‘ನಮ್ಮ ಮಗಳು ಒತ್ತಡದಲ್ಲಿದ್ದಾಳೆ, ಆಕೆಯ ಹೇಳಿಕೆ ಪರಿಗಣಿಸಬೇಡಿ’ – ಸಿಡಿ ಯುವತಿ ಪೋಷಕರ ಮನವಿ…!

ಅತ್ತ ಅಜ್ಞಾತ ಸ್ಥಳದಿಂದ ಸಿಡಿ ಯುವತಿ ವಿಡಿಯೋ ರಿಲೀಸ್ ಮಾಡುತ್ತಿದ್ದಂತೆ ಇತ್ತ ಸಿಡಿ ಸಂತ್ರಸ್ತೆ ತಂದೆ-ತಾಯಿ ಮಾಧ್ಯಮ ಹೇಳಿಕೆ ನೀಡುತ್ತಿದ್ದಾರೆ. ನಿಜಕ್ಕೂ ಇದೊಂದು ಹಾವು ಏಣಿಯಾಟದಂತೆ ಬಾಸವಾಗುತ್ತಿದೆ.

ನಮ್ಮ ತಂದೆ-ತಾಯಿಯನ್ನು ಕಾಪಾಡಿ. ಅವರನ್ನು ರಮೇಶ್ ಜಾರಕಿಹೊಳಿ ಪ್ರಭಾವದಿಂದ ಬಳಸಿಕೊಳ್ಳುತ್ತಿದ್ದಾರೆ. ನನ್ನನ್ನು ಅಪರಹಿಸಲಾಗಿದೆ ಎಂದು ತಂದೆ ತಾಯಿಯಿಂದ ದೂರು ಕೊಡಿಸಿದ್ದಾರೆ. ಅವರಿಗೆ ರಕ್ಷಣೆ ಕೊಡಿ ಎಂದು ವಿಡಿಯೋ ಮಾಡಿ ಹರಿಬಿಡುತ್ತಿದ್ದಾಳೆ.

ಇತ್ತ ಯುವತಿ ಪೋಷಕರು,’ ನಮ್ಮ ಮಗಳು ಡಿಕೆ ಶಿವಕುಮಾರ ಒತ್ತಡಕ್ಕೆ ಮಣಿದು ವಿಡಿಯೋ ರಿಲೀಸ್ ಮಾಡುತ್ತಿದ್ದಾಳೆ. ಅವರು ಹೇಳಿದಂತೆ ಅವಳು ಹೇಳುತ್ತಿದ್ದಾಳೆ. ನಾವು ಯಾರ ಒತ್ತಡಕ್ಕೂ ಒಳಗಾಗಲಿಲ್ಲ. ಆದರೆ ಅವಳಿಗೆ ಮಾತ್ರ ಡಿಕೆ ಶಿವಕುಮಾರ್ ಒತ್ತಡ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಆಕೆಯ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು’ ಎಂದು ಯುವತಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ ‘ಆಕೆಯನ್ನು ನಮ್ಮೊಂದಿಗೆ 4-5 ದಿನ ಇರಲು ಅವಕಾಶ ಕೊಡಿ. ಒತ್ತಡದಿಂದ ಆಕೆ ಹೊರಬರಲಿ. ನಂತರ ಆಕೆ ಹೇಳಿಕೆಯನ್ನು ತೆಗೆದುಕೊಳ್ಳಿ. ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ’ ಎಂದು ಕೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಅತ್ತ ಯುವತಿ ವಿಡಿಯೋ ಬಾಂಬ್ ಸಿಡಿಸುತ್ತಿದ್ದಂತೆ ಇತ್ತ ಯುವತಿ ಪೋಷಕರು ಪ್ರತಿಕ್ರಿಯೆಯಾಗಿ ಮತ್ತೊಂದು ಬಾಂಬ್ ಸಿಡಿಸುತ್ತಿದ್ದಾರೆ. ಹೀಗಾಗಿ ಇದು ಯಾವ ಹಂತಕ್ಕೆ ಬಂದು ತಲುಪುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights