ಯುಪಿಯಲ್ಲಿ ಪೊಲೀಸರ ಉಪಸ್ಥಿತಿಯಲ್ಲೇ ಕೊಲೆ ಆರೋಪಿ ಸಾವು..!

ಉತ್ತರಪ್ರದೇಶದಲ್ಲಿ ಶಾಲಾ ಶಿಕ್ಷಕನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯೊಬ್ಬನನ್ನು ಇಂದು ಬೆಳಿಗ್ಗೆ ಪೊಲೀಸರ ಸಮ್ಮುಖದಲ್ಲಿ ಥಳಿಸಲಾಯಿತು. ಬಳಿಕ ಆ ವ್ಯಕ್ತಿ ಸಾವನ್ನಪ್ಪಿದ ಘಟನೆ ಪೂರ್ವ ಯುಪಿಯ ಕುಶಿನಗರದಲ್ಲಿ ನಡೆದಿದೆ. ಈ ವೇಳೆ ಬೆಳಕಿಗೆ ಬಂದ ವೀಡಿಯೊವೊಂದರಲ್ಲಿ ಜನಸಮೂಹ ವ್ಯಕ್ತಿಯನ್ನು ಹೊಡೆಯಲು ಕೋಲುಗಳನ್ನು ಬಳಸಿದ್ದು ಕಂಡುಬರುತ್ತದೆ.

ಗಲಭೆಯಲ್ಲಿ ಹಲವಾರು ಪೊಲೀಸರು ಹಾಜರಿದ್ದರು ಮತ್ತು ಕೆಲವರು ದಾಳಿಯನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂತು. ಆದರೆ ಆ ಆರೋಪಿ ವ್ಯಕ್ತಿಯ ತಲೆಗೆ ಬಲವಾದ ಏಟು ಬಿದ್ದು ಜನರ ಹೊಡೆತಗಳಿಂದ ಸಾವನ್ನಪ್ಪಿದ್ದಾನೆ.

ವ್ಯಕ್ತಿ ಗೋರಖ್‌ಪುರದವರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವ್ಯಕ್ತಿ ಇಂದು ತನ್ನ ತಂದೆಯ ಬಂದೂಕನ್ನು ಬಳಸಿ ಶಿಕ್ಷಕನನ್ನು ಗುಂಡಿಕ್ಕಿ ಕೊಂದಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights