ನೊಟೀಸ್‌: ರೈಲ್ವೇ ಟಿಕೆಟ್ ಬುಕಿಂಗ್ ಮತ್ತು ರದ್ದತಿ ಸೇವೆ 7 ದಿನಗಳ ಕಾಲ 6 ಗಂಟೆ ಸ್ಥಗಿತ!

ಹೊಸ ರೈಲು ಸಂಖ್ಯೆ ಹಾಗೂ ಸಂಬಂಧಿತ ಇತರೆ ಮಾಹಿತಿಯ ಡೇಟಾವನ್ನು ನವೀಕರಣ ಮಾಡಲು ಭಾರತೀಯ ರೈಲ್ವೇಯು  ಮುಂದಾಗಿದೆ. ಹೀಗಾಗಿ, ಇಂದಿನಿಂದ (ಸೋಮವಾರ) ಏಳು ದಿನಗಳ ವರೆಗೆ ಪ್ರತಿದಿನ ಆರು ಗಂಟೆಗಳ ಕಾಲ ರೈಲ್ವೇ ಟಿಕೆಟ್‌ ಬುಕಿಂಗ್‌ ಮತ್ತು ರದ್ದತಿ ಸೇವೆ ಸ್ಥಗತಿವಾಗಲಿದೆ.

ಕೊರೊನಾ ಸೋಂಕು ಆಕ್ರಮಿಸಿದ್ದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸುವುದಕ್ಕಾಗಿ ಹಲವು ರೈಲ್ವೇಯ ಹಲವು ರೀತಿಯ ಮಾರ್ಪಾಡುಗಳನ್ನು ಮಾಡಿತ್ತು. ಇದೀಗ ರೈಲ್ವೇ ಬುಕಿಂಗ್‌ ಮತ್ತು ರದ್ದತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಹಂತಹಂತವಾಗಿ ತರಲು ರೈಲ್ವೇ ಮುಂದಾಗಿದೆ. ಹೀಗಾಗಿ, ನವೆಂಬರ್‌ 14-15 ಮಧ್ಯರಾತ್ರಿಯಿಂದ ನವೆಂಬರ್‌ 20-21 ರ ಮಧ್ಯರಾತ್ರಿಯವರೆಗೆ ಒಟ್ಟು ಏಳು ದಿನಗಳ ಕಾಲ ರಾತ್ರಿ 23:30 ಗಂಟೆಯಿಂದ ಮುಂಜಾನೆ 05:30 ಗಂಟೆವರೆಗೆ ಸೇವೆ ಸ್ಥಗಿತವಾಗಲಿದೆ.

ಈ ಸಂದರ್ಭದಲ್ಲಿ ಸಿಸ್ಟಮ್‌ ಡೇಟಾದ ನವೀಕರಣ ಮಾಡಲಾಗುತ್ತದೆ. ಹಾಗೆಯೇ ಹೊಸ ರೈಲು ಸಂಖ್ಯೆಗಳ ನವೀಕರಣ ಇತ್ಯಾದಿ ಅಪ್‌ಗ್ರೇಡ್‌ ಕಾರ್ಯವನ್ನು ಮಾಡಲಾಗುತ್ತದೆ. ಈ ವೇಳೆ, ಜನರು ರೈಲು ಟಿಕೆಟ್‌ಗಳನ್ನು ಬುಕ್‌ ಮಾಡಲು ಅಥವಾ ರದ್ದು ಮಾಡಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಜನರು ಯಾವ ಸಂದರ್ಭದಲ್ಲಿ ಹೆಚ್ಚಾಗಿ ರೈಲ್ವೇ ಬುಕಿಂಗ್ ಮತ್ತು ರದ್ದತಿಯ ಸೇವೆಯನ್ನು ಬಳಸುವುದಿಲ್ಲ ಎಂದು ಗಮನಿಸಿ, ಆ ಸಮಯದಲ್ಲಿ ಸೇವೆಯನ್ನು ಸ್ಥಗಿತ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಂಡು ಎಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಉಂಟಾಗದಂತೆ ರಾತ್ರಿ ಹೊತ್ತಿನಲ್ಲಿ ಸೇವೆ ಸ್ಥಗಿತ ಮಾಡಲಾಗಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದ್ದಾರೆ.

ರೈಲ್ವೆ ಸಿಬ್ಬಂದಿಗಳು ಈ ಅವಧಿಯಲ್ಲಿ ಹೊರಡುವ ರೈಲುಗಳ ಚಾರ್ಟ್‌ಅನ್ನು ಮೊದಲೇ ಸಿದ್ದಪಡಿಸುತ್ತಾರೆ. ಪಿಆರ್‌ಎಸ್‌ ಸೇವೆಗಳನ್ನು ಹೊರತುಪಡಿಸಿ, 139 ಸೇವೆಗಳು ಸೇರಿದಂತೆ ಎಲ್ಲಾ ಇತರ ವಿಚಾರಣೆ ಸೇವೆಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಪ್ರಯಾಣಿಕರ ಸೇವೆಗಳನ್ನು ಸಾಮಾನ್ಯಗೊಳಿಸಲು ಮತ್ತು ಮೇಲ್ದರ್ಜೆಗೇರಿಸುವ ಈ ಪ್ರಯತ್ನದಲ್ಲಿ ಸಚಿವಾಲಯಕ್ಕೆ ಜನರು ಬೆಂಬಲ ನೀಡಬೇಕು ಎಂದು ಸಚಿವಾಲಯ ವಿನಂತಿ ಮಾಡಿದೆ.

ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಭಾರತೀಯ ರೈಲ್ವೆ ಆರಂಭಿಸಿದ್ದ ಕೆಲವು ವಿಶೇಷ ರೈಲುಗಳಲ್ಲಿ ಇನ್ನು ಮುಂದೆ ವಿಶೇಷ ಹಣೆಪಟ್ಟಿ ಇರುವುದಿಲ್ಲ. ರೈಲು ಪ್ರಯಾಣ ದರವು ಕೊರೊನಾ ವೈರಸ್‌ ಸೋಂಕಿಗೂ ಮುನ್ನವಿದ್ದಷ್ಟೇ ಇರಲಿದೆ ಎಂದು ಸಚಿವಾಲಯ ಹೇಳಿದೆ.

ವಿಶೇಷ ರೈಲಿನಲ್ಲಿ ಪ್ರಯಾಣಿಕರು ಸಾಮಾನ್ಯ ರೈಲುಗಳಿಗಿಂತ 30% ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತಿತ್ತು. ಈಗ ಈ ವಿಶೇಷ ಎಂಬ ಟ್ಯಾಗ್‌ ಅನ್ನು ತೆಗೆಯಲಾಗುತ್ತಿದ್ದು, ಪ್ರಯಾಣಿಕರ ಪ್ರಯಾಣದರವು ಕೊರೊನಾ ಸೋಂಕಿಗೂ ಮೊದಲಿದ್ದ ಸಾಮಾನ್ಯ ದರವೇ ಜಾರಿಗೆ ಬರಲಿದೆ.

ಇದನ್ನೂ ಓದಿ: IRCTC ರೈಲ್ವೇ ಟಿಕೆಟ್‌ ಬುಕ್ ಮಾಡಲು ಹೊಸ ನಿಯಮಗಳು ಜಾರಿ; ಮಾಹಿತಿ ಇಲ್ಲಿದೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights