‘ಸಾರಿಗೆ ನೌಕರರಿಗೆ ಕೂಡಲೇ ಸಂಬಳವನ್ನು ನೀಡಿ’ ಸರ್ಕಾರಕ್ಕೆ ಜಗದೀಶ್ ವಿ. ಸದಂ ಆಗ್ರಹ!

ಕೊರೊನಾ ಸಂಕಷ್ಟದಲ್ಲಿರುವ ಸಾರಿಗೆ ನೌಕರರಿಗೆ ಕೂಡಲೇ ಸಂಬಳವನ್ನು ನೀಡಿ ಎಂದು ಸರ್ಕಾರಕ್ಕೆ ಜಗದೀಶ್ ವಿ. ಸದಂ ಆಗ್ರಹಿಸಿದ್ದಾರೆ.

‘ರಾಜ್ಯ ಸರ್ಕಾರ ಲಾಕ್ ಡೌನ್ ಹೇರಿ ದುರ್ಬಲ ವರ್ಗಗಳಿಗೆ ಪರಿಹಾರ ಧನವನ್ನು ವಿತರಿಸುವುದು ದೂರದ ಮಾತು. ತನ್ನದೇ ಸರ್ಕಾರದ ಅಧೀನದಲ್ಲಿರುವ ಸಾರಿಗೆ ನೌಕರರಿಗೆ ಸಂಬಳವನ್ನು ನೀಡದೆ ಶೋಷಣೆ ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ .ಸದಂ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಖೇದವನ್ನು ವ್ಯಕ್ತಪಡಿಸಿದರು.

ಸಾರಿಗೆ ಇಲಾಖೆಯ 1ಲಕ್ಷದ 25 ಸಾವಿರ ನೌಕರರಿಗೆ ಕಳೆದ ಏಪ್ರಿಲ್ ತಿಂಗಳ ಸಂಬಳ ಇನ್ನೂ ಸಹ ನೀಡದೆ ಸತಾಯಿಸುತ್ತಿದೆ. ಸರ್ಕಾರದ ಈ ಧೋರಣೆಯಿಂದ ಲಕ್ಷಾಂತರ ನೌಕರರ ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಸಂಚಕಾರ ಬಂದು ಯಕಶ್ಚಿತ್ ಬೀದಿಗೆ ಬೀಳುವ ಸನ್ನಿವೇಶ ಎದುರಾಗಿದೆ. ಏಪ್ರಿಲ್ ತಿಂಗಳಿನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರವನ್ನು ಮುಂದಿಟ್ಟುಕೊಂಡು ಈ ರೀತಿಯ ಸೇಡಿನ ಕ್ರಮವನ್ನು ಸರ್ಕಾರ ಮಾಡಲು ಹೊರಟಿರುವುದು ಸಲ್ಲದು.

ಮುಷ್ಕರದಲ್ಲಿ ಭಾಗವಹಿಸದೆ ಇರುವ ನೌಕರರಿಗೂ ಸಹ ಇದುವರೆವಿಗೂ ಸಂಬಳವನ್ನೂ ನೀಡಿಲ್ಲ . ಅಲ್ಲದೆ ಮುಷ್ಕರ ಮುಗಿದ ನಂತರ ಕೆಲಸಕ್ಕೆ ಆಗಮಿಸಿದ್ದ ನೌಕರರಿಗೆ ಕೆಲಸವನ್ನು ನೀಡದೆ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಾ ಆಡಳಿತ ವರ್ಗ ಸತತವಾಗಿ ಗೈರು ಹಾಜರಿಯನ್ನು ಹಾಕುತ್ತಿರುವುದು ಕಂಡುಬಂದಿದೆ ಎಂದು ಜಗದೀಶ್ ಆರೋಪಿಸಿದರು.

ನ್ಯಾಯಾಲಯದಲ್ಲಿ ಅನೇಕ ನೌಕರರು ಗಳ ವರ್ಗಾವಣೆ ಅಮಾನತು ಗಳನ್ನು ವಾಪಸು ತೆಗೆದುಕೊಳ್ಳಬೇಕೆಂದು ಆದೇಶವಾಗಿದ್ದರೂ ಸಹ ಸರ್ಕಾರವು ಇತ್ತಕಡೆ ಗಮನ ಹರಿಸದಿರುವುದು ನ್ಯಾಯಾಲಯಕ್ಕೆ ಮಾಡಿರುವ ಅಪಮಾನ. ಕೂಡಲೇ ನ್ಯಾಯಾಲಯದ ಆದೇಶವನ್ನು ಪಾಲಿಸಿ ಕಾರ್ಮಿಕರುಗಳಿಗೆ ನ್ಯಾಯ ಒದಗಿಸಬೇಕು ಹಾಗೂ ಈ ಕೂಡಲೇ ಏಪ್ರಿಲ್ ತಿಂಗಳ ಸಂಬಳವನ್ನು ಸಂಬಳವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಜಗದೀಶ್ ವಿ. ಸದಂ ಸರ್ಕಾರವನ್ನು ಆಗ್ರಹಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights