Oscar 2020 : ಹೊಸ ಇತಿಹಾಸ ನಿರ್ಮಿಸಿದ ಪ್ಯಾರಸೈಟ್, ಅತ್ಯುತ್ತಮ ಚಲನಚಿತ್ರ ಸಹಿತ 3 ಆಸ್ಕರ್

92ನೇ ಆಸ್ಕರ್ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕರಲ್ಲದೆ, ಅವರ ಪ್ಯಾರಸೈಟ್ ಚಿತ್ರವು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯ ಮತ್ತು ಅತ್ಯುತ್ತಮ ಚಿತ್ರಕಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ಯಾರಸೈಟ್‌ ಸಿನಿಮಾದ ಅತ್ಯುತ್ತಮ ನಿರ್ದೇಶಕ ಆಸ್ಕರ್‌ ಪ್ರಶಸ್ತಿ ಪಡೆದ ಬಾಂಗ್ ಜೂನ್-ಹೋ

ಪ್ಯಾರಸೈಟ್ ಚಿತ್ರದ ಟ್ರೇಲರ್‌ ನೋಡಿ

ಇನ್ನು ಜೋಕರ್‌ ಚಿತ್ರದ ಜೊವಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ, ಜೂಡಿ ಚಿತ್ರದ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ, ಒನ್ಸ್ ಅಪಾನ್ ಎ ಟೈಮ್‌ ಇನ್‌ ಹಾಲಿವುಡ್‌ ಚಿತ್ರದ ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ, ಮತ್ತು ಮ್ಯಾರೇಜ್‌ ಸ್ಟೋರಿ ಚಿತ್ರದ ಲಾರಾ ಡರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಜೊವಾಕ್ವಿನ್ ಫೀನಿಕ್ಸ್ ಮತ್ತು ರೆನೀ ಜೆಲ್ವೆಗರ್

ಲಾಸ್ ಏಂಜಲಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 92ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಆಸ್ಕರ್ ಪ್ರಶಸ್ತಿಗೆ ಈ ಮೊದಲು ಭಾರತದಿಂದ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅಭಿನಯದ ‘ಗಲ್ಲಿ ಬಾಯ್’ ಸಿನಿಮಾ ಆಯ್ಕೆ ಆಗಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಅದು ವಿಫಲವಾಗಿದೆ.

ಇನ್ನುಳಿದಂತೆ ಹಲವು ಪ್ರಶಸ್ತಿಗಳ ವಿವರಗಳು ಕೆಳಗಿನಂತಿವೆ.

ಅತ್ಯುತ್ತಮ ಡಾಕ್ಯುಮೆಂಟರಿ: ‘ಅಮೇರಿಕನ್ ಫ್ಯಾಕ್ಟರಿ’
ಅತ್ಯುತ್ತಮ ಚಿತ್ರ: ‘ಪ್ಯಾರಸೈಟ್’
ಅತ್ಯುತ್ತಮ ನಿರ್ದೇಶಕ: ಬಾಂಗ್ ಜೂನ್ (ಪ್ಯಾರಸೈಟ್ ಸಿನಿಮಾ)
ಅತ್ಯತ್ತಮ ವಿಎಫ್ಎಕ್ಸ್: 1917
ಅತ್ಯುತ್ತಮ ಎಡಿಟಿಂಗ್: ಫೋರ್ಡ್ vs ಫೆರಾರಿ

ಅತ್ಯುತ್ತಮ ಕಿರುಚಿತ್ರ: ಹೇರ್‌ ಲವ್‌
ಅತ್ಯುತ್ತಮ ಪೋಷಕ ನಟಿ: ಲೌರಾ ಡೆರ್ನ್, (ಮ್ಯಾರೇಜ್ ಸ್ಟೋರಿ ಸಿನಿಮಾ)

ಆನಿಮೇಟೇಡ್‌ ಸಿನಿಮಾ: ಟಾಯ್‌ ಸ್ಟೋರಿ4

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights