ಮಾಜಿ ಕಾಂಗ್ರೆಸ್‌ ನಾಯಕಿ ಬಿಜೆಪಿ ಸೇರಿದ್ದಕ್ಕೆ ವಿರೋಧ; ರಾಜೀನಾಮೆಗೆ ಮುಂದಾದ ಹಲವು ಬಿಜೆಪಿ ಕಾರ್ಯಕರ್ತರು!

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬತ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಆಡಳಿತಾರೂಢ ಬಿಜೆಪಿ, ಮಾಜಿ ಕಾಂಗ್ರೆಸ್ ಶಾಸಕಿ ಸುಲೋಚನ ರಾವತ್ ಮತ್ತು ಅವರ ಪುತ್ರ ವಿಶಾಲ್ ಅವರನ್ನು ಪಕ್ಷಕ್ಕೆ ಕರೆತಂದಿದೆ. ಇದು ಜಿಲ್ಲೆಯಲ್ಲಿ ಬಿಜೆಪಿಯೊಳಗೆ ಬಂಡಾಯವನ್ನು ಎದುರಿಸುತ್ತಿದೆ.

ತಾಯಿ-ಮಗ ಇಬ್ಬರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಕೆರಳಿರುವ ಜೋಬತ್‌ನ ಅನೇಕ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಜೋಬತ್‌ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುಲೋಚನ ಅಥವಾ ಆಕೆಯ ಮಗನನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗಿದೆ. ಅವರು ಕಣಕ್ಕಿಳಿದರೆ, ಬಿಜೆಪಿ ಇತರ ಇಬ್ಬರು ನಾಯಕರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ತಾಯಿ-ಮಗ ಬಿಜೆಪಿ ಸೇರಿರುವುದನ್ನು ಮಾಜಿ ಜೋಬತ್ ನಗರ ಪರಿಷತ್ ಅಧ್ಯಕ್ಷ ದೀಪಕ್ ಚೌಹಾಣ್ ಮತ್ತು ಪಕ್ಷದ ಯುವ ಘಟಕದ ಅಲಿರಾಜಪುರ ಜಿಲ್ಲಾ ಅಧ್ಯಕ್ಷ ಅಭಿಜಿತ್ ದಾವರ್ ವಿರೋಧಿಸಿದ್ದಾರೆ. ಪಕ್ಷವು ತಾಯಿ ಅಥವಾ ಮಗನಿಗೆ ಟಿಕೆಟ್ ನೀಡಿದರೆ ಬಂಡಾಯಗಾರರಾಗಿ ಉಪಚುನಾವಣೆಯಲ್ಲಿ ಹೋರಾಡುವುದಾಗಿ ಅವರು ಘೋಷಿಸಿದ್ದಾರೆ.

ಸೋಮವಾರ ಒಂಬತ್ತು ಸ್ಥಳೀಯ ಕಾರ್ಯಕಾರಿಗಳು ಪಕ್ಷದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾದಾಗ ಅವರೊಂದಿಗೆ ಸಂಸದ ಓಂ ಪ್ರಕಾಶ್ ಸಖ್ಲೆಚಾ ಅವರು ಚರ್ಚಿಸಿದ್ದಾರೆ. ಅವರು ತಾಯಿ-ಮಗನನ್ನು ಕಣಕ್ಕಿಳಿಸುವುದಾಗಿ ಪಕ್ಷ ನಿರ್ಧರಿಸಿದರೆ, ಅದನ್ನು ವಿರೋಧಿಸುವುದಾಗಿ ಭರವಸೆ ನೀಡಿದ್ದಾರೆ.

ತಾಯಿ-ಮಗನನ್ನು ವಿರೋಧಿಸುವವರಲ್ಲಿ ಹೆಚ್ಚಿನವರು ಮಾಜಿ ಬಿಜೆಪಿ ಶಾಸಕ ಮಾಧೋಸಿಂಗ್ ದಾವರ್ ಅವರ ಬೆಂಬಲಿಗರು ಎಂದು ಹೇಳಲಾಗಿದೆ. ದಾವರ್ ಅವರು ಇತ್ತೀಚಿನವರೆಗೂ ಚುನಾವಣಾ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದರು. ಬುಡಕಟ್ಟು ಮೀಸಲು ಕ್ಷೇತ್ರವಾಗಿರುವ ಜೋಬತ್‌ನಲ್ಲಿ ಇದೂವರೆಗೂ ಕಾಂಗ್ರೆಸ್ 11 ಬಾರಿ ಗೆದ್ದಿದೆ. ಅದರಲ್ಲಿ ಸುಲೋಚನಾ ರಾವತ್ ಅವರ ಕುಟುಂಬ ಒಂಬತ್ತು ಬಾರಿ ಗೆದ್ದಿದೆ.

ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಪಕ್ಷದ ಅಲಿರಾಜಪುರ ಜಿಲ್ಲಾ ಅಧ್ಯಕ್ಷ ಮಹೇಶ್ ಪಟೇಲ್ ಅವರನ್ನು ಕಣಕ್ಕಿಳಿಸಲಾಗಿದೆ

ಇದನ್ನೂ ಓದಿ: YSR ಕಾಂಗ್ರೆಸ್‌ v/s ಯಾರು? ಕುತೂಹಲಕಾರಿ ತಿರುವು ಪಡೆಯುತ್ತಿದೆ ಬದ್ವೇಲ್ ಉಪಚುನಾವಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights