ಕೊರೊನಾ ಉಚಿತ ಲಸಿಕೆ ವಿತರಣೆಗಾಗಿ ಕೇಂದ್ರಕ್ಕೆ ಒತ್ತಾಯ : ಬಿಜೆಪಿ ಅಲ್ಲದ ಮುಖ್ಯಮಂತ್ರಿಗಳಿಗೆ ಪಿಣರಾಯಿ ವಿಜಯನ್ ಕರೆ!

ಕೊರೊನಾ ಲಸಿಕೆಗಳ ಉಚಿತ ವಿತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಲು ಬಿಜೆಪಿ ಅಲ್ಲದ ಮುಖ್ಯಮಂತ್ರಿಗಳಿಗೆ ಪಿಣರಾಯಿ ವಿಜಯನ್ ಕರೆ ಕೊಟ್ಟಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 11 ರಾಜ್ಯಗಳ ಬಿಜೆಪಿ ಅಲ್ಲದ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕೇಂದ್ರ ಲಸಿಕೆಗಳನ್ನು ಖರೀದಿಸಿ ಅವುಗಳನ್ನು ಉಚಿತವಾಗಿ ವಿತರಿಸಬೇಕೆಂದು ಒತ್ತಾಯಿಸಲು ಯುನೈಟೆಡ್ ಫ್ರಂಟ್ ಗೆ ಕರೆ ನೀಡಿದ್ದಾರೆ. ಲಸಿಕೆ ನೀತಿಗಳಿಂದಾಗಿ ಭಾರತ ಕೋವಿಡ್ -19 ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯಗಳಿಗೆ ಲಭ್ಯವಿರುವ ಲಸಿಕೆಗಳ ಸಂಖ್ಯೆಯನ್ನು ಹೆಚ್ಚು ಸೀಮಿತಗೊಳಿಸಲಾಗುತ್ತಿದೆ. ಜೊತೆಗೆ ಬೆಲೆಗಳ ಬಗ್ಗೆ ತಯಾರಕರೊಂದಿಗೆ ಮಾತುಕತೆ ನಡೆಸಲು ರಾಜ್ಯಗಳನ್ನು ಬಿಡಲಾಗುತ್ತಿದೆ. ಅಂತಹ ನೀತಿಯ ಅಪಾಯಗಳನ್ನು ವಿಜಯನ್ ಗಮನಸೆಳೆದಿದ್ದಾರೆ.

11 ಸಿಎಂಗಳಿಗೆ ಪಿ ವಿಜಯನ್ , “ಲಸಿಕೆಗಳನ್ನು ಸಂಗ್ರಹಿಸುವುದು, ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್ ಅನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ನಡೆದುಕೊಳ್ಳುವ ಬಗೆ ನೊಡಿದರೆ ತುಂಬಾ ದುರದೃಷ್ಟಕರ ಎನಿಸುತ್ತದೆ. ನಮ್ಮ ನಿಜವಾದ ಬೇಡಿಕೆಯನ್ನು ಜಂಟಿಯಾಗಿ ಮುಂದುವರೆಸಿದರೆ ಇದರಿಂದಾಗಿ ಕೇಂದ್ರವು ತಕ್ಷಣವೇ ಕಾರ್ಯನಿರ್ವಹಿಸುತ್ತದೆ ” ಎಂದಿದ್ದಾರೆ.

ಇನ್ನೂ ವಿರಳ ಪೂರೈಕೆಯನ್ನು ಬಳಸಿಕೊಳ್ಳುವ ಮೂಲಕ ತಯಾರಕರು ಲಸಿಕೆ ಮಾರಾಟದಿಂದ ಹೇಗೆ ಲಾಭ ಗಳಿಸಲು ನೋಡುತ್ತಿದ್ದಾರೆ ಎಂಬುದನ್ನು ವಿಜಯನ್ ಗಮನಸೆಳೆದರು. ಲಸಿಕೆ ಉತ್ಪಾದನೆಯನ್ನು ಸ್ವಾಧೀನಪಡಿಸಿಕೊಳ್ಳಲು ಸಾರ್ವಜನಿಕ ವಲಯದ ಔಷಧೀಯ ಸಂಸ್ಥೆಗಳು ಹೇಗೆ ಸಮರ್ಥವಾಗಿವೆ ಎಂಬುದನ್ನು ಅವರು ಗಮನಸೆಳೆದಿದ್ದಾರೆ. ತ್ವರಿತ ಲಸಿಕೆ ಉತ್ಪಾದನೆ ಮತ್ತು ವಿತರಣೆಯೊಂದಿಗೆ ಹೇಗೆ ಕಾರ್ಯ ನಿರ್ವಹಿಸಬೇಕೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights