ರೈಲು ಪ್ರಯಾಣಿಕರಿಗೆ ಆಫರ್: IRCTCಯ ಆ್ಯಪ್ ಬಳಿಸಿ ಶಾಪಿಂಗ್ ಮಾಡಿದ್ರೆ 2,000 ಕ್ಯಾಶ್‌ಬ್ಯಾಕ್‌!

ರೈಲು ಟಿಕೆಟ್‌ ಬುಕ್‌ ಮಾಡಿಕೊಳ್ಳುವುದಕ್ಕಾಗಿ IRCTC ಆ್ಯಪ್ ಬಳಸುತ್ತಿದ್ದ ರೈಲು ಪ್ರಯಾಣಿಕರಿಗೆ ವಿಶೇಷ ಆಫರ್‌ ನೀಡಿದೆ. IRCTCಯ ಹೊಸ ಆ್ಯಪ್ IRCTC Imudra ಆ್ಯಪ್ ಬಳಸಿ 5,000ದ ವರೆಗೆ ಶಾಪಿಂಗ್‌ ಮಾಡುವವರಿಗೆ 2,000 ರೂ ಕ್ಯಾಶ್‌ಬ್ಯಾಕ್‌ ನೀಡುವ ಆಫರ್‌ ಪ್ರಕಟಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ IRCTC Imudra, ಇನ್ನಷ್ಟು ಆಫರ್‌ ಪಡೆಯಲು ಹೆಚ್ಚು ಖರ್ಚು ಮಾಡಿ! ಐಆರ್‌ಸಿಟಿಸಿ ಐಮುದ್ರಾ ವ್ಯಾಲೆಟ್ ಬಳಸಿ ಎಲ್ಲಿಯಾದರೂ ರೂ .5000 ಕ್ಕಿಂತ ಹೆಚ್ಚು ಖರ್ಚಿನ ಶಾಪಿಂಗ್‌ ಮಾಡಿ, ರೂ .2000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ. ಆಫರ್ ಫೆಬ್ರವರಿ 28 ರವರೆಗೆ ಲಭ್ಯವಿರುತ್ತದೆ. ಈಗಲೇ ಈಗ ಶಾಪಿಂಗ್ ಮಾಡಿ! ಎಂದು ಪೋಸ್ಟ್‌ ಮಾಡಿದೆ.

IRCTC Imudra ಅಪ್ಲಿಕೇಷನ್ ನಲ್ಲಿ ವೀಸಾ ಕಾರ್ಡ್ ಅಥವಾ ರುಪೇ ಕಾರ್ಡ್‌ ಬಳಸಿ 5,000 ರೂ ಕ್ಕಿಂತ ಹೆಚ್ಚು ಖರ್ಚು ಮಾಡಿ ಖರೀದಿ ಮಾಡಿದ್ರೆ 2000 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್‌ ಸಿಗಲಿದೆ.

IRCTC ಐಮುದ್ರಾವನ್ನು ಫೆಡರರ್ ಬ್ಯಾಂಕ್ ಜೊತೆ ಸೇರಿ ಶುರು ಮಾಡಿದೆ. ಇದನ್ನು ಪೇಟಿಎಂ ರೀತಿಯಲ್ಲಿ ಬಳಸಲಾವುದು. ಮೊದಲು ಐಮುದ್ರಾಕ್ಕೆ ಹಭ ಹಾಕಬೇಕು. ನಂತರ ಶಾಪಿಂಗ್ ಮಾಡಬಹುದು. ಅಲ್ಲದೆ, ಎಟಿಎಂ ರೀತಿಯ ಕಾರ್ಡ್‌ ಕೂಡ ಸಿಗಲಿದ್ದು, ಅದರ ಮೂಲಕವೂ ಖರೀದಿ ಮಾಡಬಹುದು.

ಇದರಲ್ಲಿ ರೈಲು, ವಿಮಾನ, ಬಸ್ ಟಿಕೆಟ್ ಕಾಯ್ದಿರಿಸುವುದೂ ಸೇರಿದಂತೆ ಅಗತ್ಯ ವಸ್ತುಗಳ ಶಾಪಿಂಗ್ ಮಾಡುವುದಕ್ಕೂ ಅವಕಾಶವಿದೆ.

ಇದನ್ನೂ ಓದಿ: ಸಿನಿಮಾ ವಿಮರ್ಶೆ: ಪಬ್ಲಿಕ್‌ ಟಾಯ್ಲೆಟ್‌; ಸಿನೆಮಾ‌ ಕೊಳೆಯನ್ನು ತೊಳೆಯಬಲ್ಲದೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights