ಪಳನಿಸ್ವಾಮಿ ತಮಿಳುನಾಡಿನ ಮುಂಬರುವ ಚುನಾವಣೆಗೆ ಸಿಎಂ ಅಭ್ಯರ್ಥಿ – ಪನ್ನೀರ್‌ಸೆಲ್ವಂ ಘೋಷಣೆ!

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಯ ಎರಡು ಬಣಗಳ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. ವಿಶೇಷವೆಂದರೆ ಸಿಎಂ ಖುರ್ಚಿಗೆ ಕಣ್ಣಿಟ್ಟಿದ್ದ ಉಪ ಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಂ ಈ ಘೋಷಣೆ ಮಾಡಿದ್ದಾರೆ.

ಪಳನಿಸ್ವಾಮಿ ಮತ್ತು ಪನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಯ ಎರಡು ಶಿಬಿರಗಳ ನಡುವಿನ ಬಣ ಯುದ್ಧದ ಮಧ್ಯೆ ಪ್ರಮುಖ ಪ್ರಕಟಣೆ ಬಂದಿದೆ. 11 ಸದಸ್ಯರ ಸಮಿತಿಯ ಮೇಲೆ ಒಪಿಎಸ್ ಇಪಿಎಸ್ ಜೊತೆಗಿನ ವಿವಾದದಲ್ಲಿ ತೊಡಗಿದೆ. ಹೀಗಾಗಿ ಎಐಎಡಿಎಂಕೆಗೆ ಸಿಎಂ ಸ್ಥಾನದಲ್ಲಿ ಜಯಲಲಿತಾ ಅವರ ಚುಕ್ಕಾಣಿ ಯಾರು ಹಿಡಿಯುವುದಿಲ್ಲ ಎಂದು ಭಾವಿಸಲಾಗಿತ್ತು.

ಆದರೆ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಂ ಮತ್ತು ಇತರ ಎಐಎಡಿಎಂಕೆ ಮುಖಂಡರು ಬುಧವಾರ ರಾಜ್ಯದಲ್ಲಿ 2021ರಂದು ನಡೆಯುವ ವಿಧಾನಸಭಾ ಚುನಾವಣೆ ಚರ್ಚೆಗಾಗಿ ಚೆನ್ನೈನ ಪಕ್ಷದ ಕಚೇರಿಗೆ ಆಗಮಿಸಿದ್ದರು.

ಈ ವೇಳೆ ಎಡಪ್ಪಾಡಿ ಕೆ ಪಳನಿಸ್ವಾಮಿ 2021 ರ ತಮಿಳುನಾಡು ಚುನಾವಣೆಗೆ 11 ಸದಸ್ಯರ ಚುಕ್ಕಾಣಿ ಸಮಿತಿಯನ್ನು ಘೋಷಿಸಿದರು. 11 ಸದಸ್ಯರಲ್ಲಿ ಆರು ಮಂದಿ ಒಪಿಎಸ್ ಶಿಬಿರದವರಾಗಿದ್ದು, ಸಿಎಂ ಕುರ್ಚಿಯ ಮೇಲೆ ದೀರ್ಘಕಾಲ ಕಣ್ಣಿಟ್ಟಿದ್ದ ಓ ಪನ್ನೀರ್‌ಸೆಲ್ವಂ ಅವರನ್ನು ಸಮಾಧಾನಪಡಿಸುವ ಪ್ರಯತ್ನವಾಗಿದೆ.

ಎಐಎಡಿಎಂಕೆ ಸ್ಟೀರಿಂಗ್ ಕಮಿಟಿಯ ಸದಸ್ಯರು ದಿಂಡಿಗುಲ್ ಶ್ರೀನಿವಾಸನ್, ತಂಗಮಣಿ, ಎಸ್ಪಿ ವೇಲುಮಣಿ, ಡಿ ಜಯಕುಮಾರ್, ಸಿ.ವಿ.ಶಣ್ಮುಖಂ, ಕಾಮರಾಜ್, ಜೆಸಿಡಿ ಪ್ರಭಾಕರ್ನ್, ಮನೋಜ್ ಪಾಂಡಿಯನ್, ಪಾ ಮೋಹನ್, ಗೋಪಾಲಕೃಷ್ಣನ್ ಮತ್ತು ಟಿ ಮಾಣಿಕಂ ಈ 11 ಸದಸ್ಯರು ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದ ಉಪ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಅವರ ಮನವೊಲಿಸಲು ಯಶಸ್ವಿಯಾಗಿದ್ದಾರೆ.

11 ಸದಸ್ಯರ ಸ್ಟೀರಿಂಗ್ ಕಮಿಟಿಯ ಮುಂದೆ ಬುಧವಾರ ಪಳನಿಸ್ವಾಮಿ ಮುಂದಿನ ಸಿಎಂ ಚುನಾವಣೆಯ ಅಭ್ಯರ್ಥಿ ಎಂದು ಪನ್ನೀರ್‌ಸೆಲ್ವಂ ಘೋಷಣೆ ಮಾಡಿದ್ದಾರೆ.

ಒ ಪನೀರ್‌ಸೆಲ್ವಂ ಅವರು ಸೋಮವಾರ ಟ್ವಿಟ್ ಮಾಡಿ, ರಾಜ್ಯದ ಜನರ ಮತ್ತು ಎಐಎಡಿಎಂಕೆ ಕಾರ್ಯಕರ್ತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights