ಸರ್ಕಾರಕ್ಕೆ ಅಕ್ಟೋಬರ್‌ 2ರ ವರೆಗೆ ಗಡುವು: ಕೃಷಿ ಕಾಯ್ದೆಗಳು ರದ್ದಾಗದಿದ್ದರೆ ತೀವ್ರ ಹೋರಾಟ: ರಾಕೇಶ್‌ ಟಿಕಾಯತ್‌

ರೈತರ ಹೋರಾಟವು ಅಕ್ಟೋಬರ್‌ 02ರ ವರೆಗೂ ನಡೆಯಲಿದೆ. ಆ ವೇಳೆಯೊಳಗೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಬಗ್ಗೆ ಯೋಚಿಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಇಂದು ಹೇಳಿದ್ದಾರೆ.

ದೇಶಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ತಡೆಯೊಡ್ಡುವ ಪ್ರತಿಭಟನೆ ನಡೆಸಿ, ಗಾಝಿಪುರ್ ಗಡಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳು ರದ್ದಾಗುವವರೆಗೂ ರೈತರು ಮನೆಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ.

“ಪ್ರತಿಭಟನೆ ಅಕ್ಟೋಬರ್ 2ರ ತನಕ ನಡೆಯಲಿದೆ ಹಾಗೂ ಕೇಂದ್ರಕ್ಕೆ ತನ್ನ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಅಲ್ಲಿಯ ತನಕ ಸಮಯವಿದೆ, ಆದರೆ ಬೇಡಿಕೆ ಈಡೇರದೇ ಇದ್ದರೆ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವ ಕುರಿತು ಯೋಚಿಸಲಾಗುವುದು” ಎಂದು ಅವರು ಹೇಳಿದರು.

“ಸರ್ಕಾರದ ಜತೆ ಒತ್ತಡದ ವಾತಾವರಣದಲ್ಲಿ ನಾವು ಚರ್ಚೆಗಳನ್ನು ನಡೆಸುವುದಿಲ್ಲ” ಎಂದೂ ಅವರು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ: ನಟಿ ತಾಪ್ಸಿ ವಿರುದ್ಧ ವೈಯಕ್ತಿಕವಾಗಿ ನಿಂದಿಸಿದ ಸಂಸದ ಪ್ರತಾಪ್ ಸಿಂಹ; ನಿಮಗೆ ನಾಚಿಕೆಯಾಗಬೇಕು ಎಂದ ನೆಟ್ಟಿಗರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights