ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ ವಿರುದ್ಧ ತನಿಖೆಗೆ ಸರ್ಕಾರ ಆದೇಶ!

ನೆಟ್‌ಫ್ಲಿಕ್ಸ್‌ ಓಟಿಟಿ ಪ್ಲಾಟ್‌ಫಾಂನಲ್ಲಿ ಪ್ರಸಾರವಾಗುತ್ತಿರುವ ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ದೇವಾಲಯದಲ್ಲಿ ಚುಂಬನ ದೃಶ್ಯವನ್ನು ಶೂಟ್‌ ಮಾಡಲಾಗಿದೆ. ಹಾಗಾಗಿ ನಿನ್ನೆ ಬಿಜೆಪಿ ಮತ್ತು ಸಂಘಪರಿವಾರದ ಭಕ್ತರು ಬಾಯ್‌ಕಾಟ್‌ ನೆಟ್‌ಫ್ಲಿಕ್ಸ್‌ ಎಂದು ಕ್ಯಾಂಪೇನ್‌ ಮಾಡಿದ್ದರು. ಇದೀಗ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ದೇವಾಲಯದಲ್ಲಿ ಚುಂಬನ ದೃಶ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶ ನೀಡಿದೆ.

ವೆಬ್ ಸೀರೀಸ್ ನಲ್ಲಿರುವ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆಯೇ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ವೆಬ್ ಸೀರೀಸ್ ನ ವಿರುದ್ಧ ಕಾನೂನು ಕ್ರಮ ಜರುಗಿಸುವ ಮುನ್ಸೂಚನೆಯನ್ನೂ ಸಹ ನರೋತ್ತಮ್ ಮಿಶ್ರಾ ನೀಡಿದ್ದಾರೆ.

ವೆಬ್ ಸೀರೀಸ್ ನಲ್ಲಿ ಪ್ರಕಟವಾಗಿರುವ ಚುಂಬನ ದೃಶ್ಯವನ್ನು ಮಧ್ಯಪ್ರದೇಶದ ಮಹೇಶ್ವರ್ ಟೌನ್ ನ ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಬಿಜೆಪಿ ಯುವಮೋರ್ಚಾದ ಪದಾಧಿಕಾರಿಗಳು ಆರೋಪಿಸಿದ್ದರು. ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ದೇವಾಲಯದಲ್ಲಿ ಭಜನೆಗಳ ನಡುವೆಯೇ ಜೋಡಿಯೊಂದು ಚುಂಬಿಸುತ್ತಿದ್ದ ದೃಶ್ಯ ಪ್ರಸಾರವಾಗಿತ್ತು.

ಭಕ್ತರ ಬಾಯ್‌ಕಾಟ್‌ ನೆಟ್‌ಫ್ಲಿಕ್ಸ್‌ ಅಭಿಯಾನದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅದೇ ದೇವಸ್ಥಾನಗಳಲ್ಲಿ ನಗ್ನ, ಅಶ್ಲೀಲ ಶಿಲ್ಪಗಳನ್ನು ಕೆತ್ತಲಾಗಿದೆ. ಹಾಗಾಗಿ ಬಾಯ್‌ಕಾಟ್‌ ದೇವಸ್ಥಾನ ಎಂದೂ ಕ್ಯಾಂಪೇನ್‌ ಮಾಡಿ ಎಂದು ಟೀಕೆಗಳು ವ್ಯಕ್ತವಾಗಿವೆ.


ಇದನ್ನೂ ಓದಿ: ಯಡಿಯೂರಪ್ಪನವರ ಕಾರಣದಿಂದಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ: ರೇಣುಕಾಚಾರ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights