ಸಾಹುಕಾರ್ ಸಿಡಿ ಕೇಸ್ ಶಂಕಿತರಲ್ಲಿ ಹಲವು ಮಾಜಿ ಪತ್ರಕರ್ತರ ಹೆಸರು..?

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ರಾಜ್ಯದ ಕೆಲ ಜಿಲ್ಲೆಯ ಮಾಜಿ ಪತ್ರಕರ್ತರ ಹೆಸರು ಕೇಳಿ ಬಂದಿದೆ.

ಸಿಡಿ ಹರಿಬಿಟ್ಟ ಪ್ರಕರಣದಲ್ಲಿ ನಾಲ್ವರು ಸಿಡಿ ಸೂತ್ರಧಾರರ ಹೆಸರು ಕೇಳಿಬಂದಿದೆ. ಇವರು ಸಿಡಿ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆನ್ನಲಾಗುತ್ತಿದೆ.

ಇವರನ್ನು ಮಾಜಿ ಪತ್ರಕರ್ತರಾದ ಶ್ರವಣ್, ಲಕ್ಷ್ಮೀಪತಿ, ನರೇಶ್, ಭವಿತ್ ಎಂದು ಗುರುತಿಸಲಾಗಿದೆ. ಇದರಲ್ಲಿ ತಮಕೂರಿನ ಶಿರಾ ತಾಲೂಕಿನ ನಿವಾಸಿ ಮಾಜಿ ಪತ್ರಕರ್ತ ನರೇಶ್ ಪಾತ್ರ ತುಂಬಾ ದೊಡ್ಡದು ಎನ್ನಲಾಗುತ್ತಿದೆ. ಜೊತೆಗೆ ಈತನನ್ನು ನಂಬರ್ ಒನ್ ಆರೋಪಿ ಎನ್ನಲಾಗುತ್ತಿದೆ.

ಸಿಡಿ ಕೇಸ್ ನಲ್ಲಿ ಮಾಜಿ ಪತ್ರಕರ್ತ ಭವಿತ್ ಒಬ್ಬರು. ಇವರು ಚಿಕ್ಕಮಂಗಳೂರಿನ ಅಲ್ದೂರಿನ ದೋಣಗುಡಿ ನಿವಾಸಿಯಾಗಿದ್ದಾರೆ. ಇವರು ಸಿಡಿ ದೃಶ್ಯಗಳನ್ನು ಎಡಿಟ್ ಮಾಡಿ ಹಿನ್ನೆಲೆ ಧ್ವನಿ ಕೂಡ ನೀಡಿದ್ದರು ಎನ್ನಲಾಗುತ್ತಿದೆ. ಇವರು  ಖಾಸಗಿ ವಾಹಿನಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

ಇನ್ನೂ ಮಾಜಿ ಪತ್ರಕರ್ತ ಶ್ರವಣ್, ಪತ್ರಕೆ ಹಾಗೂ ಟಿವಿ ನ್ಯೂಸ್ ಅನುಭವವುಳ್ಳವರಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನುವ ವಿಚಾರ ತಿಳಿಯುತ್ತಿದ್ದಂತೆ ಚಾನಲ್ ನಿಂದ ಇವರನ್ನು. ಕೆಲಸದಿಂದ ತೆಗೆದು ಹಾಕಲಾಗಿದೆ. ಇವರಿಗೆ ಕೆಲವರೊಂದಿಗೆ ಹೆಚ್ಚು ಸಂಪರ್ಕ ಇದ್ದ, ದಿನೇಶ್ ಗೆ ಈತನೇ ಸಿಡಿ ಕೊಟ್ಟಿದ್ದಾನೆ ಎಂದು ಗುಮಾನಿ ಇದೆ. ಮಾತ್ರವಲ್ಲ ಶ್ರವಣ್ ಟೆಕ್ನಿಕಲ್ ತುಂಬಾ ತಿಳಿದುಕೊಂಡಿದ್ದು, ರಷ್ಯಾ ಹೆಸರಿನಲ್ಲಿ ಸಿಡಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಜೊತೆಗೆ ಮಾಜಿ ಪತ್ರಕರ್ತ ಲಕ್ಷ್ಮಿಪತಿ ಕೂಡ ಒಬ್ಬರು. ಇವರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದು ಪ್ರಕರಣದ ಬಳಿಕ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಈ ನಾಲ್ವರು ಮಾಜಿ ಪತ್ರಕರ್ತರ ಮೇಲೆ ಆರೋಪಗಳು ಇದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇವರಲ್ಲಿ ಕೆಲವರು ತಲೆಮರಿಸಿಕೊಂಡಿರುವುದೇ ಹೆಚ್ಚು ಅನುಮಾನಕ್ಕೆ ಕಾರಣವಾಗಿದೆ. ಅನುಮಾನದ ಮೇಲೆ ನೋಟೀಸ್ ನೀಡಿ ಪ್ರತಿನಿತ್ಯ ಇವರ ವಿಚಾರಣೆ ಮಾಡಲಾಗುತ್ತಿದೆ. ಆದರೆ ಎಸ್ಐಟಿ ಆಗಲಿ ಪೊಲೀಸರೇ ಆಗಲಿ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ.

ಇವರಲ್ಲಿ ನರೇಶ್, ಶ್ರವಣ್, ಯುವತಿ ಮೂರು ಜನ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕರೆ ವಿಚಾರಣೆ ಇನ್ನಷ್ಟು ಪುಷ್ಠಿ ದೊರೆಯಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights