ಡ್ರಗ್ ಪೆಡ್ಲಿಂಗ್ : ಬಹುಭಾಷಾ ನಟ ನೈಜೀರಿಯನ್ ಪ್ರಜೆಯ ಬಂಧನ..!

ಡ್ರಗ್ ಪೆಡ್ಲಿಂಗ್ ಮಾಡಿದ ಆರೋಪದ ಮೇಲೆ ಹಲವು ಭಾಷೆಯಲ್ಲಿ ನಟಿಸಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ.

ಕನ್ನಡ ,ಹಿಂದಿ, ತಮಿಳು ಸೇರಿ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದ ಚಕ್ವಿಮ್ ಮಾಲ್ವಿನ್ ನನ್ನು ಬಂಧಿಸಲಾಗಿದೆ. ಮೆಡಿಕಲ್ ವೀಸಾದಲ್ಲಿ ಬಂದು ಮುಂಬೈನ ನ್ಯೂಯಾರ್ಕ್ ಫಿಲ್ಮ್ ಅಕಾಡಮಿಯಲ್ಲಿ ನಟನೆಯ ತರಬೇತಿ ಪಡೆದಿದ್ದ ಆರೋಪಿ ಚಕ್ವಿಮ್ ಮಾಲ್ವಿನ್ ನೈಜೀರಿಯಾದ (NOLLYWOOD) 3 ಚಿತ್ರಗಳಲ್ಲಿ‌ ನಟಿಸಿದ್ದನು.

ಬ್ಯೂಸಿನೆಸ್ ಮಾಡುವ ವ್ಯಕ್ತಿಗಳಿಗೆ ,ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡ್ತಿದ್ದ ಚಕ್ವಿಮ್ ಮಾಲ್ವಿನ್ ಡ್ರಗ್ ಪೆಡ್ಲರ್ ಕಂ ಬಹುಭಾಷೆಯಲ್ಲಿ ನಟಿಸಿದ್ದಾನೆ.

ಮಾತ್ರವಲ್ಲದೆ ಕನ್ನಡದ ಅಣ್ಣಾಬಾಂಡ್ ,ಪರಮಾತ್ಮ ,ತಮಿಳಿನ ಸಿಂಗಂ, ವಿಶ್ವರೂಪಂ ಸೇರಿ 20 ಚಿತ್ರಗಳಲ್ಲಿ ಸಹನಟನಾಗಿ ನಟಿಸಿದ್ದಾನೆ. ಆರೋಪಿಯಿಂದ 8 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್,‌ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಕ್ವಿಮ್ ಮಾಲ್ವಿನ್ ನ ವಿಚಾರಣೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights