ಪ್ರವಾಹ ಪರಿಹಾರಕ್ಕೆ ಅಗತ್ಯ ನೆರವು ದೊರೆಯದೇ ಇರುವುದಕ್ಕೆ ಯುಪಿಎ ಸರ್ಕಾರದ ನೀತಿಗಳೇ ಕಾರಣ: ಆರ್ ಅಶೋಕ್

ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯವಿರುವಷ್ಟು ಪರಿಹಾರ ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ಮನಮೋಹನ್ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ರೂಪಿಸಿದ್ದ ಎನ್‌ಡಿಆರ್‌ಎಫ್‌ ನೀತಿಗಳೇ ಕಾರಣ. ಆ ನೀತಿಗಳಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್‌ ಹೇಳಿದ್ದಾರೆ.

ರಾಜ್ಯ ಸರ್ಕಾರ ಪ್ರವಾಹದಿಂದ ಸಂಭವಿಸಿದ ಬೆಳೆ ಹಾನಿ, ಆಸ್ತಿ ಹಾನಿ ಸೇರಿದಂತೆ ಇತರೆ ನಷ್ಟಕ್ಕೆ ಪರಿಹಾರ ಪಡೆಯುವಲ್ಲಿ ಮನಮೋಹನ್ ಸಿಂಗ್ ಸರ್ಕಾರ ರೂಪಿಸಿದ ನೀತಿಗಳು ತೊಡಕಾಗಿವೆ. ಕಳೆದ ವರ್ಷದ ಪ್ರವಾಹ ನಷ್ಟದ 35 ಸಾವಿರ ಕೋಟಿ  ರೂ. ನೆರವಿನೆ ಪ್ರಸ್ತಾವನೆಯಲ್ಲಿ
ಕೇವಲ 1 ಸಾವಿರ ರೂ. ಕೋಟಿ ರೂ. ಮಾತ್ರ ಬಂದಿದ್ದು, ಇದಕ್ಕೆ ಹಿಂದಿನ ಸರ್ಕಾರದ ನೀತಿಗಳೇ ಕಾರಣ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಅತಿವೃಷ್ಠಿ ಹಾನಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ಕಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಅಧ್ಯಯನ ತಂಡ ಆಗಮಿಸಿದ ಸಂದರ್ಭದಲ್ಲಿ ಅಗತ್ಯ ಛಾಯಾಚಿತ್ರಗಳು, ವಿಡಿಯೋಗಳನ್ನು ಸಂಗ್ರಹಿಸಿಕೊಂಡು, ಸೂಕ್ತ ದಾಖಲೆ ನೀಡುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.

ಈ ವರ್ಷ ಪ್ರವಾಹದಿಂದ 4500 ಕೋಟಿ ರು ನಷ್ಟವಾಗಿದ್ದು, 4 ಸಾವಿರ ಕೋಟಿ ರು ನೀಡುವಂತೆ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಶೀಘ್ರವೇ ಕೇಂದ್ರ ಹಣಕಾಸಿನ ನೆರವು ನೀಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು ಕೇಂದ್ರ ಸರ್ಕಾರ ಈಗಾಗಲೇ 395 ಕೋಟಿ ರು ಹಣವನ್ನು ರಾಜ್ಯಕ್ಕೆ ನೀಡಿದೆ ಎಂದರು.


Read Also: ಬಿವೈ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರಿಂದಲೇ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಪ್ರವಾಹ ಪರಿಹಾರಕ್ಕೆ ಅಗತ್ಯ ನೆರವು ದೊರೆಯದೇ ಇರುವುದಕ್ಕೆ ಯುಪಿಎ ಸರ್ಕಾರದ ನೀತಿಗಳೇ ಕಾರಣ: ಆರ್ ಅಶೋಕ್

  • August 27, 2020 at 10:07 pm
    Permalink

    ಈಗ ಮೋಡಿಜಿಯವರ ಸರ್ಕಾರ ಬಂದು 6 ವರ್ಷಗಳು ಆಗಿವೆ ಇಲ್ಲಿಯವರೆಗೆ NDRF ನಿಯಮಗಳಲ್ಲಿ ಬದಲಾವಣೆ ಮಾಡಬಹುದಾಗಿತ್ತಲ್ಲ ಸುಮ್ಮನೆ ಹಿಂದಿನ ಸರಕಾರದ ಮೇಲೆ ಬಟ್ಟು ತೋರಿಸುವದೇಕೆ ಅಲ್ಲದೆ ಈ ತರಹ ಇಂತಹ ಸಂಕಟದ ಸಮಯದಲ್ಲೂ ರಾಜ್ಯ್ ಗಳಿಗೆ ಸೂಕ್ತ ಪರಿಹಾರ ಕೊಡದೇ ಇದ್ದತೆ ಇದು ನಮ್ಮ ಫೆಡೇರಲ್ ವ್ಯವಸ್ಥೆ ಮೇಲೆ ಪರಿಣಾಮ ಬೀರುವದಿಲ್ಲವೇ

    Reply

Leave a Reply

Your email address will not be published.

Verified by MonsterInsights