ತೆಲುಗು ನಟ ಚಂದ್ರಶೇಖರ್ ಶ್ರೀವಾತ್ಸವ್ ನಿಗೂಢ ಸಾವು; ಆತ್ಮಹತ್ಯೆ ಶಂಕೆ!

ದಕ್ಷಿಣ ಭಾರತದ ಖ್ಯಾತ ನಟ ಧುನುಷ್ ಅವರ ಸ್ನೇಹಿತ, ಸಹನಟನಾಗಿದ್ದ ತೆಲುಗು ಸಿನಿಮಾ ಇಂಡಸ್ಟ್ರಿಯ ನಟ ಚಂದ್ರಶೇಖರ್ ಶ್ರೀವಾತ್ಸವ್ ಅವರು ಸಾವನ್ನಪ್ಪಿದ್ದು, ಕಾರಣಗಳು ನಿಗೂಢವಾಗಿವೆ. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಚಂದ್ರಶೇಖರ್ ಶ್ರೀವಾತ್ಸವ್ ಗುರುವಾರ ಸಾವನ್ನಪ್ಪಿದ್ದು, ಶುಕ್ರವಾರ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ನಟ ಚಂದ್ರಶೇಖರ್ ಶ್ರೀವಾತ್ಸವ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು TV9 ಹಿಂದಿ ವರದಿ ಮಾಡಿದೆ.

ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಶ್ರೀವಾತ್ಸವ್ ಚಿಕಿತ್ಸೆ ಪಡೆಯುತ್ತಿದ್ದರು. ಅವರು ತಮ್ಮ  ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಚಂದ್ರಶೇಖರ್ ಶ್ರೀವಾತ್ಸವ್ 2019ನೇ ವರ್ಷದಲ್ಲಿ ತಮಿಳು ಸೂಪರ್ ಸ್ಟಾರ್ ಧನುಷ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ತಮಿಳಿನ ‘ಎನೈ ನೋಕಿ ಪಾಯೂಮ್ ಥೋಟಾ’ ಚಿತ್ರದಲ್ಲಿ ನಟಿಸಿದ್ದರು. ಇದಲ್ಲದೆ ‘ವಲ್ಲಮಯ್ ತರುವಾಯೊ’ ವೆಬ್ ಸಿರೀಸ್‌ನಲ್ಲೂ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: ರೈತರಿಗೆ ಒಳ್ಳೆಯದಾಗುವುದನ್ನೇ ಮಾಡಬೇಕು: ರೈತ ಪರವಾಗಿ ದನಿಗೂಡಿಸಿದ ನಟ ಸಲ್ಮಾನ್‌ ಖಾನ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights