Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿ ಏನು ಗೊತ್ತೇ? ಡೀಟೇಲ್ಸ್‌

ಮೋದಿ ಸರ್ಕಾರವು ಇಸ್ರೇಲಿನ pegasus ಸೈಬರ್ ಗೂಢಚರ್ಯೆ ಉಪಕರಣವನ್ನು ಬಳಸಿಕೊಂಡು ಭಾರತೀಯ ಪತ್ರಕರ್ತರ ಮೇಲೆ, ವಿರೋಧ ಪಕ್ಷಗಳಮೇಲೆ ಹಾಗು ಸರ್ಕಾರದ ಬೆದರಿಕೆಗೆ ಬಗ್ಗದ ಅಧಿಕಾರಿಗಳು ಮತ್ತು ವಿದ್ವಾಂಸರ ಮೇಲೆ ಹಲವಾರು ವರ್ಷಗಳಿಂದ ಗೂಢಚರ್ಯೆ ಮಾಡುತ್ತಿರುವುದು ಇದೀಗ ಬಯಲಾಗಿಯಷ್ಟೇ..

ಆದರೇನಂತೆ…

ಮೋದಿ ಸರ್ಕಾರ ಮಾಮೂಲಿನಂತೆ ಇವೆಲ್ಲಾ ವಿದೇಶಿ ಶಕ್ತಿಗಳ ಜೊತೆಸೇರಿ ಸ್ಥಳೀಯ ವಿರೋಧ ಪಕ್ಷಗಳು ದೇಶದ ವಿರುದ್ಧ ನಡೆಸುತ್ತಿರುವ ಕುತಂತ್ರ ಎಂಬ ಕ್ರೋನಾಲಜಿ ಕಟ್ಟುತ್ತಿದೆ…

ಅಮಿತ್ ಷಾ ಅವರಂತೂ, ಈ ಭಾರತದ ಸಂಸತ್ತು ಸಮಾವೇಶಗೊಳ್ಳುವ ಹಿಂದಿನ ದಿನವೇ ಈ ವರದಿ ಬಿಡುಗಡೆಯಾಗಿರುವ ಹಿಂದಿನ ಕ್ರೋನಾಲಜಿ ಅರ್ಥಮಾಡಿಕೊಳ್ಳಿ ಎಂದು ಸಂಚು ಕಥನ ಹೆಣೆಯಲು ಮುಂದಾಗಿದ್ದಾರೆ…

ಗೃಹಮಂತ್ರಿಗಳು ಇಷ್ಟೆಲ್ಲಾ ಹೇಳಿದ ಮೇಲೆ ಅಸಲೀ ಕ್ರೋನಾಲಜಿಯನ್ನೇ ನೋಡಿಬಿಡೋಣ …

ಗೃಹಮಂತ್ರಿಗಳೇ … ಕ್ರೋನಾಲಜಿ ಹೀಗಿದೆ:

– ಮೊದಲನೆಯದಾಗಿ ಈ ಜಗತ್ತಿನ ಹತ್ತು ದೇಶಗಳ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿದ ಈ ತನಿಖಾ ವರದಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಜುಲೈ 18 ರಂದು ಬಿಡುಗಡೆಯಾಗಿದೆ.

ಮತ್ತು ಇದು ಭಾರತವನ್ನು ಒಳಗೊಂಡಂತೆ ಇತರ ಹತ್ತು ದೇಶಗಳ ಸರ್ಕಾರ ಗಳು ಪೆಗಾಸಸ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಂಡಿರಬಹುದು ಎಂಬ ವಿವರಗಳನ್ನು ಕೊಡುತ್ತದೆ. ಕೇವಲ ಭಾರತದ್ದಲ್ಲ...

ಈ ವರದಿಯ ಪ್ರಾಥಮಿಕ ಕಂತು ಸ್ಪಷ್ಟಪಡಿಸುತ್ತಿರುವಂತೆ ಪೆಗಾಸಸ್ ಬಳಿ ಜಗತ್ತಿನ 20 ಬೇರೆಬೇರೆ ದೇಶಗಳಲ್ಲಿ ವಾಸವಾಗಿರುವ 50,000 ಜನರ ಫೋನ್ ನಂಬರ್ಗಳು ಉದ್ದೇಶಿತ ಗೂಢಚರ್ಯೆ ಪಟ್ಟಿಯಲ್ಲಿತ್ತು.

ಇದನ್ನೂ ಓದಿ: ಗುಜರಾತ್‌ನ ಹೊಸ ಮತಾಂತರ ವಿರೋಧಿ ಕಾನೂನು; ಮೂರು ದಿನಗಳ ನಂತರ ಹೈಕೋರ್ಟ್‌ ವಿಚಾರಣೆ!

ಅದರಲ್ಲಿ 1000 ನಂಬರ್ ಗಳು ಭಾರತಕ್ಕೆ ಸೇರಿದ್ದವಾಗಿದ್ದರೆ 15,000ಮೆಕ್ಸಿಕೋ ಗೆ ಸೇರಿದ್ದವು. ಮೆಕ್ಸಿಕೋಗೆ ಸಂಬಂಧಪಟ್ಟ ವಿವರಗಳು ಸಹಾ ಜುಲೈ 18ರಂದೇ ಜಾಗತೀಕವಾಗಿ ಬಿಡುಗಡೆಯಾಗಿದೆ.

ಹಾಗೆಯೇ ಅಜರ್ಬೈಜಾನ್ ಬಹರೈನ್ , ಸೌದಿ ಅರೇಬಿಯಾ , ಹಂಗೇರಿ , ಮೆಕ್ಸಿಕೋ, ಇನ್ನಿತರ ಹತ್ತು ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಹೇಗೆ ತನ್ನ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ಈ ವರದಿ ಬಯಲು ಮಾಡಿದೆ.

ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ಸಂಸತ್ ಅಧಿವೇಶನ ಇರಲಿಲ್ಲ…ಜಗತ್ತು ಎಂದರೆ ಭಾರತವೇ ಅಲ್ಲ ಅಲ್ಲವೇ ಗೃಹ ಮಂತ್ರಿಗಳೇ..??

– ಇನ್ನು ಕೆಲವು ಅಸಲಿ ಕ್ರೋನಾಲಜಿಗಳು ಹೀಗಿವೆ.. :

– ಸೌದಿ ಅರೇಬಿಯಾದ ಸಾಮ್ರಾಟರಿಗೆ ತಲೆನೋವಾಗಿದ್ದ ಜಮಾಲ್ ಕಶೊಗಿ ಎಂಬ ಪತ್ರಕರ್ತನ ಪ್ರೇಯಸಿಯ ಫೋನಿನಲ್ಲಿ ಪೆಗಾಸಸ್ ಸ್ಪೈ ವೇರ್ ಕೂಡಿಸಿದ ನಾಲ್ಕೇ ದಿನಗಳಲ್ಲಿ ಕಶೋಗಿ ಟರ್ಕಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲಿ 2018ರ ಅಕ್ಟೊಬರ್ ನಲ್ಲಿ ಹೆಣವಾಗುತ್ತಾನೆ
..
ಇದು ಅಸಲಿ ಕ್ರೋನಾಲಜಿ

– ಮೆಕ್ಸಿಕೋದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಮೆಕ್ಸಿಕೋದ ಬೀದಿಯಲ್ಲಿ ಕೊಲೆಯಾಗಿದ್ದ . ಕಾರಣ ಆಡಳಿತಾರೂಢ ಸರ್ಕಾರಕ್ಕೂ ಡ್ರಗ್ ಮಾಫಿಯಾಗಳಿಗೂ ಇದ್ದ ಸಂಬಂಧಗಳ ಬಗ್ಗೆ ಆತ ಬರೆಯಲು ಶುರು ಮಾಡಿದ್ದ. ಮರು ವರ್ಷ ಚುನಾವಣೆಯಿತ್ತು. ಆತನು ಸಾಯುವ ಕೆಲವು ವಾರಗಳ ಮುನ್ನ ಆತನ ಫೋನಿನಲ್ಲಿ, ಹಾಗೂ ಆತನ ಆಪ್ತರ ಫೋನುಗಳಲ್ಲಿ ಪೆಗಾಸಸ್ ಸ್ಪೈ ವೇರ್ ಸ್ಥಾಪಿಸಲಾಗಿತ್ತು.

– ಭಾರತದಲ್ಲಿ…

– indian Express ನ ಸುಶಾಂತ್ ಸಿಂಗ್ ಅವರು 2017 ರಿಂದ ರಫೇಲ್ ಯುದ್ಧ ವಿಮಾನ ಹಗರಣದ ಬಗ್ಗೆ ತನಿಖಾ ಲೇಖನ ಬರೆಯಲು ಪ್ರಾರಂಭಿಸುತ್ತಾರೆ. 2018ರ ಪ್ರಾರಂಭದಿಂದಲೇ ಅವರ ಫೋನಿನಲ್ಲಿ ಪೆಗಾಸಸ್ ಪತ್ತೆಯಾಗಿದೆ.

– 2019ರ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸಾ ಅವರು ಮೋದಿಯವರ ಚುನಾವಣಾ ಭಾಷಣಗಳ ಬಗೆ ತೀವ್ರವಾದ ತಕರಾರು ಎತ್ತುತ್ತಾರೆ. ಅದರ ಮರುತಿಂಗಳಿಂದಲೇ ಅವರ ಹೆಸರು ಪೆಗಾಸಸ್ ನ ಸಂಭಾವ್ಯ ಗೂಢಚರ್ಯೆ ಪಟ್ಟಿ ಸೇರಿಕೊಳ್ಳುತ್ತದೆ.

– ಮೋದಿ ಕ್ಯಾಬಿನೆಟ್ಟಿನ ಹಾಲಿ ಮಂತ್ರಿ ಒರಿಸ್ಸಾದ ಅಷ್ವಿನಿ ವೈಷ್ಣವ್ ಅವರು ಅಧಿಕಾರಿಯಾಗಿದ್ದಾಗ ವಾಜಪೇಯಿಯವರ ಆಪ್ತ ಸಹಾಯಕನಾಗಿದ್ದರೂ ಬಿಜು ಜನತಾ ದಾಳಕ್ಕೆ ಆಪ್ತರಾಗಿದ್ದವರು. 2017ರಿಂದಲೇ ಅವರ ಫೋನ್ ನಂಬರ್ ಸಂಭಾವ್ಯ ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದಾದ ಮರುವರ್ಷದಲ್ಲೆ ಅವರು ಬಿಜೆಪಿ ಸೇರಿಕೊಳ್ಳುತ್ತಾರೆ.

-ಮಾಜಿ ಮುಖ್ಯ ನ್ಯಾಯಾಧೀಶ ಹಾಲಿ ಬಿಜೆಪಿ ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯ ರಂಜನ ಗೊಗೋಯ್ ಅವರು ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ ಮರು ವಾರದಿಂದಲೇ ಆಕೆಯ ಹಾಗೂ ಆಕೆಯ ಸಂಬಂಧಿಕರ ಹೆಸರುಗಳು ಪೆಗಾಸಸ್ ಪಟ್ಟಿ ಸೇರಿಕೊಳ್ಳುತ್ತದೆ.

ಆ ನಂತರ ಗೊಗೋಯ್ ಕೊಟ್ಟ ತೀರ್ಪು ಗಳೆಲ್ಲ ಮೋದಿ ಸರ್ಕಾರದ ಪರವೇ.

ಈ ಕ್ರೋನಾಲಜಿಯನ್ನು ಹೇಗೆ ಅರ್ಥಮಾಡಿಕೊಳ್ಳುವುದು ಅಮಿತ್ ಷಾ ಅವರೇ?????

– ಶಿವಸುಂದರ್

ಇದನ್ನೂ ಓದಿ: ಟೈಮ್ ಬಾಂಬ್‌ನ ಮೇಲಿದೆ ಮುಂಬೈ: ಭೂಕುಸಿತವನ್ನು ಎದುರಿಸುತ್ತಿವೆ ಮುಂಬೈನ 22,000 ಕೊಳಗೇರಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights