ಬಿಜೆಪಿ ವಿರುದ್ಧ #NoMoreBJP ಟ್ರೆಂಡಿಂಗ್‌! ಕಾರಣವೇನು ಗೊತ್ತೇ?

ಭಾರತೀಯ ಯುವಜನರು ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆ. ಲಾಕ್‌ಡೌನ್‌ ನಂತರದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟ್ವಿಟ್ಟರ್‌ನಲ್ಲಿ ಭಾರಿ ಪ್ರಮಾಣದಲ್ಲಿ ಟೀಕೆಗಳು ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ಪ್ರಧಾನಿಮೋದಿಯವರ ಆಗಸ್ಟ್‌ ತಿಂಗಳಿನ ಮನ್‌ ಕಿ ಬಾತ್‌ ವಿರುದ್ಧ ಡಿಸ್‌ಲೈಕ್‌ ಅಭಿಯಾನವನ್ನೇ ಆರಂಭಿಸಿದ್ದರು. ಅದು ಮುಂದುವರೆಯುತ್ತಲೇ ಇದೆ. ಜೊತೆಗೆ ಇಂದು ಟ್ವೀಟ್ಟರ್‌ನಲ್ಲಿ #NoMoreBJP, #unemploymentday ಭಾರಿ ಟ್ರೇಂಡಿಂಗ್‌ ನಲ್ಲಿದೆ. ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಆಡಳಿತದ ನ್ಯೂನತೆಗಳನ್ನು ಟ್ವೀಟ್ಟಿಗರು ಪೋಸ್ಟ್‌ ಮಾಡುತ್ತಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು ಯುವ ಸಮೂಹ ಬೀದಿಗೆ ಬಂದಿದೆ ಆದರೂ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಬೇಡದ ವಿಚಾರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಬೆಳಗ್ಗೆಯಿಂದಲೇ ’#NoMoreBJP’ ಟ್ರೇಂಡಿಂಗ್‌ ನಲ್ಲಿದ್ದು, ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಪೋಸ್ಟರ್‌ಗಳು, ಪತ್ರಿಕೆಗಳ ಕಟಿಂಗ್ಸ್‌ಗಳು, ಉದ್ಯೋಗ ನೀಡಿ ಎಂಬ ಮೀಮ್ಸ್‌ಗಳನ್ನು ಹಂಚಿಲಾಗುತ್ತಿದೆ.

ಇದನ್ನೂ ಓದಿ: ಮೋದಿಯನ್ನು ಯೂಟ್ಯೂನ್‌ನಲ್ಲಿ ತಿಸ್ಕರಿಸುತ್ತಿರುವ ಯುವಜನರು: #StudentsDislikePMModi ಟ್ರೆಂಡಿಂಗ್‌

ಇದರ ಜೊತೆಗೆ ಬದಲಾವಣೆ ಒಳ್ಳೆಯ ದಿನಗಳನ್ನು ತರುತ್ತದೆ. ನಾವು ಈ ಸರ್ಕಾರವನ್ನೂ ಬದಲಿಸಬೇಕಿದೆ ಎಂಬ ಟ್ವೀಟ್‌ಗಳು ಹರಿದಾಡುತ್ತಿವೆ. ನಿಮ್ಮ ಸುಳ್ಳು ಭರಸವೆಗಳು ಬೇಡ, ನಮಗೆ ಉದ್ಯೋಗ ಬೇಕು. ನಿಮ್ಮ ಹುಟ್ಟುಹಬ್ಬದ ದಿನ ನಿರುದ್ಯೋಗ ದಿನ ಆಚರಿಸುತ್ತವೆ ಎಂದು ಟ್ವೀಟ್ ಮಾಡಲಾಗುತ್ತಿದೆ.

ಇದೇ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಆ ದಿನವನ್ನು “ನಿರುದ್ಯೋಗ ದಿನ”ವನ್ನಾಗಿ ಆಚರಿಸಲು ಕರೆ ನೀಡಲಾಗುತ್ತಿದೆ. ಈ ವಾರ ಮೋದಿಯವರ ಹುಟ್ಟುಹಬ್ಬವಿರುವುದರಿಂದ ದೇಶದ ಎಲ್ಲಾ ನಿರುದ್ಯೋಗಿ ಯುವಜನತೆ #unemploymentday ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ “ನಿರುದ್ಯೋಗ ದಿನ” ವನ್ನು ಆಚರಿಸಬೇಕು ಎಂಬ ಟ್ವೀಟ್‌ಗಳು ಕಾಣಿಸುತ್ತಿವೆ.

#NoMoreBJP ಜೊತೆಗೆ #बेरोजगार_सप्ताह, #unemploymentday ಹ್ಯಾಶ್‌ಟ್ಯಾಗ್‌ಗಳು ಇಂದು ಟ್ರೆಂಡ್ ಆಗುತ್ತಲೇ ಇವೆ. ಸೆ.17ರಂದು ನಿರುದ್ಯೋಗ ದಿವಸ ಮಾಡಲು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಹರಿಬಿಡಲಾಗಿದೆ.

ಜಿಡಿಪಿ ಕುಸಿತ, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಕೊರೊನಾ ನಡುವೆ ನಡೆದ ಜೆಇಇ, ನೀಟ್ ಪ್ರವೇಶ ಪರೀಕ್ಷೆಗಳು,ವಿದ್ಯಾರ್ಥಿಗಳ ಆತ್ಮಹತ್ಯೆಗಳು, ರೈತರ ಆತ್ಮಹತ್ಯೆ, ಪ್ರವಾಹ ಪೀಡಿತ ರಾಜ್ಯಗಳಿಗೆ ಪರಿಹಾರ ನಿಡದಿರುವುದು, ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲು ನೀಡದಿರುವುದು ಮೋದಿ ಸರ್ಕಾರದ ವಿರುದ್ಧ ಯುವ ಸಮೂಹ ಸಿಡಿದೆಳಲು ಕಾರಣವಾಗಿದೆ.

ಇವುಗಳ ಜೊತೆಗೆ ಪ್ರಧಾನಿ ಒಂದು ಬಾರಿಯೂ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಯುವಕರಿಗಾಗಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಬಂದ ಸರ್ಕಾರ ಅದರ ಬದಲಾಗಿ ವಿದ್ಯಾರ್ಥಿಗಳಿಗೆ ಪಕೋಡ ಮಾರಿ, ಚಹಾ ಮಾರಿ ಎಂಬ ಮಾತುಗಳನ್ನು ವಿರೋಧಿಸಿ ಯುವಕರು ತಮ್ಮ ಆಕ್ರೋಶವೆಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಹೊರಹಾಕುತ್ತಿದ್ದಾರೆ.


ಇದನ್ನೂ ಓದಿ: ಹಿಂದಿ ಥೆರಿಯತು ಪೊಡಾ: ಹಿಂದಿ ಹೇರಿಕೆಯ ವಿರುದ್ಧ ಟೀ-ಶರ್ಟ್‌ ಟ್ರೆಂಡಿಂಗ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights