Badminton : ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೈನಾ, ಪಿ.ಕಶ್ಯಪ್ ಹಾಗೂ ಕೆ.ಶ್ರೀಕಾಂತ್ ಶುಭಾರಂಭ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್, ಪಿ.ಕಶ್ಯಪ್ ಹಾಗೂ ಕೆ.ಶ್ರೀಕಾಂತ್ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಏಳನೇ ಶ್ರೇಯಾಂಕಿತೆ ಸೈನಾ

Read more

ರವಿ ಬೆಳಗೆರೆ, ಪಿ.ಲಂಕೇಶ್ ಮತ್ತು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ…

“ಬರೀ 75 ಪೈಸೆಯ ರಿಫೀಲ್ ಇದ್ದರೆ ಸಾಕು, ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕಿಬಿಟ್ಟೇನು”. ಹೀಗೆ ಹೇಳುತ್ತ ಬದುಕು ಕಟ್ಟಿಕೊಂಡಿದ್ದು ಅಲ್ಲದೇ ಅದರಲ್ಲೇ ಉನ್ನತ ಯಶಸ್ಸು ಗಳಿಸಿದ್ದು ರವಿ ಬೆಳಗೆರೆ. ಸುಪಾರಿ ಪ್ರಕರಣ ಬೆಳಕಿಗೆ ಬಂದ ದಿನದಿಂದ ಈ ಕ್ಷಣದವರೆಗೆ ರವಿ ಬೆಳಗೆರೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದರೆ, ಅಲ್ಲಲ್ಲಿ ಅನುಕಂಪ ಮತ್ತು ಸಂಕಷ್ಟದಿಂದ ಹೊರಬರಲಿ ಎಂಬ ಹಾರೈಕೆಗಳು ವ್ಯಕ್ತವಾಗುತ್ತಿವೆ. ಜೊತೆಗೆಹೋಲಿಕೆ, ತೆಗಳಿಕೆ ಮತ್ತು ಕೊಡುಗೆಗಳ ಬಗ್ಗೆಯೂ ವಿಷಯಗಳು ಪ್ರಸ್ತಾಪವಾಗುತ್ತಿವೆ. ಇದೆಲ್ಲವೂ ಇನ್ನೂ ಕೆಲ ದಿನಗಳ ಮಟ್ಟಿಗೆ ಮುಂದುವರೆಯಲಿವೆ. ರವಿ ಬೆಳಗೆರೆ ಅವರನ್ನು ಟೀಕಿಸುವ ಭರದಲ್ಲಿ ಕೆಲವರು ಪಿ.ಲಂಕೇಶ್ ಜೊತೆ ಹೋಲಿಕೆ ಮಾಡುತ್ತಿದ್ದು, ಆಕಾಶ ಎಲ್ಲಿ-ಭೂಮಿ ಎಲ್ಲಿ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದಲ್ಲಿ ಇಬ್ಬರೂ ದಿಗ್ಗಜರು ಎಂಬುದನ್ನು ಮರೆಯಬಾರದು. ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದು, ಅವರನ್ನು ಒಂದೇ ತಕ್ಕಡಿಯಲ್ಲಿ ತೂಗಿಸಲಾಗದು. ಪಿ.ಲಂಕೇಶ್ ಅವರು ರಾಜಕೀಯ ವಿಷಯಗಳನ್ನೇ ಪ್ರಧಾನವಾಗಿರಿಸಿಕೊಂಡು”ಲಂಕೇಶ್ ಪತ್ರಿಕೆ” ಮುಖಾಂತರ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರೆ, ರವಿ ಬೆಳಗೆರೆ ವರ್ಣರಂಜಿತ ವಿಷಯಗಳನ್ನು ಆಧರಿಸಿಕೊಂಡು “ಹಾಯ್ ಬೆಂಗಳೂರ್” ಮುಂಚೂಣಿಗೆ ತರುವಲ್ಲಿ ಯಶಸ್ವಿಯಾದರು. ಪತ್ರಿಕೋದ್ಯಮದಲ್ಲಿ ಹಲವು ಏಳುಬೀಳು ಕಂಡ ಮತ್ತು ಅಶಸ್ತಿನ ಮನುಷ್ಯ ಎಂದು ಬಿಂಬಿತಗೊಂಡ ರವಿ ಬೆಳಗೆರೆ “ಹಾಯ್” ಆರಂಭಿಸಿದಾಗ, ಯಾರೂ ಸಹ ಗಂಭೀರವಾಗಿ ಪರಿಗಣಿಸಿರಲಿಲ್ಲ. ಬೆಂಗಳೂರು ವಲಯಕ್ಕೆ ಮಾತ್ರಉದ್ದೇಶವಾಗಿರಿಸಿಕೊಂಡು ಅವರು ಹೊರತಂದ “ಹಾಯ್” ಕೇವಲ ನಾಲ್ಕೇ ವಾರಗಳಲ್ಲಿ ತನ್ನ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿಕೊಂಡಿತು. ಕೆಲವೇ ದಿನಗಳಲ್ಲಿ ಲಂಕೇಶ್ ಪತ್ರಿಕೆಯನ್ನು ಹಿಂದಿಕ್ಕಿದ “ಹಾಯ್” ತನ್ನ ಪ್ರಸಾರಸಂಖ್ಯೆ ಹೆಚ್ಚಿಸಿಕೊಂಡಿತು. ಲಂಕೇಶ್ ಪತ್ರಿಕೆಗೆ ಕೊಂಚ ಹಿನ್ನಡೆಯಾದದ್ದು ಲಂಕೇಶ್ ಅವರಿಗೆ ಬೇಸರ ತಂದಿತು. ಕೆಲವೇ ದಿನಗಳಲ್ಲಿ ರವಿ ಮತ್ತು ಲಂಕೇಶ್ ನಡುವೆ ಶೀತಲಸಮರವೂ ನಡೆದು ಹೋಯ್ತು. ಎರಡೂ ಪತ್ರಿಕೆಗಳನ್ನುಓದುತ್ತಿದ್ದ ಕೆಲ ಪ್ರಗತಿಪರರು, ವಿಚಾರವಂತರು ಶೀತಲಸಮರ ಕೊನೆಗಾಣಿಸಲು ಪ್ರಯತ್ನಿಸಬೇಕಾಯಿತು.   ಆದರೆ ಅನ್ಯಾರೋಗ್ಯದಿಂದ ಲಂಕೇಶ್ ಅವರು ತೀರಿಕೊಂಡಾಗ,”ಹಾಯ್” ಮುಖಪುಟದಲ್ಲಿ ಕಂಡಿದ್ದು “ಆಲದ ಮರ ಉರುಳಿತು” ಎಂಬರ್ಥದ headline. ಅಂದಿನ ಸಂಚಿಕೆಯ ಕೆಲ ಪುಟಗಳನ್ನು ಲಂಕೇಶ್ ಅವರನ್ನು ಭಾವಪೂರ್ಣಶ್ರದ್ಧಾಂಜಲಿ ಸಲ್ಲಿಸಲೆಂದೇ ಮೀಸಲಿಟ್ಟಿದ್ದರು. “ಹಾಯ್” ಅಸ್ತಿತ್ವಕ್ಕೆ ಬರಲು ಕಾರಣಕರ್ತರೇ ಲಂಕೇಶ್. ಹಾಯ್ ಒಂದು ಸ್ವರೂಪ ಪಡೆಯಲು ಮತ್ತು ಯಶಸ್ವಿಯಾಗಲು ಲಂಕೇಶ್ ಪತ್ರಿಕೆ ಪ್ರಮುಖ ಕಾರಣ ಎಂದು ಬರೆದರು. ಲಂಕೇಶರಿಂದ ಪತ್ರಿಕೋದ್ಯಮ ಅಲ್ಲದೇ ಹಲವು ವಿಷಯಗಳನ್ನು ಕಲಿತಿದ್ದರಿಂದಲೇ ಹಾಯ್ನಂತಹ ಪತ್ರಿಕೆ ತರಲು ಸಾಧ್ಯವಾಯಿತು ಎಂದು ಹೇಳಿಕೊಂಡರು. ಪತ್ರಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಇದ್ದ ಪೈಪೋಟಿ ಮತ್ತುಶೀತಲಸಮರ ಆ ಬರೆವಣಿಗೆಯಲ್ಲಿ ಇರಲಿಲ್ಲ. ಲಂಕೇಶ್ ಪತ್ರಿಕೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರೂ ಲಂಕೇಶ್ ಅವರ ಟೀಕೆ-ಟಿಪ್ಪಣಿ ಅಂಕಣವೇ ಹೆಚ್ಚು ಜನಪ್ರಿಯವಾದದ್ದು. ಅದರ ಜೊತೆಗೆ ಬರುತ್ತಿದ್ದ ನೀಲು ಕಾವ್ಯ ಕೂಡ ಅಷ್ಟೇ ಅಚ್ಚುಮೆಚ್ಚಿನದಾಗಿತ್ತು. ರಾಜಕೀಯ ಮತ್ತುತನಿಖಾ ವರದಿಗಾರಿಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಲಂಕೇಶ್ ಪತ್ರಿಕೆಗೆ ಹಲವು ವರ್ಷಗಳವರೆಗೆ ಸೆಡ್ಡು ಹೊಡೆಯುವವರು ಯಾರೂ ಇರಲಿಲ್ಲ. ಲಂಕೇಶ್ ಪತ್ರಿಕೆಯಿಂದ ಹಲವಾರು ಪ್ರಗತಿಪರರು, ಪತ್ರಕರ್ತರು, ಅಂಕಣಕಾರರು ಮತ್ತು ವಿಚಾರವಂತರು ಬೆಳಕಿಗೆ ಬಂದರು. ಕೋಮುವಾದದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಪ್ರಗತಿಪರ ಮತ್ತು ಜಾತ್ಯತೀತ ಶಕ್ತಿಗಳನ್ನು ಒಂದುಗೂಡಿಸಿ, ಬೆಳೆಸುವಲ್ಲಿ ಎಂದಿಗೂ ಹಿಂದೆ ಬೀಳಲಿಲ್ಲ. ಒಂದುಸ್ಪಷ್ಟವಾದ ರಾಜಕೀಯ ನಿಲುವು ತಳೆಯುವಲ್ಲಿ ಮತ್ತು ಒಂದು ಪೀಳಿಗೆಯನ್ನು ಜಾಗೃತವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದನ್ನು ಯಾರೂ ಸಹ ಅಲ್ಲಗಳೆಯರಾರು. “ಹಾಯ್ ಬೆಂಗಳೂರ್” ಯುವಜನರಲ್ಲಿ ತನ್ನದೇ ಪ್ರಭಾವ ಹೊಂದಿದೆ. ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದಲ್ಲಿ ಈಗಲೂ ನಂ.1 ಸ್ಥಾನದಲ್ಲಿರುವ ಈ ಪತ್ರಿಕೆಯು ಮುಖ್ಯವಾಗಿ ಯುವಜನರನ್ನು ಕೇಂದ್ರೀಕರಿಸಿತು. ಯಾರೂ ಬರೆಯದಅಪರಾಧ ಜಗತ್ತು, ವಂಚಕ ಸ್ವಾಮೀಜಿ ಮುಂತಾದವರ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿತು ಅಲ್ಲದೇ ಹೊಸ ತೆರನಾದ ಭಾಷೆಯನ್ನು ಪರಿಚಯಿಸಿತು. ಗಂಭೀರ ಸ್ವರೂಪದ ಭಾಷೆಗಿಂತ ಭಿನ್ನವಾಗಿ “light reading” ಎಂಬಪ್ರಕಾರ ಪ್ರತಿ ಪುಟದಲ್ಲಿ ಕಾಣಸಿಕ್ಕಿತು. ಒಂದರ್ಥದಲ್ಲಿ different uniformity. ಇದರಲ್ಲೂ ಜಯಂತ್ ಕಾಯ್ಕಿಣಿ, ಆಲೂರು ಚಂದ್ರಶೇಖರ ಮುಂತಾದವರ ಅಂಕಣಗಳು ಜನಪ್ರಿಯತೆ ಕಂಡವು. ವರ್ಣಮಯಗೊಳಿಸಲುಅವಕಾಶವಿದ್ದರೂ “ಕಪ್ಪು ಬಿಳುಪಿನ ಸುಂದರಿ”ಯೆಂದೇ ಓದುಗರಿಗೆ ಹತ್ತಿರವಾಯಿತು. ಲಂಕೇಶ್ ಅವರಂತೆ ರವಿ ಬೆಳಗರೆ, ರವಿ ಬೆಳಗೆರೆಯಂತೆ ಲಂಕೇಶ್ ಅವರನ್ನು ಹೋಲಿಕೆ ಮಾಡಲು ಆಗಲ್ಲ. ಲಂಕೇಶ್ ಅವರು ಪತ್ರಿಕೆಯ ಸಂಪಾದಕರಾಗಿ ರಾಜಕೀಯಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ನೀಡಿದರೆ, ರವಿಅವರು ಸಂಪಾದಕರಾಗಿ ಯುವಜನರ ಸ್ನೇಹಿತರಾದರು. ಲಂಕೇಶ್ ಅವರು ಆಗಾಗ್ಗೆ ತಮ್ಮ ಅಂಕಣಗಳಲ್ಲಿ ತಮ್ಮ ಹವ್ಯಾಸ, ಆಸಕ್ತಿ ಮತ್ತು ಇನ್ನಿತರ ವಿಷಯಗಳನ್ನು ಹಂಚಿಕೊಂಡರೆ, ರವಿ ತಮ್ಮ ಖಾಸಗಿ ಬದುಕನ್ನು ಖಾಸ್ಬಾತ್ಮೂಲಕ ಬಿಚ್ಚಿಟ್ಟರು. ಸಂಪಾದಕೀಯ ವಿಷಯದಲ್ಲಿ ಇಬ್ಬರೂ ಕೋಮುವಾದಿಗಳನ್ನು, ಬಲಪಂಥೀಯರನ್ನು ಅಷ್ಟಾಗಿ ಹಚ್ಚಿಕೊಳ್ಳಲಿಲ್ಲ. ಎಡಪಂಥೀಯ, ಪ್ರಗತಿಪರ ವಿಷಯಗಳಿಗೆ ಆದ್ಯತೆ ನೀಡಿರುವುದು ಅವರ ಬರಹಗಳೇ ಹೇಳುತ್ತವೆ. ನಕ್ಸಲೀಯರ ನಂಟು ಇರುವುದನ್ನು ರವಿ ಕೊಂಚ ಹೆಚ್ಚಾಗಿಯೇ ಹೇಳಿಕೊಂಡರು. “ಹಾಯ್’ನಲ್ಲಿ ಬರೀ ಅಪರಾಧ ವೈಭವೀಕರಿಸಲಿಲ್ಲ. ಸೈಜಾಲಜಿ, ಆತ್ಮವಿಶ್ವಾಸ ವೃದ್ಧಿಸುವಿಕೆ ಸಂಬಂಧಿಸದಂತೆ ಬಾಟಂ ಐಟಂ, ಪ್ರೀತಿ-ಪ್ರೇಮದ ಕುರಿತು ಲವಲವಿಕೆ, ಸಾಮಾನ್ಯಜನರ ಕುರಿತು “ಇಂಥವರು ಇದ್ದಾರೆ”, ತಾಯಂದಿರಬಗ್ಗೆ ‘ಕೋಟೆ ಕಟ್ಟಿದ ತಾಯಂದಿರು” ಹೀಗೆ ಒಂದಲ್ಲ, ಹಲವು ಅಂಕಣಗಳು ಆಯಾ ಕಾಲಘಟ್ಟದಲ್ಲಿ ಯುವಜನರ ಮೇಲೆ ಪ್ರಭಾವ ಬೀರಿವೆ ಎಂಬುದನ್ನು ಅಲ್ಲಗಳೆಯಲಾಗದು. ಸಂಕಷ್ಟ, ಅಹವಾಲು ಪರಿಹರಿಸುವಂತೆ ಹಾಯ್ ಕಚೇರಿಗೆಕೋರಿ ಬರುತ್ತಿದ್ದ ಸಾವಿರಾರು ಓದುಗರು, ಜನರು ನಿರಾಸೆಯಿಂದ ಮುಕ್ತಗೊಂಡು ನಗುಮೊಗದಲ್ಲಿ ಮರಳಿದ್ದಾರೆ ಎಂಬುದನ್ನು ದಾಖಲಿಸದೇ ಇರಲಾಗದು. ಲಂಕೇಶ್ ಅವರು ಜಾಹೀರಾತು ಇಲ್ಲದೇ 4 ದಶಕಗಳ ಕಾಲ ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಿದರೆ, ರವಿ ಅವರು ಕೂಡ 2 ದಶಕಗಳಿಂದ ಜಾಹೀರಾತು ಇಲ್ಲದೇ ಪತ್ರಿಕೆ ನಡೆಸಿದ್ದಾರೆ. “ಅಚ್ಚರಿ” ಎಂಬ ಒಂದು ಸಂಚಿಕೆಯನ್ನು ಒಮ್ಮೆಮಾತ್ರ ತಂದ ಅವರು “ಓ ಮನಸ್ಸೇ” ಎಂಬ ಮತ್ತೊಂದು ಜಾಹೀರಾತು ಇಲ್ಲದೆ ಸೈಕಾಲಜಿ ಪತ್ರಿಕೆ ಹೊರ ತಂದರು. ರವಿ ದೇಶ-ವಿದೇಶದಲ್ಲಿ ಓಡಾಡಿದ್ದು ಅಲ್ಲದೇ ಭೂಕಂಪ-ಯುದ್ಧಭೂಮಿಯಿಂದ ಪ್ರತ್ಯಕ್ಷ ವರದಿ ಸಹ ಕೊಟ್ಟರು. ಆದರೆ ಸದ್ಯದ ಬೆಳವಣಿಗೆ ನೋಡುತ್ತಿದ್ದರೆ, ರಾಜ್ಯದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಅವನತಿ ಅಂಚಿನಲ್ಲಿದ್ದಂತೆ ಕಾಣುತ್ತದೆ. ಗೌರಿ ಲಂಕೇಶ್ ಅವರ ಹತ್ಯೆಯೊಂದಿಗೆ “ರಂಜನೆ, ಬೋಧನೆ, ಪ್ರಚೋದನೆ ಗೌರಿ ಲಂಕೇಶ್” ಪತ್ರಿಕೆಈಗಾಗಲೇ ನಿಂತು ಹೋಗಿದೆ. ಅಗ್ನಿ ವಾರ ಪತ್ರಿಕೆ ಆನ್ಲೈನ್ ಆಗಲಿದೆ ಎಂಬ ಸುದ್ದಿ ಇದೆ. ಇಂದ್ರಜೀತ್ ಲಂಕೇಶ್ ಪತ್ರಿಕೆ ಬಹುತೇಕ ಸ್ಟಾಲ್ಗಳಲ್ಲಿ ಕಾಣಿಸುವುದಿಲ್ಲ. ಇನ್ನು ಹಾಯ್ಗೂ ಅಂತಹ ಸ್ಥಿತಿ ಬಂದರೆ, ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಸ್ವರೂಪ ಕಳೆದುಕೊಳ್ಳಬಹುದು. ಹಾಯ್ ಬೆಂಗಳೂರ್ ಮಾದರಿ ಅನುಸರಿಸಿ, ಹಲವು ಪತ್ರಿಕೆಗಳು ಹೊರಬಂದವು. ಅಷ್ಟೇ ಬೇಗ ಕಣ್ಣು ಮುಚ್ಚಿದವು. ಇನ್ನೂ ಕೆಲವು ತೆವಳುತ್ತ ಸಾಗಿವೆ. ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಜೀವಾಳವಾದರಾಜಕೀಯ, ಹಗರಣ ಬಯಲುಗೊಳಿಸುವ ತನಿಖಾ ವರದಿಗಾರಿಕೆ ಹಿನ್ನಡೆಯಾಗದಿರಲಿ ಎಂಬ ಆಶಯ ನನ್ನದು. -ರಾಹುಲ ಬೆಳಗಲಿ

Read more
Social Media Auto Publish Powered By : XYZScripts.com