ಹೋಂ ಕ್ವಾರಂಟೈನ್‌ನಲ್ಲಿದ್ದ ಕೊರೊನಾ ಸೋಂಕಿತ ಹಸಿವಿನಿಂದ ಸಾವು!

ಹೋಮ್ ಕ್ವಾರಂಟೈನ್‌ನಲ್ಲಿದ್ದ ಕೊರೊನಾ ಸೋಂಕಿತರೊಬ್ಬರು ಆಹಾರ ಸಿಗದೆ ಹಸಿವಿನಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಟಿ ಬೆಳಗಲ್ಲು ಗ್ರಾಮದ ಕೊರೊನಾ ಸೋಂಕಿತ ವೃದ್ಧ ವ್ಯಕ್ತಿಯೊಬ್ಬರು ಮನೆಯಲ್ಲೇ ಪ್ರತ್ಯೇಕವಾಗಿದ್ದ ಕ್ವಾರಂಟೈನ್‌ಗೆ ಒಳಗಾಗಿದ್ದು, ಅವರಿಗೆ ಆಹಾರ ಹಾಗೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಳ್ಳಾರಿ ಜಿಲ್ಲಾಡಳಿತ ಆದೇಶ ನೀಡಿದೆ.

ವೃದ್ಧ ವ್ಯಕ್ತಿಗೆ ಸೋಂಕು ತಗುಲಿರುವ ವಿಚಾರ ತಿಳಿದು ಆತನನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಿ, ಆತನ ಕುಟುಂಬಸ್ಥರು  ಪ್ರತ್ಯೇಕವಾಗಿ ಹೋಗಿದ್ದರು. ಮನೆಯಲ್ಲೇ ಇದ್ದ ಸೋಂಕಿತ ವೃದ್ಧ ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ, ಸಹಾಯವಾಣಿಯಿಂದ ಯಾವುದೇ ನೆರವು ಸಿಕಿಲ್ಲ. ಹಾಗಾಗಿ, ಆಹಾರವೂ ಸಿಗದೇ, ಸೂಕ್ತ ಚಿಕಿತ್ಸೆ ಸಿಗದೇ ವೃದ್ಧ ಮನೆಯಲ್ಲೇ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಂಕಿತ ವೃದ್ಧ ಊಟಕ್ಕಾಗಿ ಕಿರುಚಾಡುತ್ತಿದ್ದ, ಕಳೆದ 2 ದಿನಗಳಿಂದ ದಾರಿಹೋಕರನ್ನು ಕೂಗಿ ಅನ್ನ ನೀಡುವಂತೆ ಗೋಗರೆಯುತ್ತಿದ್ದ. ಒಮ್ಮೆ ಮಾತ್ರ ಆತನಿಗೆ ಸ್ಥಳೀಯರು ಊಟ ನೀಡಿದ್ದರು. ಆದರೆ, ಅತನಿಗೆ ಸೋಂಕು ಇದ್ದುದ್ದರಿಂದಾಗಿ ಆತನ ಬಳಿ ಹೋಗಲು ಜನರು ಹಿಂದೇಟು ಹಾಕಿದ್ದರು. ಬಳಿಕ ಸೋಂಕಿತ ವ್ಯಕ್ತಿ ಹಸಿವಿನಿಂದ ಸಾವನ್ನಪ್ಪಿದ್ದಾನೆಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ವೃದ್ಧ ಸೋಂಕಿತ ವ್ಯಕ್ತಿ ಆಗಸ್ಟ್ 15ರಂದು ಕೊರೋನಾ ಸೋಂಕಿಗೆ ತುತ್ತಾಗಿದ್ದ. ಆದರೆ ಆಸ್ಪತ್ರೆಗೆ ತೆರಳದೇ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದ. ಆದರೆ, ಆತನ ಕುಟುಂಬಸ್ಥರು ತಮಗೂ ಸೋಂಕು ಅಂಟುವ ಭೀತಿಯಿಂದ ಆತನಿಂದ ಪ್ರತ್ಯೇಕವಾಗಿ ದೂರದ ಪ್ರದೇಶಕ್ಕೆ ತೆರಳಿದ್ದರು.

ಆಹಾರ, ಚಿಕಿತ್ಸೆ ಸಿಗದೆ ಮತ್ತಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದ ವೃದ್ಧ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದು, ಆಶಾ ಕಾರ್ಯ ಕರ್ತೆಯನ್ನೂ ತನಿಖೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.


Read Also: ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಲು RSS ನಾಯಕರು ಹವಣಿಸುತ್ತಿದ್ದಾರೆ: ಸಿದ್ದರಾಮಯ್ಯ


Read Also: PM Cares ನಿಧಿಯಿಂದ NDRFಗೆ ಹಣ ವರ್ಗಾವಣೆ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights