆ ಎಂದರೆ ಅವರು ಚೀನಾವನ್ನು ಆಕ್ರಮಣಕಾರಿ ಎಂದು ಕರೆದು ತನ್ನ ದೇಶವನ್ನು ರಕ್ಷಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಅಭಿಷೇಕ್ ಸಿಂಘ್ವಿ ಪ್ರಶ್ನೆ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಬಗೆಹರಿಸಲು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿತ್ತು.ಅದಕ್ಕೆ ಎಲ್ಲಿಂದ ಹಣ ಬರುತ್ತಿದೆ, ಎಷ್ಟು ಬರುತ್ತಿದೆ ಎಂದು ಬಹಿರಂಗಪಡಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಾ ಬಂದಿವೆ. ಆದರೆ, ಸರ್ಕಾರ ಪಿಎಂ ಕೇರ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಿವೆ.

ಈ ಮಧ್ಯೆ ಚೀನಾ ಮೂಲದ Xiaomi: ₹10 ಕೋಟಿ, Huawei: ₹7 ಕೋಟಿ, One Plus: ₹1 ಕೋಟಿ, Oppo : ₹1 ಕೋಟಿ, TikTok : ₹30 ಕೋಟಿ ದೇಣಿಗೆ ನೀಡಿವೆ ಎಂದು ದ್ರುವ್‌ ರಾಟಿ ಟ್ವೀಟ್‌ ಮಾಡಿದ್ದಾರೆ.

https://twitter.com/dhruv_rathee/status/1277114803677519873?s=20

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights