ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಾರಾಷ್ಟ್ರದ ಮಹಿಳೆಗೆ ಗ್ರಾಮದಿಂದ ಬಹಿಷ್ಕಾರ…!

2015 ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಾರಾಷ್ಟ್ರದ ಬೀಡ್ ಜಿಲ್ಲೆಯ 30 ವರ್ಷದ ಮಹಿಳೆಗೆ ಗ್ರಾಮ ಪಂಚಾಯಿತಿ ಬಹಿಷ್ಕರಿಸಿದೆ. ಸ್ಥಳಿಯ ನಿವಾಸಿಗಳು ಆಕೆ ವಾಸವಿರುವ ಸ್ಥಳವನ್ನು ತೊರೆಯುವಂತೆ ಒತ್ತಾಯಿಸಿವೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ.

ಗೆವ್ರೈ ತಹಸಿಲ್‌ನಲ್ಲಿರುವ ಸಂತ್ರಸ್ತೆಯ ಗ್ರಾಮ ಮಾತ್ರವಲ್ಲ ಪಕ್ಕದ ಎರಡು ಹಳ್ಳಿಗಳೂ ಅವಳನ್ನು ಬಹಿಷ್ಕರಿಸಿವೆ. ಸ್ಥಳ ಬಿಟ್ಟು ತೊಲಗುವಂತೆ ಗ್ರಾಮಸ್ಥರು ತಮ್ಮ ವಿರುದ್ಧ ನಿಂದನೀಯ ಭಾಷೆ ಬಳಸಿದ್ದಾರೆಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

ಐದು ವರ್ಷಗಳ ಹಿಂದೆ ಹತ್ತಿಯನ್ನು ತರಲು ಹಳ್ಳಿಯ ಜಮೀನೊಂದಕ್ಕೆ ಹೋಗಿದ್ದಾಗ ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಈ ವರ್ಷದ ಆರಂಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಹೀಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮನೆಯ ಬಾಗಿಲಿಗೆ ಹಳ್ಳಿಯಿಂದ ಹೊರಹೋಗುವಂತೆ ನೋಟಿಸ್ ಅಂಟಿಸಲಾಗಿದೆ. ಗ್ರಾಮಸ್ಥರು ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾಳೆ.

ಸರ್ಕಾರ ನನಗೆ ನ್ಯಾಯ ನೀಡಬೇಕು. ನಾನು ಎಲ್ಲಿಗೆ ಹೋಗಬೇಕು ಎಂದು ಸಂತ್ರಸ್ತೆ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾಳೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights